Advertisement
ಬಡತನದಲ್ಲಿ ಹುಟ್ಟಿ ನೂರು ಕೋಟಿ ಲಾಭಗಳಿಸುವ ಉದ್ಯಮವನ್ನು ಕಟ್ಟಿ ಬೆಳೆಸಿದ ಪಿ.ಸಿ.ಮುಸ್ತಾಫ ಎನ್ನುವವರ ಯಶೋಗಾಥೆ ಇದು.
Related Articles
Advertisement
ಓದಿನಲ್ಲಿ ಪಾಪರ್ ಆದವನು ಟಾಪರ್ ಆದ : ಮುಸ್ತಾಫರ ತನ್ನ ಗಣಿತ ಶಿಕ್ಷಕರ ಮಾತು ಗಾಢವಾಗಿ ಪ್ರಭಾವ ಬೀರುತ್ತದೆ. ಏಳನೇ ಕ್ಲಾಸ್ ನಲ್ಲಿ ಉತ್ತಮ ಅಂಕಗಳಿಸಿ ಟಾಪರ್ ಆಗುತ್ತಾರೆ. ಹತ್ತನೇ ತರಗತಿಯ ಪರೀಕ್ಷೆಯಲ್ಲೂ ಟಾಪರ್ ಸ್ಥಾನವನ್ನು ಪಡೆಯುತ್ತಾರೆ. ಆಗಿನ ಫಾರೋಕ್ ಕೋಜ್ಹಿಕೋಡೆ ( ಈಗಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ) ಕ್ಯಾಲಿಕಟ್ ಅಲ್ಲಿ ಕಂಪ್ಯೂಟರ್ ಹಾಗೂ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಮುಸ್ತಾಫರ ಆರ್ಥಿಕ ಸ್ಥಿತಿ ಅರಿತಿದ್ದ ಕಾಲೇಜು ಮಂಡಳಿ ಅವರನ್ನು ಮಧ್ಯಾಹ್ನದ ಉಚಿತ ಊಟ ಹಾಗೂ ಇರಲು ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸುವ ವಿದ್ಯಾರ್ಥಿಗಳ ಪಟ್ಟಿಗೆ ಸೇರಿಸುತ್ತಾರೆ. ಪದವಿಯ ನಂತರ ಮುಸ್ತಾಫ ಅವರಿಗೆ ಅಮೇರಿಕಾದ ಮೊಟೊರೊಲಾ ಎನ್ನುವ ಖಾಸಗಿ ಕಂಪೆನಿ ಬೆಂಗಳೂರಿನಲ್ಲಿ ಉದ್ಯೋಗವನ್ನು ನೀಡುತ್ತದೆ. ಕೆಲ ಸಮಯದ ನಂತರ ಮುಸ್ತಾಫ ಆ ಕೆಲಸವನ್ನು ಬಿಟ್ಟು ಅರಬ್ ದೇಶ ದುಬೈ ಅಲ್ಲಿ ಸಿಟಿ ಬ್ಯಾಂಕ್ ನ ತಾಂತ್ರಿಕ ವಿಭಾಗದಲ್ಲಿ ಏಳು ವರ್ಷ ಕೆಲಸ ಮಾಡುತ್ತಾರೆ. ನಂತರ ನೇರವಾಗಿ ಬೆಂಗಳೂರಿಗೆ ಬಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಎಂ.ಬಿ.ಎ ಪದವಿಯನ್ನು ಕಲಿಯಲು ಆರಂಭಿಸುತ್ತಾರೆ.
ಯಶಸ್ಸಿನ ಮೊದಲ ಹೆಜ್ಜೆ : ಎಂ.ಬಿ.ಎ ಕಲೊಯುವ ಹೊತ್ತಿನಲ್ಲಿ ಮುಸ್ತಾಫರ ಜೊತೆ ಮಾತಿಗೆ ಸಿಗುತ್ತಿದ್ದ ಅವರ ಸಂಬಂಧಿಕರಲ್ಲಿ ಒಬ್ಬರಾಗಿರುವ ಶಮ್ಸಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಹೆಂಗಸರು ದೋಸೆ ತಯಾರಿಸಲು ಹಿಟ್ಟನ್ನು ಪ್ಲಾಸ್ಟಿಕ್ ಕವರಿ ನಲ್ಲಿ ತೆಗೆದುಕೊಂಡು ಹೋಗುತ್ತಿರುವುದನ್ನು ನೋಡುತ್ತಾರೆ. ಆಗ ಶಮ್ಸಿ ಮುಸ್ತಾಫರ ಬಳಿ ಒಳ್ಳೆ ಗುಣಮಟ್ಟದ ದೋಸಾ ಹಿಟ್ಟನ್ನು ಹೇಗೆ ತಯಾರಿಸಬಹುದು ಎಂದು ಕೇಳುತ್ತಾರೆ. ಈ ಪ್ರಶ್ನೆ ಮುಸ್ತಾಫ ಅವರನ್ನು ಕಾಡುತ್ತದೆ. ಮನಸ್ಸು ಏನಾದರೂ ಮಾಡಲು ಪೀಡಿಸುತ್ತದೆ ಅಷ್ಟೇ. ಅಲ್ಲಿಂದ ಶುರುವಾದ ಐಡಿ ಫ್ರೆಶ್ ಫುಡ್ ಪಯಣ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಕೆಲಸ ಬಿಟ್ಟು ಉಳಿದ ಹಣವೇ ಸಾಧನೆಗೆ ಸಾಕಿತ್ತು : ಮುಸ್ತಾಫ ಎಂ.ಬಿ.ಎ ಪದವಿಯ ಮುನ್ನ ಹೋಗುತ್ತಿದ್ದ ಕೆಲಸದಿಂದ ಬಂದ ಹಣವನ್ನು ಉಳಿಸಿಕೊಂಡಿದ್ದರು 25 ಸಾವಿರ ರೂಪಾಯಿ ವೆಚ್ಚದಲ್ಲಿ ಮುಸ್ತಾಫ ಮತ್ತು ಅವರ ಐದು ಸಂಬಂಧಿಕರು 550 ಚದರ ಅಡಿ ಉದ್ದದ ಕೋಣೆಯಲ್ಲಿ ಎರಡು ಎರಡು ಗ್ರೈಂಡರ್, ಮಿಕ್ಸರ್ ಮತ್ತು ಸೀಲಿಂಗ್ ಯಂತ್ರವನ್ನು ಬಳಸಿಕೊಂಡು ಇಡ್ಲಿ ದೋಸೆಯ ಹಿಟ್ಟನ್ನು ತಯಾರಿಸಲು ಆರಂಭಿಸುತ್ತಾರೆ. 2006 ರಲ್ಲಿ ಪ್ರಾರಂಭವಾಗುವ ಈ ಕಾಯಕವನ್ನು ಮುಂದೆ ಮುಸ್ತಾಫ ತನ್ನ ಎಂ.ಬಿ.ಎ ಪದವಿ ಮುಗಿಸಿ 2007 ರಲ್ಲಿ ಐಡಿ ಫ್ರೆಶ್ ಫುಡ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳುತ್ತಾರೆ.
ಮನೆ ಮನ ಮೆಚ್ಚಿದ ಐಡಿ ಫ್ರೆಶ್ : ಇಡ್ಲಿ ದೋಸೆಯ ಹಿಟ್ಟನ್ನು ತಯಾರಿಸಿ ಅದನ್ನು ಮೊದಲು 20 ಅಂಗಡಿಗಳಿಗೆ ತಲಾ ನೂರು ಹಿಟ್ಟಿನ ಪ್ಯಾಕೆಟ್ ಅನ್ನು ಮಾರುವ ಉದ್ದೇಶ ಹೊಂದಿದ್ದ ತಂಡಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ಸಿಗುತ್ತದೆ. ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಮೊದಲ ಸಣ್ಣ ಉದ್ಯಮವನ್ನು ಆರಂಭಿಸುವ ಐಡಿ ಫ್ರೆಶ್ ಇಡ್ಲಿ ದೋಸಾ ಹಿಟ್ಟಿನ ಪ್ಯಾಕೆಟ್ ನೋಡ ನೋಡುತ್ತಿದ್ದಂತೆ ಜನರಲ್ಲಿ ದಿನ ಬಳಕೆಯ ಮೊದಲ ಆಯ್ಕೆ ಆಗಿ ನಿಲ್ಲುತ್ತದೆ.
ವಹಿವಾಟನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಚೆನ್ನೈ ನಗರದಲ್ಲಿ ಐಡಿ ಫ್ರೆಶ್ ಮಾರುಕಟ್ಟೆ ಪ್ರವೇಶ ಮಾಡಲು ಸಿದ್ಧವಾಗುತ್ತದೆ. ಅಲ್ಲಿಯ ಜನರಲ್ಲಿ ಅಡುಗೆ ಸೋಡಾ ಮಿಶ್ರಿತ ಹಿಟ್ಟು ಹೆಚ್ಚು ಆಪ್ತವಾಗಿರುತ್ತದೆ. ಯಾವುದೇ ಮಿಶ್ರಣವಿಲ್ಲದೆ ಶುದ್ದ ಹಿಟ್ಟಿನ ಐಡಿ ಫ್ರೆಶ್ ಚೆನ್ನೈ ಅಲ್ಲಿ ಅಸ್ತಿತ್ವ ಪಡೆಯಲು ಆಗುವುದಿಲ್ಲ. ಆದರೆ ಮುಸ್ತಾಫ ಸೋಲು ಒಪ್ಪಿಕೊಳ್ಳುವುದಿಲ್ಲ.ಮುಂದೆ ತನ್ನ ಐಡಿ ಫ್ರೆಶ್ ಉದ್ಯಮ ಹೈದಾರಬಾದ್ ಚನ್ನೈ, ಮುಂಬಯಿ ನಲ್ಲಿ ಬೆಳೆದು ನಿಲ್ಲುತ್ತದೆ.
ಪ್ರಯತ್ನಕ್ಕೆ ಪ್ರತಿಫಲ ಕೊಟ್ಟ ಹೊಡಿಕೆದಾರರು : 2014 ರಲ್ಲಿ ಹೆಲಿಯನ್ ವೆನ್ ಚರ್ ಸಂಸ್ಥೆ ಮುಸ್ತಾಫರ ವಹಿವಾಟಿನಲ್ಲಿ ಹೊಡಿಕೆ ಮಾಡುತ್ತಾರೆ.ಇದರಿಂದ ಐಡಿ ಫ್ರೆಶ್ ಫುಡ್ ಹೊರದೇಶಕ್ಕೂ ತಲುಪುವಂತೆ ಆಗುತ್ತದೆ. ದುಬೈ ದೇಶದಲ್ಲಿ ಇಂದಿಗೂ ಐಡಿ ಫ್ರೆಶ್ ಫುಡ್ ಗೆ ಪ್ರತ್ಯೇಕವಾದ ಮಾರುಕಟ್ಟೆ ಇದೆ ಅನ್ನುವ ಖುಷಿಯನ್ನು ವ್ಯಕ್ತ ಪಡಿಸುತ್ತಾರೆ ಮುಸ್ತಾಫ.
ಪರೋಟ,ಚಪಾತಿ, ಪನ್ನೀರ್ ನಲ್ಲೂ ಇದೆ ಈ ಐಡಿ ರುಚಿ : 550 ಚದರ ಉದ್ದದ ಜಾಗ ನೋಡು ನೋಡುತ್ತಿದ್ದಂತೆ 15 ಸಾವಿರ ಚದರ ವಿಸ್ತರಣೆಗೊಳ್ಳುತ್ತದೆ ಅಲ್ಲಿಂದ ಇನ್ನೂ ಹೆಚ್ಚು ಬೆಂಗಳೂರಿನ ಹೊಸಕೋಟೆಯಲ್ಲಿ 75 ಸಾವಿರ ಚದರ ಉದ್ದದ ವಿಸ್ತರಣೆವುಳ್ಳ ಜಾಗದಲ್ಲಿ ಐಡಿ ಫ್ರೆಶ್ ಉದ್ಯಮವನ್ನು ನಡೆಸುತ್ತದೆ. ಇಡ್ಲಿ ದೋಸಾ ಹಿಟ್ಟಿನಿಂದ ಆರಂಭವಾದ ಉದ್ಯಮ ಮುಂದೆ ಪರೋಟ,ಚಪಾತಿ,ಮೊಸರು,ವಡ ಹೀಗೆ ಎಲ್ಲಾ ಬಗೆಯ ರುಚಿಯನ್ನು ಜನರಿಗೆ ಪ್ಯಾಕ್ಯೇಜ್ ಮಾಡಿ ಮಾರುಕಟ್ಟೆಗೆ ತಲುಪಿಸಿ ಯಶಸ್ಸುಗಳಿಸುತ್ತದೆ.
25 ಸಾವಿರದಿಂದ ಆರಂಭವಾದ ಉದ್ಯಮ ಇಂದು 100 ಕೋಟಿ ಲಾಭಗಳಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಸಾವಿರಾರು ಬಡ ಜನರಿಗೆ ಮುಸ್ತಾಫ ಕೆಲಸವನ್ನು ನೀಡುತ್ತಿದ್ದಾರೆ.
ಇಂದು ಐಡಿ ಫ್ರೆಶ್ ವಿಶ್ವದ ಯಶಸ್ವಿ ಸ್ಟಾರ್ಟಪ್ ಗಳ ಪಟ್ಟಿಯಲ್ಲಿ ನಿಲ್ಲುವಂಥ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರತಿದಿನ 60 ಕೆ.ಜಿಗೂ ಹೆಚ್ಚಿನ ಹಿಟ್ಟನ್ನು ತಯಾರಿಸಿ ದೇಶ ವಿದೇಶದ ನಾನಾ ಭಾಗದ ಮಾರುಕಟ್ಟೆಗೆ ತಲುಪಿ 5 ಮಿಲಿಯನ್ ಗೂ ಅಧಿಕ ಪ್ಯಾಕೇಜ್ ಐಡಿ ಫ್ರೆಶ್ ಫುಡ್ ಮಾರಾಟವಾಗುತ್ತಿದೆ. ಮುಸ್ತಾಫ ಅವರಿಗೆ ಐಐಎಂ ಬೆಂಗಳೂರಿನಿಂದ “ ಟೈಕೂನ್ಸ್ ಆಫ್ ಟುಮಾರೊ” ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರಕಿವೆ.
ದೇಶ ವಿದೇಶಗಳಿಗೆ ಹೋಗಿ ಮುಸ್ತಾಫ ತಮ್ಮ ಬದುಕಿನ ಯಶೋಗಾಥೆಯನ್ನು ಹಂಚಿಕೊಳ್ಳುತ್ತಿದ್ದಾರೆ.ಎಲ್ಲಾ ವೇದಿಕೆಯಲ್ಲೂ ತನ್ನ ಬಡತನದ ದಿನಗಳನ್ನು ಹೇಳಿಕೊಂಡೇ ತಮ್ಮ ಮಾತನ್ನು ಆರಂಭಿಸುತ್ತಾರೆ.
-ಸುಹಾನ್ ಶೇಕ್