ಲಕ್ನೋ: ಮನುಷ್ಯನ ಒಡನಾಟಕ್ಕೆ ಸಿಕ್ಕ ಪ್ರಾಣಿ-ಪಕ್ಷಿಗಳು ಮಾನವನ ಜೀವನಶೈಲಿಗೆ ಬಹುಬೇಗ ಹೊಂದಿಕೊಳ್ಳಬಲ್ಲವು. ಆದರೆ ಕಾಲಾಂತರದಲ್ಲಿ ಮತ್ತದೇ ಕಾಡಿನ ಬದುಕಿಗೆ ಹೊಂದಿಕೊಳ್ಳಲು ಪರದಾಡಬೇಕಾಗುತ್ತದೆ. ಅಂಥದ್ದೇ ಸಮಸ್ಯೆಗೆ ಸಿಲುಕಿದ್ದ ಉತ್ತರ ಪ್ರದೇಶದ ಸಾರಸ್ ಕೊಕ್ಕರೆ, ಈಗೀಗ ಮ್ಯಾಗಿ ತಿನ್ನುವುದನ್ನು ಬಿಟ್ಟು ತನ್ನ ಆಹಾರ ತಿನ್ನುವುದನ್ನು ರೂಢಿಸಿಕೊಂಡಿದೆ.
ಮೊಹಮ್ಮದ್ ಆರಿಫ್ ಅವರ ಆರೈಕೆಯಲ್ಲಿ ಬೆಳೆದ ಸಾರಸ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕೊಂಡೊಯ್ದಿದ್ದರು. ಆರಿಫ್ ಮನೆಯಲ್ಲಿ ಮ್ಯಾಗಿ, ದಾಲ್-ಕಿಚಡಿ ಸೇರಿದಂತೆ ಬೇಯಿಸಿದ ಆಹಾರ ತಿನ್ನುತ್ತಿದ್ದ ಸಾರಸ್‌ಗೆ ತನ್ನ ಮೂಲ ಆಹಾರ ಪದ್ಧತಿಯೇ ಮರೆತು ಹೋಗಿತ್ತು. ಈಗ ಅರಣ್ಯಾಧಿಕಾರಿಗಳು ಸಾರಸ್‌ಗೆ ಕಾಡಿನ ಜೀವನಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಿದ್ದಾರೆ.