Advertisement

ಕಡೂರು ಪಟ್ಟಣದಲ್ಲಿ ಮನೆಯಲ್ಲಿಯೇ ಗಾಂಜಾ ದಾಸ್ತಾನು: ತಂದೆ-ಮಗಳ ಬಂಧನ

02:22 PM Sep 25, 2020 | keerthan |

ಚಿಕ್ಕಮಗಳೂರು: ಮನೆಯಲ್ಲಿಯೇ ಗಾಂಜಾ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ತಂದೆ ಮಗಳನ್ನು ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.

Advertisement

ವಿಜಯಮ್ಮ (40), ಜಯಣ್ಣ (65) ಬಂಧಿತ ಆರೋಪಿಗಳು. ಇವರುಗಳು ಮನೆಯಲ್ಲಿಯೇ ಗಾಂಜಾ ದಾಸ್ತಾನು ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ಜಿಲ್ಲೆಯ ಕಡೂರು ಪಟ್ಟಣದ ಈದ್ಗಾ ನಗರದ ಮನೆಗೆ ಕಡೂರು ಪಿಎಸ್ಐ ವಿಶ್ವನಾಥ್ ನೇತೃತ್ವದಲ್ಲಿ ದಾಳಿ ಮಾಡಿದಾಗ ಆರೋಪಿಗಳು ಮಾಲು ಸಹಿತ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 960 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next