Advertisement

ಕಾಫಿ ಡೇ ಶುರು ಮಾಡಿದ ಕಥೆ…

11:06 AM Jul 31, 2019 | Suhan S |

1996ರಲ್ಲಿ ಬ್ರಿಗೇಡ್‌ ರೋಡ್‌ನ‌ಲ್ಲಿ ಮೊದಲ ಔಟ್‌ಲೆಟ್‌ ಆರಂಭಿಸಿದ್ದ ಕಾಫಿಡೇ ನಾಲ್ಕಾರುವರ್ಷಗಳಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಆದರೆ ಅದರ ಜೊತೆಗೇ ಸಾಲದ ಹೊರೆಯೂ ಇತ್ತು. ಸ್ವಲ್ಪ ಮಟ್ಟಿಗೆ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವುದು ಮತ್ತು ತನ್ನ ಪಾಲಿನ ಹೂಡಿಕೆ ಹೊರೆ ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ 2015ರಲ್ಲಿ ಷೇರು ಮಾರುಕಟ್ಟೆಗೆ ಕಾಲಿಡಲು ಸಿದ್ದಾರ್ಥ ನಿರ್ಧರಿಸಿದ್ದರು.ಆಗ ಸಿಎನ್‌ಬಿಸಿ ಸುದ್ದಿ ವಾಹಿನಿಗೆ ಸಿದ್ಧಾರ್ಥ ನೀಡಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ..

  • ಕಾಫಿ ಬೆಳೆಗಾರರ ಕುಟುಂಬದ ವ್ಯಕ್ತಿಯೊಬ್ಬರು ಕಾಫಿ ಕೆಫೆಯನ್ನು ಆರಂಭಿಸಲು ಉತ್ತೇಜಿಸಿದ ಅಂಶ ಯಾವುದು?:
Advertisement

ನನ್ನ ಕುಟುಂಬ 1870ರಿಂದಲೇ ಕಾಫಿ ಬೆಳೆಯುತ್ತಿತ್ತು. ಹೀಗಾಗಿ ನನಗೆ ಕಾಫಿ ತೋಟದ ಬಗ್ಗೆ ಸ್ವಲ್ಪ ತಿಳಿವಳಿಕೆ ಇತ್ತು. ರಜೆ ಇದ್ದಾಗಲೆಲ್ಲ ನಾನು ಕಾಫಿ ತೋಟದಲ್ಲೇ ಸಮಯ ಕಳೆಯುತ್ತಿದ್ದೆ. ನಾನು ಮುಂಬೈನಲ್ಲಿ ರಿಸರ್ಚ್‌ ಮಾಡುತ್ತಿರುವಾಗ 1985ರಿಂದ ಹಿಂದೆ 15 ವರ್ಷಗಳವರೆಗಿನ ಸರಕುಗಳ ಬೆಲೆಯನ್ನು ಅಧ್ಯಯನ ಮಾಡುತ್ತಿದ್ದೆ. ಅಂತಾರಾಷ್ಟ್ರೀಯ ಕಾಫಿ ಬೆಳೆಗಾರರು ಒಂದು ಪೌಂಡ್‌ ಕಾಫಿಗೆ 1.20 ಡಾಲರ್‌ ಗಳಿಸುತ್ತಿದ್ದರು. ಆದರೆ ಭಾರತದ ಬೆಳೆಗಾರರು ಕೇವಲ 35 ಸೆಂಟ್‌ ಅಂದರೆ 0.35 ಡಾಲರ್‌ ಗಳಿಸುತ್ತಿದ್ದರು ಎಂಬುದು ನನಗೆ ತಿಳಿಯಿತು. ಆಗ ಕಾಫಿ ಖರೀದಿ ಮಾಡುವ ಹಕ್ಕು ಕೇವಲ ಕಾಫಿ ಮಂಡಳಿಗೆ ಮಾತ್ರ ಇತ್ತು. ರೈತರು ಕಾಫಿ ಮಂಡಳಿಗೆ ಕಾಫಿ ಮಾರಿದ ನಂತರ ಕಾಫಿ ಮಂಡಳಿ ಅದನ್ನು ನಂತರ 2-3 ವರ್ಷಗಳಲ್ಲಿ ಮಾರಾಟ ಮಾಡುತ್ತಿತ್ತು. ಅದರ ಹಣ ಕಾಫಿ ಬೆಳೆಗಾರರಿಗೆ ಸಿಗಲೂ 2-3 ವರ್ಷಗಳು ಬೇಕಾಗುತ್ತಿದ್ದವು. 1985-90ರಲ್ಲಿ ನಾನು ಸ್ಟಾಕ್‌ ಮಾರ್ಕೆಟ್‌ನಲ್ಲಿ ಭಾರಿ ಹಣ ಗಳಿಸಿದೆ. ಈ ಹಣದಿಂದ ನಾನು ಆಸ್ತಿ ಖರೀದಿಸಿದ್ದೆ. ಒಂದು ದಿನ ಮಾರುಕಟ್ಟೆ ಮುಕ್ತವಾಗುತ್ತದೆ ಹಾಗೂ ಭಾರತೀಯ ಬೆಳೆಗಾರರೂ 1.20 ಡಾಲರ್‌ ಗಳಿಸುತ್ತಾರೆ ಎಂಬ ವಿಶ್ವಾಸ ನನಗಿತ್ತು. 1993 ರಲ್ಲಿ ನಮ್ಮ ಅಸೋಸಿಯೇಶನ್‌ನ ಕೆಲವರು ಹಣಕಾಸು ಸಚಿವರಾಗಿದ್ದ ಮನಮೋಹನ ಸಿಂಗ್‌ರನ್ನು ಭೇಟಿ ಮಾಡಿದ್ದೆವು.

ಆಗ ಕಾಫಿ ಮಾರುಕಟ್ಟೆ ಮುಕ್ತಗೊಳಿಸುವಂತೆ ಆಗ್ರಹಿಸಿದೆವು. ಅವರು ಈ ನಮ್ಮ ಬೇಡಿಕೆಗೆ ಇಲ್ಲ ಎನ್ನಲಿಲ್ಲ. ಬದಲಿಗೆ ಯಾಕೆ ನೀವು ಮೊದಲೇ ಈ ವಿಚಾರವನ್ನು ನಮ್ಮ ಗಮನಕ್ಕೆ ತರಲಿಲ್ಲ ಎಂದರು. ಅದೇ ದಿನ ನನ್ನ ಕಾಫಿ ಡೇ ಹುಟ್ಟಿತ್ತು.

  • ನಿಮಗೆ ಅಸ್ತಿತ್ವದ ಪ್ರಶ್ನೆ ಕಾಡಿದ್ದರಿಂದ ರಿಟೇಲ್‌ ವಹಿವಾಟಿಗೆ ಇಳಿದಿರಾ?:

ಕಾಫಿ ಮಾರುಕಟ್ಟೆಯನ್ನು ಉದಾರೀಕರಣಗೊಳಿಸಿದ ನಂತರ 1993ರಲ್ಲಿ ನಾವು ಕಾμ ವಹಿವಾಟು ಆರಂಭಿಸಿದೆವು. 1995ರ ವೇಳೆಗೆ ಭಾರತದ ಅತಿದೊಡ್ಡ ರಫ್ತುದಾರರಾಗಿ ಹೊರಹೊಮ್ಮಿದ್ದೆವು. 2 ವರ್ಷಗಳಲ್ಲಿ ದೇಶದ ಅತಿದೊಡ್ಡ ರಫ್ತುದಾರ, ವಹಿವಾಟುದಾರನಾಗುವುದು ಅತ್ಯಂತ ಸುಲಭ. ಮುಂದೊಂದು ದಿನ ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆ ಭಾರತಕ್ಕೆ ಬಂದು ನನ್ನನ್ನು ಓಡಿಸುತ್ತದೆ ಎಂಬುದು ತಿಳಿಯಿತು. ಹೀಗಾಗಿ ನಾನು ರಿಟೇಲ್‌ ವಹಿವಾಟಿಗೆ 1995-96 ರಲ್ಲಿ ಇಳಿದೆ. ಆಗ ನನ್ನ ಸಹೋದ್ಯೋಗಿಗೆ, ನಾನು ಒಂದು ಸ್ಟೋರ್‌ ತೆರೆಯಬೇಕು ಎಂದು ಹೇಳಿದೆ.

  • ಅವರು ಬೇಡ ಎಂದರೇ?: ಬೇಡ.ಯಾಕೆಂದರೆ ಸದ್ಯ ಕಾಫಿಯನ್ನು 5 ರೂ.ಗೆ ಕೊಡುತ್ತಿದ್ದಾರೆ. ನೀವು ಎಷ್ಟು ದರದಲ್ಲಿ ಮಾರುತ್ತೀರಿ? ಎಂದು ಕೇಳಿದರು. 25 ರೂ.ಗೆ ಮಾರುತ್ತೇನೆ ಎಂದು ನಾನು ಹೇಳಿದೆ. ಯಾರು ನಿಮ್ಮ ಸ್ಟೋರ್‌ಗೆ ಕಾಕುಡಿಯಲು ಬರುತ್ತಾರೆ ಎಂದು ನನ್ನನ್ನು ಪ್ರಶ್ನಿಸಿದ್ದರು.
  • ಪ್ರತಿಸ್ಪರ್ಧೆಯಿಂದ ನಿಮ್ಮ ವಹಿವಾಟಿನಲ್ಲಿ ಬದಲಾವಣೆ ಆಯಿತೇ?: 1996ರಲ್ಲಿ ನಾವು ಕೆಫೆ ಶುರು ಮಾಡಿದಾಗ 500-600 ಚದರಡಿಗಿಂತ ದೊಡ್ಡ ಸ್ಥಳವನ್ನು ಬಾಡಿಗೆಗೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದೆವು. ಆದರೆ ಈಗ 1 ಸಾವಿರದಿಂದ 1500ಚದರಡಿ ಸ್ಥಳವನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗ ಅಂತಹ ಸಣ್ಣ ಸ್ಟೋರ್‌ಗಳನ್ನು ಮುಚ್ಚಿ ದೊಡ್ಡ ಸ್ಥಳಗಳಿಗೆ ಶಿಫ್ಟ್ ಆಗುತ್ತಿದ್ದೇವೆ.
Advertisement

Udayavani is now on Telegram. Click here to join our channel and stay updated with the latest news.

Next