Advertisement
ಇಂಥ ನೂರಾರು ಸಾಧಕರು ಪ್ರತಿನಿತ್ಯ ಜಗತ್ತಿನ ನಾನಾ ಭಾಗದಲ್ಲಿ ಹುಟ್ಟುತ್ತಾರೆ. ಆದರೆ ಕೆಲವರು ಬೆಳಕಿಗೆ ಬರಲು ಇಚ್ಛಿಸುವುದಿಲ್ಲ. ಇನ್ನು ಕೆಲವರು ವಿಶೇಷವಾದದ್ದನ್ನು ಸಾಧಿಸುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಇಂಥ ಸಾಧಕರೊಬ್ಬರಲ್ಲಿ ಒಬ್ಬರು ಹೈದರಬಾದ್ ನ ಅಕೆಲ್ಲಾ ರಾಘವೇಂದ್ರ.
Related Articles
Advertisement
ನೂರಾರು ಕನಸು, ಒಬ್ಬನ ಮನಸ್ಸು, ಮುನ್ನುಗ್ಗುವ ಹುಮ್ಮಸ್ಸು :
ಯುಪಿಎಸ್ ಸಿ ಪರೀಕ್ಷೆಯನ್ನು ತಾನು ಪೂರ್ತಿಗೊಳಿಸಿಲ್ಲದಿದ್ರೂ ತನಗೆ ತಿಳಿದಿರುವ ಜ್ಞಾನ ಮಾರ್ಗವನ್ನಾದರೂ ಇನ್ನೊಬ್ಬರಿಗೆ ಕಲಿಸಿಕೊಡುವ ಮಹಾದಾಸೆಯನ್ನು 2003 ರಲ್ಲಿ ರಾಘವೇಂದ್ರ ಅವರು ದಿಲ್ಸುಖ್ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರವನ್ನು ಸ್ಥಾಪಿಸುತ್ತಾರೆ. 30- 35 ವಿದ್ಯಾರ್ಥಿಗಳನ್ನು ತರಬೇತಿ ಕೊಟ್ಟು ಪರೀಕ್ಷೆಗಾಗಿ ತಯಾರಿಗೊಳಿಸುವ ಸಂಸ್ಥೆ ಇದುವರೆಗೆ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿ ಆಗಿ ನಾಗರಿಕ ಸೇವೆ ಪರೀಕ್ಷೆಯನ್ನು ಪೂರ್ತಿಗೊಳಿಸಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಟ್ಟ ಹೆಮ್ಮೆಯನ್ನು ಹೊಂದಿದೆ.
ದೃಷ್ಟಿಹೀನ ಮಕ್ಕಳ ಕನಸಿಗೆ ಬೆಳಕಾದ ಅಕೆಲ್ಲಾ :
ಅಕಿಲ್ಲಾ ಇಂದು ಒಬ್ಬ ಪತ್ರಕರ್ತ ಮಾತ್ರವಲ್ಲ. ಒಬ್ಬ ಶಿಕ್ಷಣ ತಜ್ಞ, ಅಂಕಣಕಾರ, ಸ್ಪೂರ್ತಿದಾಯಕ ಮಾತುಗಾರ, ವೈಯಕ್ತಿಕ ತರಬೇತುದಾರ, ಎಲ್ಲದಕ್ಕಿಂತ ಹೆಚ್ಚಾಗಿ ಅವರು ಮಾಡಿದ ಒಂದು ಕಾರ್ಯ ಇಂದು ಅವರನ್ನು ಎಲ್ಲರೂ ಮೆಚ್ಚಯವಂತೆ ಮಾಡಿದೆ. ಅದುವೇ ನಾಗರಿಕ ಸೇವೆಯಂಥ ಕಠಿಣ ಪರೀಕ್ಷೆಯನ್ನು ಬರೆಯಲು ಹೊರಟಿರುವ ದೃಷ್ಟಿಹೀನ ಹಾಗೂ ದೈಹಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು.
ಅಕೆಲ್ಲಾ ರಾಘವೇಂದ್ರ ಅವರು ಅಮೇರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ದೈಹಿಕವಾಗಿ ದೌರ್ಬಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯನ್ನು ನೋಡುತ್ತಾರೆ. ಇದೇ ಮಾದರಿಯನ್ನು ಭಾರತದಲ್ಲಿ ಅನುಷ್ಠಾನ ಮಾಡುವ ಇರಾದೆಯನ್ನು ಹೊಂದುವ ರಾಘವೇಂದ್ರ ಕೆಲ ಸಮಯದ ಬಳಿಕ ತನ್ನ ಯೋಚನೆಯನ್ನು ಇನ್ನಷ್ಟು ಗಾಢವಾಗಿ ಅನುಸರಿಸಿ ತರುವ ಪ್ರಯತ್ನಕ್ಕೆ ಇಳಿಯುತ್ತಾರೆ.
ದೃಷ್ಟಿಹೀನ ಮಕ್ಕಳಿಗಾಗಿ ರಾಘವೇಂದ್ರ ವಿಶೇಷವಾಗಿ ಏಳು ವರ್ಷ ಅಧ್ಯಯನ ಮಾಡಿ ಬ್ರೈಲ್ ಲಿಪಿಯಿಂದ ವಿಶೇಷ ಮಕ್ಕಳು ನಾಗರಿಕ ಸೇವೆ ಪರೀಕ್ಷೆಗೆ ಓದಲೇ ಬೇಕಾದ 30-35 ಆಡಿಯೋ ಪುಸ್ತಕ ಸಂಗ್ರಹಣೆ ಮಾಡಲು ಆರಂಭಿಸುತ್ತಾರೆ. ಈ ಪ್ರಕ್ರಿಯೆ ಭಾರತದಲ್ಲಿ ಮೊದಲು. ಇದಕ್ಕಾಗಿ ರಾಘವೇಂದ್ರ ತನ್ನ ಸ್ವಂತ ಖರ್ಚಿನಲ್ಲಿ 5 ಲಕ್ಷ ರೂಪಾಯಿಯನ್ನು ವೆಚ್ಚ ಮಾಡಿದ್ದಾರೆ.
ಸದ್ಯ ಅಕೆಲ್ಲಾ ಮತ್ತು ಅವರ ಇಬ್ಬರು ದೃಷ್ಟಿಹೀನ ವಿದ್ಯಾರ್ಥಿಗಳಾದ ಸಾಗರ್ ಮತ್ತು ಶಿವಪ್ರಕಾಶ್ ಅವರೊಂದಿಗೆ ಈಗ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಇವರ ತರಬೇತಿ ಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಹೆಚ್ಚಾಗಿ ಬಡ ಕುಟುಂಬದ ಹಿನ್ನಲೆಯವರು. ದೃಷ್ಟಿಹೀನ ಹಾಗೂ ಅತ್ಯಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯದೊಂದಿಗೆ ನಾಗರಿಕ ಸೇವಾ ತರಬೇತಿಯನ್ನು ನೀಡುತ್ತಿದ್ದಾರೆ.
‘ಇ – ಗುರುಕುಲ‘ ವ್ಯವಸ್ಥೆ :
ಅಕಿಲ್ಲಾ ರಾಘವೇಂದ್ರ ಅಳವಡಿಸುವ ಪಠ್ಯ ಕ್ರಮ ಪ್ರಸಕ್ತ ಕಲಿಕಾ ವ್ಯವಸ್ಥೆಯ ಮಾದರಿಗೆ ಹತ್ತಿರವಾದದು. ವಿದ್ಯಾರ್ಥಿಗಳ ಜೊತೆ ಆನ್ಲೈನ್ ನಲ್ಲಿ ಹೆಚ್ಚು ಸಮಯ ಕಳೆಯುವ ಅಕಿಲ್ಲಾ ಆನ್ಲೈನ್ ನಲ್ಲಿ ಬೇಕಾಗುವ ಪ್ರಶ್ನೆ ಹಾಗೂ ಕಲಿಕಾ ಮಾರ್ಗವನ್ನು ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಕಳುಹಿಸಿದ ಹೋಮ್ ವರ್ಕ್ ಅನ್ನು ಫೋಟೋ ಸಮೇತ ಬೆಳಗ್ಗೆ 11 ಗಂಟೆಯ ಒಳಗೆ ಕಳುಹಿಸಲು ಹೇಳುತ್ತಾರೆ. ಈ ರೀತಿಯ ಇ- ಗುರುಕುಲ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಹೆಚ್ಚು ಲವಲವಿಕೆಯಿಂದ ಕಲಿಯುತ್ತಾರೆ ಅನ್ನುವುದು ರಾಘವೇಂದ್ರ ಅವರ ಅಭಿಪ್ರಾಯ.
ಇಂದು ರಾಘವೇಂದ್ರ ದೇಶ ವಿದೇಶಗಳನ್ನು ಸುತ್ತಿ, ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಾರೆ, ಲೇಖಕನಾಗಿ ಪುಸ್ತಕಗಳನ್ನು ಬರೆದಿದ್ದಾರೆ, ಪತ್ರಕರ್ತನಾಗಿ ಸಮಾಜದ ಓರ-ಕೋರೆಗಳನ್ನು ತಿದ್ದಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯ ಆಶಾ ದೀಪವನ್ನು ಹೊತ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂಧ ಮಕ್ಕಳ ಬಾಳಿನ ಕನಸಿಗೆ ಬಣ್ಣಗಳನ್ನು ಪಸರಿಸುತ್ತಿದ್ದಾರೆ..
-ಸುಹಾನ್ ಶೇಕ್