Advertisement

ಭುವನೇಶ್ವರದಲ್ಲಿ ಜನರ ನಿದ್ದೆಗೆಡಿಸಿದ ಕರಿ ಬೆಕ್ಕು : 25 ಜನರ ಮೇಲೆ ದಾಳಿ, ಶೋಧ ಕಾರ್ಯ…

12:29 PM Sep 17, 2022 | Team Udayavani |

ಭುವನೇಶ್ವರ : ಬೀದಿ ನಾಯಿಗಳ ದಾಳಿಯಿಂದ ಜನ ರೋಸಿ ಹೋಗಿರುವುದು ಕೇಳಿದ್ದೇವೆ ಆದರೆ ಭುವನೇಶ್ವರದಲ್ಲಿ ಕರಿ ಬೆಕ್ಕೊಂದು ಇಪ್ಪತ್ತೈದು ಜನರ ಮೇಲೆ ದಾಳಿ ನಡೆಸಿ ಸುತ್ತಮುತ್ತಲ ಜನರ ನಿದ್ದೆಗೆಡಿಸಿ ಬಾರಿ ಸುದ್ದಿಯಾಗಿದೆ.

Advertisement

ಒಡಿಶಾದ ರಾಜಧಾನಿ ಭುವನೇಶ್ವರದ ಶಾಸ್ತ್ರಿನಗರ ಪ್ರದೇಶದ ಸುತ್ತಮುತ್ತ ಈ ಘಟನೆ ನಡೆದಿದ್ದು. ಕಳೆದ ಎರಡು ದಿನಗಳಿಂದ ಈ ವಠಾರದಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಜನರ ಮೇಲೆ ಈ ಕರಿ ಬೆಕ್ಕು ದಾಳಿ ನಡೆಸಿದೆಯಂತೆ.

ಇಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಬೆಕ್ಕು ಮಕ್ಕಳು, ಹಿರಿಯರು ಎನ್ನದೆ ಎಲ್ಲರ ಮೇಲೆ ದಾಳಿ ನಡೆಸುತ್ತಿದೆಯಂತೆ ಇದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಇನ್ನೂ ಕೆಲವರು ಕೈಯಲ್ಲಿ ಕೋಲು ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

“ಬುಧವಾರ ಸಂಜೆಯ ವೇಳೆ ಮನೆಯ ಮಾಳಿಗೆಯ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದ ಮಹಿಳೆಯ ಕಾಲಿಗೆ ಕರಿ ಬೆಕ್ಕು ಕಚ್ಚಿ ಪರಾರಿಯಾಗಿದೆ
ಮಹಿಳೆಯ ಕಾಲಿಗೆ ಗಾಯವಾಗಿದೆಎಂದು ಹೇಳಿದ್ದಾರೆ.

ಇದನ್ನೂ ಓದಿ : ನೀರು ಕುಡಿಯಲು ಬಂದಿದ್ದೇ ಈ ಆನೆಗಳ ಜೀವಕ್ಕೆ ಕಂಟಕವಾಯಿತು… ಆದರೆ ಕೊನೆಗೆ ಆಗಿದ್ದೇ ಬೇರೆ

Advertisement

ಅಲ್ಲದೆ 6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಹೋದರನನ್ನು ಶಾಲೆಯಿಂದ ಕರೆತರಲು ಹೋದಾಗ ಬೆಕ್ಕು ಬಾಲಕಿಯ ಕಾಲಿಗೆ ಪರಚಿ ಗಾಯಮಾಡಿದ್ದು, ಆಕೆಯ ತಂದೆ ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಬೆಕ್ಕಿನ ದಾಳಿಯಿಂದ ಕಂಗೆಟ್ಟ ಜನ ಮಹಾನಗರ ಪಾಲಿಕೆಗೆ ದೂರು ನೀಡಿ ಬೆಕ್ಕನ್ನು ಸೆರೆಹಿಡಿಯಲು ಮನವಿ ಮಾಡಿದ್ದಾರೆ ಅದರಂತೆ ಬೆಕ್ಕಿನ ಕಾರ್ಯಾಚರಣೆ ನಡೆಸಿದ ಮಹಾನಗರ ಪಾಲಿಕೆ ಸತತ ಕಾರ್ಯಾಚರಣೆಯ ಬಳಿಕ ಬೆಕ್ಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next