Advertisement
ಚಿಕ್ಕೋಡಿ: ರಾಜ-ಮಹಾರಾಜರ ಆಸ್ಥಾನದಲ್ಲಿ ಯುದ್ಧ ಆರಂಭ ಮತ್ತು ಮುಕ್ತಾಯ ಸಂದರ್ಭದಲ್ಲಿ ಹಾಗೂ ಇಂದಿಗೂ ಧಾರ್ಮಿಕ, ಸಾಂಸ್ಕೃತಿಕ, ಜಾತ್ರೆ, ಉತ್ಸವದಲ್ಲಿ ಬಳಕೆ ಮಾಡುವ ಕೊಂಬು ಕಹಳೆ ವಾದ್ಯದ ಸದ್ದು ಕೋವಿಡ್‌ದಲ್ಲಿ ನಿಂತು ಹೋಗಿದೆ.
Related Articles
Advertisement
ಬಳುವಳಿಯಾಗಿ ಬಂದ್ ಕಸುಬು: ಚಿಕ್ಕೋಡಿಯ ಝಾರಿಗಲ್ಲಿಯ ನಿವಾಸಿ ಅಬ್ದುಲ್ ಕರೀಂ ಹುಸೇನಸಾಬ್ ಕಲೈಗಾರ ಕಹಳೆ ತಯಾರಿಕೆ ಕಲೆಯನ್ನು ಆರಂಭಿಸಿ, ಕುಟುಂಬಕ್ಕೆ ಬಳುವಳಿಯಾಗಿ ನೀಡಿದ್ದಾರೆ. ಈಗಲು ಕುಟುಂಬದವರು ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಹಿಂದೂ ಧರ್ಮದ ಕಾರ್ಯಕ್ರಮಗಳಲ್ಲೇ ಹೆಚ್ಚಾಗಿ ಬಳಸಲಾಗುವ ಕಹಳೆಯನ್ನು ಮುಸ್ಲಿಂ ಕುಟುಂಬವೊಂದು ಅತ್ಯಂತ ಶ್ರದ್ಧೆಯಿಂದ ತಯಾರಿಸುತ್ತಿರುವುದು ವಿಶೇಷವಾಗಿದೆ.
ಮಕ್ಕಳಿಗೂ ಕಹಳೆ ತಯಾರಿಸುವ ಕಲೆಯನ್ನು ಕಲಿಸುತ್ತಿದ್ದೇವೆ. ಇದರಲ್ಲಿ ಲಾಭನಷ್ಟದ ಪ್ರಶ್ನೆ ಇಲ್ಲ. ಜೀವನ ಸಾಗುತ್ತದೆ, ಸಾಕು. ನಮ್ಮ ಅಜ್ಜ ಮುತ್ತಜ್ಜರ ಕಾಲದಿಂದ ಬೆಳೆದು ಬಂದಿರುವ ಈ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಕಲೈಗಾರ ಕುಟುಂಬ.
ಕರ್ಣಾನಂದ ಸ್ವರ: ಇಂತಹ ಕಹಳೆಯೊಂದನ್ನು ರೂಪಿಸಲು ವಿಶೇಷವಾದ ನಿಪುಣತೆ ಮತ್ತು ಪರಿಶ್ರಮ ಬೇಕು. ಮಾರುದ್ದದ ಕಹಳೆಯ ಹಿಂಬದಿಯ ಕಿರಿದಾದ ತೂತಿನಲ್ಲಿ ದಮ್ಮು ಕಟ್ಟಿ ಉಸಿರು ಬಿಗಿಹಿಡಿದು ಊದಿದರೆ ಕರ್ಣಾನಂದ ಸ್ವರ ಹೊರಹೊಮ್ಮುತ್ತದೆ. ವಿಶೇಷವೆಂದರೆ ಕಹಳೆ ತಯಾರಿಸಲು ಇವರು ಯಾವುದೇ ಯಂತ್ರದ ಬಳಕೆ ಮಾಡಿಕೊಳ್ಳುವುದಿಲ್ಲ. ತಾಮ್ರದ ಹಾಳೆಯನ್ನು ಬೇಕಾದ ಆಕಾರ ಗಾತ್ರಕ್ಕೆ ತಗ್ಗಿಸಿ, ಬಗ್ಗಿಸಿ ಅತ್ಯಾಕರ್ಷಕವಾದ ಕಹಳೆ ತಯಾರಾಗುತ್ತದೆ.