Advertisement

ಬೀದಿ ನಾಯಿ ಹಾವಳಿ; ದ್ವಿಚಕ್ರ ಸವಾರರಿಗೆ ಸಂಕಷ್ಟ

11:23 AM Oct 31, 2022 | Team Udayavani |

ಪಣಂಬೂರು: ಪಣಂಬೂರು ಬಳಿಯ ತಣ್ಣೀರುಬಾವಿ ಸಮೀಪ ಹೆದ್ದಾರಿ ಮತ್ತು ಬೀಚಿಗೆ ತೆರಳು ಒಳ ರಸ್ತೆಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚುತ್ತಿದ್ದು, ದ್ವಿಚಕ್ರ ಸವಾರರು ಬಿದ್ದು ಕೈಕಾಲು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

Advertisement

ತಣ್ಣೀರುಬಾವಿ ರಸ್ತೆಯಲ್ಲಿ ಕಳೆದ ವಾರದ ದ್ವಿಚಕ್ರ ಸವಾರರಿಗೆ ನಾಯಿ ಅಡ್ಡ ಬಂದು ಬೈಕ್‌ ಸಮೇತ ಬಿದ್ದು ಗಾಯಗೊಂಡ ಘಟನೆ ಸಂಭವಿಸಿದೆ.

ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸಿ ಅದೇ ಸ್ಥಳಕ್ಕೆ ತಂದು ಬಿಡಲಾಗುತ್ತಿದೆ. ಆದರೆ ನಾಯಿಗಳ ಸಂತಾನ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಪ್ರವಾಸಿಗರಿಗೆ ದೊಡ್ಡ ತಲೆನೋವು

ಪ್ರಾಣಿ ಪ್ರಿಯರು ನಿತ್ಯ ಬಿಸ್ಕತ್ತು, ಅನ್ನ ಮತ್ತಿತರ ತಂಡಿ ಹಾಕುವುದರಿಂದ ಕ್ಲಪ್ತ ಸಮಯಕ್ಕೆ ಎಲ್ಲ ಶ್ವಾನಗಳು ನಿಗದಿತ ಸ್ಥಳದಲ್ಲಿ ಹಾಜರಾಗುತ್ತವೆ. ಮಧ್ಯರಾತ್ರಿಯಾದರೆ ಒಂಟಿ ವಾಹನ, ಪಾದಚಾರಿಗಳನ್ನು ಓಡಿಸಿಕೊಂಡು ಹೋಗುವ ವೇಳೆ ವಾಹನಕ್ಕೆ ಅಡ್ಡ ಬಂದು ಸವಾರರು ಗಾಯಗೊಳ್ಳುತ್ತಿದ್ದಾರೆ.

Advertisement

ಬೀಚ್‌ನ ಮರಳು, ಮರದ ಕೆಳಗೆ ಎಲ್ಲೆಂದರಲ್ಲಿ ಶ್ವಾನಗಳ ಸಮೂಹವೇ ಕಂಡು ಬರುತ್ತಿದ್ದು, ಪ್ರವಾಸಿಗರಿಗೆ ದೊಡ್ಡ ತಲೆನೋವಾಗಿದೆ. ಚಿತ್ರಾಪುರ, ಪಣಂಬೂರು, ತಣ್ಣೀರು ಬಾವಿ ಬೀಚ್‌ಗಳಲ್ಲೂ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಹಾಗಾಗಿ ಸುರಕ್ಷೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಈ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವ ಕಾರಣ ಅವುಗಳಿಗೆ ರೇಬಿಸ್‌ ಲಸಿಕೆ ಹಾಕುವ ಅಭಿಯಾನ ಅಷ್ಟು ಸುಲಭವಲ್ಲ. ಹೀಗಾಗಿ ಶ್ವಾನಗಳ ನಿಯಂತ್ರಣಕ್ಕೆ ಪರ್ಯಾಯ ಕ್ರಮವೊಂದರ ಅಗತ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಚರ್ಚಿಸಿ ಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಂದ ವಾಕಿಂಗ್‌ ಹೋಗುವ ಮಂದಿಗೆ, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ದನಕರುಗಳನ್ನು ಅಟ್ಟಿಸಿಕೊಂಡು ಹೋಗಿ ಕಚ್ಚುತ್ತಿವೆ ಎಂಬ ದೂರು ಕೇಳಿ ಬರುತ್ತಿದೆ. ಇವುಗಳ ನಿಯಂತ್ರಣಕ್ಕೆ ಕ್ರಮ ಹೇಗೆ ಜರಗಿಸಬಹುದು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.  –ಜಯಾನಂದ ಅಂಚನ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next