Advertisement

ಸಿಎಂ ಅಮೆರಿಕದಲ್ಲಿದ್ದಾಗ ರೂಪಿಸಿದ ಕಾರ್ಯತಂತ್ರ?

11:02 PM Jul 23, 2019 | Team Udayavani |

ಬೆಂಗಳೂರು: ಅತ್ತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಾಸಗಿಯಾಗಿ ಅಮೆರಿಕ ಪ್ರವಾಸಕ್ಕೆ ಹೋದಾಗಲೇ ಇತ್ತ ಸರ್ಕಾರ ಪತನದ ಮಾಸ್ಟರ್‌ ಪ್ಲ್ರಾನ್‌ನ ನೀಲನಕ್ಷೆ ತಯಾರಾಗಿ ಹದಿನಾರು ದಿನಗಳಲ್ಲಿ ನಾನಾ ಸ್ವರೂಪ ಪಡೆದು ಅಂತಿಮವಾಗಿ ಪತನದ ಹಾದಿ ಹಿಡಿಯಿತು. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬರಲು ಆರು ಬಾರಿ ಹರಸಾಹಸ ಪಟ್ಟು ವಿಫ‌ಲವಾದ ಬಿಜೆಪಿ, ಏಳನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರ “ಛಲ’ಗೆದ್ದಿದೆ.

Advertisement

ಆನಂದ್‌ಸಿಂಗ್‌ ಹಾಗೂ ರಮೇಶ್‌ ಜಾರಕಿಹೊಳಿ ಅವರ ರಾಜೀನಾಮೆಯನ್ನು ನಿರ್ಲಕ್ಷ್ಯ ಮಾಡಿದ ದೋಸ್ತಿ ನಾಯಕರಿಗೆ ನಂತರದ ಶಾಸಕರ ರಾಜೀನಾಮೆ ಪರ್ವ ಆಘಾತವುಂಟು ಮಾಡಿ “ಸಂಧಾನ’ಕ್ಕೆ ಮುಂದಾದರೂ ಪರಿಸ್ಥಿತಿ ಕೈ ಮೀರಿ ಕೈ ಚೆಲ್ಲಿ ಕುಳಿತುಕೊಳ್ಳುವಂತಾಯಿತು. ಒಂದು ಹಂತದಲ್ಲಿ ಹದಿನೈದು ಶಾಸಕರು ತಂಡವಾಗಿ ರಾಜೀನಾಮೆ ನೀಡಿದಾಗ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರೋಕ್ಷ ಕುಮ್ಮಕ್ಕು ಇರಬಹುದು ಎಂಬ ಆರೋಪ ಕೇಳಿ ಬಂದಿತಾದರೂ ಪರಮಾಪ್ತ ಶಾಸಕರು ಅವರಿಗೂ ಚಳ್ಳೆಹಣ್ಣು ತಿನ್ನಿಸಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಎಲ್ಲ ತಂತ್ರಗಾರಿಕೆ ಉಲ್ಟಾ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟಾದರೂ ಸರ್ಕಾರದ ಪತನದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರ ಕುಮ್ಮಕ್ಕು ಇರುವ ಶಂಕೆಯೂ ಇದೆ.

ಮುಖ್ಯಮಂತ್ರಿಯವರು ಅಮೆರಿಕದಲ್ಲಿದ್ದಾಗಲೇ ಸರ್ಕಾರಕ್ಕೆ ಕಂಟಕದ ಬೆಳವಣಿಗೆಗಳು ಆಗುತ್ತಿರುವ ಬಗ್ಗೆ ಗುಪ್ತದಳ ಮೂಲಕ ಮಾಹಿತಿ ಬಂದಿತ್ತು. ಸಚಿವ ಸಾ.ರಾ.ಮಹೇಶ್‌ ಈ ಕುರಿತು ಸಿಎಂಗೆ ಹೇಳಿ ವಾಪಸ್‌ ಹೋಗೋಣ ಎಂದು ಒತ್ತಾಯಿಸಿದ್ದರು. ಆದರೆ, ಮುಖ್ಯಮಂತ್ರಿಯವರು ಬೇಡ, ನಾವು ಇಲ್ಲಿ ಬಂದಿರುವ ಕೆಲಸ ಮುಗಿಸಿ ಹೋಗೋಣ. ಹದಿನಾಲ್ಕು ತಿಂಗಳಿನಿಂದ ಸಾಕಷ್ಟು ಬಾರಿ ಬಿಜೆಪಿಯವರು ಇಂತಹ ಪ್ರಯತ್ನ ಮಾಡಿದ್ದಾರೆ. ಈ ಬಾರಿಯೂ ಅಷ್ಟೇ ಏನೂ ಆಗಲ್ಲ ಎಂದಿದ್ದರು. ಅದೇ ವಿಶ್ವಾಸದಲ್ಲೇ ಇದ್ದರು. ಆದರೆ, ಅಮೆರಿಕದಿಂದ ವಾಪಸ್‌ ಆದಾಗಲೇ ಅವರಿಗೆ ವಾಸ್ತವಾಂಶದ ಅರಿವು ಆಗಿದ್ದು.

Advertisement

Udayavani is now on Telegram. Click here to join our channel and stay updated with the latest news.

Next