Advertisement
Related Articles
Advertisement
ಇದು ಎಷ್ಟು ಸುಲಭವೋ ಅಷ್ಟೇ ಕ್ಲಿಷ್ಟ. ಹಕ್ಕಿ ಪ್ರಿಯರ, ಛಾಯಾಗ್ರಾಹಕರ ಪರಿಣತಿ, ಕುಶಲತೆ, ಕ್ಯಾಮರಾದ ಮೇಲಿನ ಹಿಡಿತಕ್ಕೆ, ಪರೀಕ್ಷೆಗೆ ಒಂದು ಸವಾಲು. ರಾಜಸ್ಥಾನ ಒಂದನ್ನು ಬಿಟ್ಟು ಭಾರತದ ತುಂಬೆಲ್ಲಾ ಇದೆ. ಕುಮಟಾ, ಮೂರೂರು, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಗುಡವಿ, ಮಾಸೂರು, ತದಡಿ, ಬಾಡ, ಹೆಗಡೆ, ಬಡಾಳ ಈ ಭಾಗದಲ್ಲಿ ನೀರು ಹರಿವ ಅಘನಾಶಿನಿ ನದಿಯ ಗುಂಟ ಹೆಚ್ಚುಚ್ಚು ಕಾಣಬಹುದು. ಮೀನು, ಏಡಿ, ಕಪ್ಪೆ$ ಹಾವು, ಕೆಲವೊಮ್ಮೆ ಹಕ್ಕಿಗಳ ಮೊಟ್ಟೆ ಮರಿಗಳನ್ನೂ ಕಬಳಿಸುತ್ತದೆ. ಬೆಳ್ಳಕ್ಕಿ, ಐಬೀಸ್, ಬಕ, ಕೊಕ್ಕರೆಗಳಿರುವ ಭತ್ತದ ಗದ್ದೆಗಳ ಸಮೀಪದ ನೀರಿನ ಹರಿವಿನ ಹತ್ತಿರ ಇದು ಇದ್ದೇ ಇರುತ್ತದೆ. ಜನವರಿಯಿಂದ ಜುಲೈ ಇದು ಮರಿಮಾಡುವ ಸಮಯ. ನದಿಗಳ ಅಂಚಿನ ಗೋಡೆಗಳಲ್ಲಿ ಭೂಮಿಗೆ ಸಮಾನಾಂತರದಲ್ಲಿ ಬಿಲ ಕೊರೆದು ಗೂಡು ಮಾಡುತ್ತದೆ. ನನಗೆ ಸಿಕ್ಕ ಗೂಡು ಭೂಮಿಯಿಂದ ಒಂದೂವರೆ ಫೂಟ್ ಎತ್ತರದದಲ್ಲಿತ್ತು. ಗೂಡಿನ ಆಳ 12 ಇಂಚು ಇತ್ತು, ಮುಂದೆ ಹೋದಂತೆ ಮೇಲ್ಮುಖವಾಗಿತ್ತು. ಇದು ಇಂಗ್ಲೀಷಿನ ಟಿ ಅಕ್ಷರದ ಆಕಾರದಲ್ಲಿತ್ತು. ತಲೆ ಅಗಲ 10 ಇಂಚು ಇತ್ತು. 4-5 ಬಿಳಿ ಹೊಳೆವ ಅಂಡ ವರ್ತುಲಾಕಾರದ ಮೊಟ್ಟೆ ಇಡುತ್ತದೆ. ನನಗೆ ಸಿಕ್ಕ ಗೂಡಿನಲ್ಲಿ 3 ಮೊಟ್ಟೆ ಇತ್ತು. ಮೂರೂ ಮರಿಯಾದಾಗ ಆ ಗೂಡಿನಲ್ಲಿ ಇರುವೆ ಹಾಗೂ ಇರುವೆಯ ಮೊಟ್ಟೆಗಳಿರುವುದು ಕಂಡುಬರುತ್ತದೆ. ಹೆಣ್ಣು-ಮರಿಗಳಿಗೆ ಹೆಚ್ಚು ಸಮಯ ಆಹಾರ ಪೂರೈಸುತ್ತಿರುವುದು ಗಮನಕ್ಕೆ ಬಂದಿದೆ. ಗಂಡು ಮರಿಗಳ ರಕ್ಷಣೆಗೆ ದೂರದಲ್ಲಿ ಕುಳಿತು ಕಾವಲು ಕಾಯುವುದು. ಯಾರಾದರೂ ಗೂಡಿನ ಸಮೀಪ ಬಂದರೆ ಇತರ ಪಕ್ಷಿಗಳು ಬಂದರೆ ತನ್ನ ಕೂಗಿನಿಂದ ಹೆಣ್ಣಿಗೆ ಸೂಚನೆ ನೀಡುತ್ತದೆ. ಹೀಗೆ ಮರಿಗಳ ರಕ್ಷಣೆ ಜವಾಬ್ದಾರಿ ಗಂಡಿನದು. ಗಂಡು ಹೆಣ್ಣು ಎರಡೂ ಮರಿಗಳ ಪೋಷಣೆ ಪಾಲನೆಯಲ್ಲಿ ಭಾಗಿಯಾದರೂ ಹೆಚ್ಚು ಮರಿಗಳಿಗೆ ಆಹಾರ, ಗುಟುಕು ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಹೆಣ್ಣು ಹಕ್ಕಿಯೇ.
ಭಾರತ ಹಾಗೂ ವಿದೇಶದಲ್ಲೂ ಇದರ ಬೇರೆ ಬೇರೆ ತಳಿಗಳಿವೆ. ಇದರ ಬಣ್ಣ ಹಾಗೂ ಆಕಾರಗಳು ಆಹಾರ ವೈವಿಧ್ಯತೆಯಿಂದ ಬೇರೆ ಬೇರೆ ಗುಂಪಾಗಿ ವಿಂಗಡಿಸಲಾಗಿದೆ. ಆದರೆ ಸ್ವಭಾವದಲ್ಲಿ ಏಕಸೂತ್ರತೆ ಇದೆ. ಇಂಥ ಚಲುವಿನ ಬಣ್ಣದ ಹಕ್ಕಿಗಳ ಅಧ್ಯಯನ ಅವಶ್ಯ ಹಾಗೂ ಸಂತಸ ನೀಡುವಂತದ್ದು. ಅದರ ಜೀವನ ಕ್ರಮ, ಸ್ವಭಾವ, ಮರಿಗಳ ಕುರಿತು ಕಾಳಜಿ, ವೈರಿಗಳಿಂದ ಮರಿಗಳ ರಕ್ಷಣೆಗೆ ಅವು ಕೈಗೊಳ್ಳುವ ಕ್ರಮ. ಈ ಹಕ್ಕಿ ವಯಸ್ಸಾದಂತೆ ಚುಂಚು ರೆಕ್ಕೆಗಳ ಬಣ್ಣ ಮಾಸುವುದು. ಇದಕ್ಕೆ ಕಾರಣ ತಿಳಿದಿಲ್ಲ. ಚಿಕ್ಕ ಕೀಟಾಣುಗಳ ಉಪಟಳವೋ ಎಂಬುದು ತಿಳಿಯಬೇಕಾಗಿದೆ. ಪಿ. ವಿ. ಭಟ್ ಮೂರೂರು