ಮಂಡ್ಯ: ಮುಂಬೈನಿಂದ ಬರುತ್ತಿರುವವರಿಂದ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ ಜನ ಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡು ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಶಾಸಕ ಪುಟ್ಟರಾಜು ಒತ್ತಾಯಿಸಿದರು. ಬೆಂಗಳೂರಿನಲ್ಲಿ ಕುಳಿತು ಜಿಲ್ಲೆಯೊಳಗೆ ವ್ಯಾಪಿಸುತ್ತಿರುವ ಕೋವಿಡ್ 19 ಸೋಂಕು ತಡೆಯಲು ಸಾಧ್ಯವಿಲ್ಲ. ಮಂಡ್ಯಕ್ಕೆ ಆಗಮಿಸಿ ಜನಪ್ರ ತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿ ಕೋವಿಡ್ 19 ತಡೆಗೆ ಕಾರ್ಯತಂತ್ರ ರೂಪಿಸಿ ಕೆಲಸ ಮಾಡುವಂತೆ ಸುದ್ದಿ ಗೋಷ್ಠಿಯಲ್ಲಿ ಒತ್ತಾಯಿಸಿದರು.
ಒಂದೇ ದಿನ 62 ಪ್ರಕರಣ: ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಒಂದೇ ದಿನ 62 ಪ್ರಕರಣಗಳು ವರದಿಯಾದ ಉದಾಹರಣೆಯಿಲ್ಲ. ಜಿಲ್ಲೆಯೊಳಗೆ ಕೋವಿಡ್ 19 ಸೃಷ್ಟಿಸುತ್ತಿರುವ ಪರಿಸ್ಥಿತಿಯಿಂದ ಜನರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲಾಡಳಿತ ಮಾಹಿತಿಯನ್ನು ಸಂಪೂರ್ಣಮರೆ ಮಾಚುತ್ತಿದೆ. ಮುಂಬೈನಿಂದ ಈವರೆಗೆ ಎಷ್ಟು ಜನರು ಬಂದಿದ್ದಾರೆ. ಎಷ್ಟು ಜನರು ಬರುವವರಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಆರೋಗ್ಯ ಇಲಾಖೆ ಒಂದು ಮಾಹಿತಿ ನೀಡಿದರೆ ಕಂದಾಯ ಇಲಾಖೆ ಮತ್ತೂಂದು ಮಾಹಿತಿ ನೀಡುತ್ತಿದೆ. ಜಿಲ್ಲಾಡಳಿತ ವಾಸ್ತವ ವರದಿಯನ್ನು ಮುಂದಿಡುವಂತೆ ಆಗ್ರಹಿಸಿದರು.
ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿಗಳು ಸತ್ಯಾಂಶ ಮರೆಮಾ ಚಿದಲ್ಲಿ ಮುಂಬೈನಿಂದ ಆಗಮಿಸುತ್ತಿರುವ ಸೋಂಕಿತರ ಮೂಲಕ ಜಿಲ್ಲೆಯ ಜನರಿಗೂ ಸೋಂಕು ಹರಡುವ ಆತಂಕವಿ ದೆ. ಮೈಸೂರಿನ ಜಿಲ್ಲಾಡಳಿತ ಸೋಂಕು ಹರಡದಂತೆ ಕೈಗೊಂಡಿದ್ದ ಮಾದರಿ ಕ್ರಮಗಳು ಇಲ್ಲಿಯೂ ಜಾರಿಗೊಳಿಸ ಬೇಕು. ಎಂದು ಒತ್ತಾಯಿಸಿದರು.
ಸಿಎಂ ಗಮನ ಹರಿಸಲಿ: ಮುಖ್ಯಮಂತ್ರಿ ಯಡಿಯೂರಪ್ಪನವರು ಪರಿಸ್ಥಿತಿ ಯನ್ನು ಅರಿತು ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ವಹಿಸ ಬೇಕು. ಮಂಡ್ಯ ಜಿಲ್ಲೆಗೆ ಹಿರಿಯ ಐಎಎಸ್ ಅಧಿಕಾರಿಯೊ ಬ್ಬರನ್ನು ಕೋವಿಡ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಮುಂಬೈನಿಂದ ಬರುತ್ತಿರುವವರನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಅಗತ್ಯವಿದೆ. ಮುಂಬೈ ನಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದ್ದು, ಅವರ ಮೇಲೆ ನಿಗಾ ವಹಿಸಿರುವ ಸಿಬ್ಬಂದಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲವೆಂಬ ಬಗ್ಗೆ ದೂರುಗಳಿವೆ. ಜಿಲ್ಲಾ ಮಂತ್ರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕ್ವಾರಂ ಟೈನ್ ವ್ಯವಸ್ಥೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಅವಲೋ ಕನ ನಡೆಸಬೇಕಿದೆ ಎಂದು ಒತ್ತಾಯಿಸಿದರು.