Advertisement

ಬಾಂಬೆ ಐಐಟಿ ಕ್ಲಾಸ್ ರೂಮ್ ಗೆ ನುಗ್ಗಿದ ಬೀದಿ ದನ…ವೀಡಿಯೋ ವೈರಲ್!

08:32 AM Jul 30, 2019 | Nagendra Trasi |

ಮುಂಬೈ: ಇತ್ತೀಚೆಗಷ್ಟೇ ಬಾಂಬೆಯ ಪ್ರತಿಷ್ಠಿತ ಐಐಟಿಯ ಆವರಣದೊಳಕ್ಕೆ ಜೋಡಿ ಗೂಳಿಗಳು ನುಗ್ಗಿ ರಂಪಾಟ ನಡೆಸಿದ್ದವು. ಅದರ ಮುಂದುವರಿದ ಭಾಗ ಎಂಬಂತೆ ಶನಿವಾರ ಬೀದಿ ದನವೊಂದು ನೇರ ಐಐಟಿಯ ಲೆಕ್ಚರ್ ಹಾಲ್ ಹಾಗೂ ಕ್ಲಾಸ್ ರೂಂನೊಳಗೆ ನುಗ್ಗಿರುವ ವಿಡಿಯೋ ತುಂಬಾ ವೈರಲ್ ಆಗಿದೆ.

Advertisement

ಏಕಾಏಕಿ ಕ್ಲಾಸ್ ರೂಂಗೆ ನುಗ್ಗಿದ ದನ ವಿದ್ಯಾರ್ಥಿಗಳನ್ನು ನೋಡುತ್ತ ಇಡೀ ತರಗತಿಗೆ ಸುತ್ತು ಹೊಡೆಯುತ್ತಿರುವುದನ್ನು ವಿದ್ಯಾರ್ಥಿಗಳು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇದು ನಿಜವಾಗಿಯೂ ಎಲ್ಲಿ ಮತ್ತು ಯಾವಾಗ ನಡೆದ ಘಟನೆಯ ಈ ವಿಡಿಯೋವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಐಎಎನ್ ಎಸ್ ವರದಿ ಮಾಡಿದೆ.

ಜೆಇಇ(Joint entrance Examination)ಯನ್ನು ಪಾಸ್ ಮಾಡದೇ ದನ ಬಾಂಬೆ ಐಐಟಿ  ಕ್ಲಾಸ್ ರೂಂ ಪ್ರವೇಶಿಸಿದೆ ಎಂದು ಟ್ವೀಟರ್ ಬಳಕೆದಾರರೊಬ್ಬರು ಕಾಲೆಳೆದಿದ್ದಾರೆ. 20ಸೆಕೆಂಡುಗಳ ವೀಡಿಯೋ ಕ್ಲಿಪ್ ನಲ್ಲಿ ದನ ಬಾಂಬೆ ಐಐಟಿಯ ಲೆಕ್ಚರ್ ಹಾಲ್ ನೊಳಗೆ ಹಾಗೂ ಕ್ಲಾಸ್ ರೂಂನೊಳಗೆ ನುಗ್ಗಿ ತಿರುಗಾಡುತ್ತಿರುವುದು ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next