Advertisement

ಕಾನೂನು ತಜ್ಞರ ವರದಿ ಮೇರೆಗೆ ಅಂಗಡಿ ಇ ಹರಾಜು

03:34 PM Feb 23, 2021 | Team Udayavani |

ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆಗೆ ಸೇರಿದ ಅಂಗಡಿಗಳನ್ನು ಇ ಹರಾಜು ಮಾಡುವ ಬಗ್ಗೆಸ್ಥಳದಲ್ಲಿಯೇ ತೀರ್ಮಾನ ತೆಗೆದುಕೊಳ್ಳು ವುದಿಲ್ಲ. ಜನಪ್ರತಿನಿಧಿಗಳ ಮತ್ತು ಕಾನೂನು ತಜ್ಞರ ವರದಿ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.

Advertisement

ನಗರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಎಂ.ಜಿ.ಮಾರುಕಟ್ಟೆ ಮತ್ತು ಆಂಡರಸನ್‌ಪೇಟೆಯ ಮಾರುಕಟ್ಟೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ವರ್ತಕರ ಜೊತೆ ಮಾತನಾಡಿದರು.

ಏನಾದರೂ ಆಗಬಹುದು: ನಂತರ ನಗರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಎರಡು ಗಂಟೆ ಮಾರುಕಟ್ಟೆಯಲ್ಲಿ ಓಡಾಡಿಕೊಂಡು ಬಂದಿದ್ದೇನೆ. ಅವರ ಮಾತುಗಳನ್ನು ಆಲಿಸಿದ್ದೇನೆ. ಮಾನವೀಯತೆ ದೃಷ್ಟಿ ಯಿಂದ ನೋಡಬೇಕಾಗಿದೆ.ಆದರೆ ಈಗಲೇ ಏನು ಆಶ್ವಾಸನೆ ನೀಡುವುದಕ್ಕೆ ಆಗುವುದಿಲ್ಲ. ಸಂಸದರು, ಶಾಸಕರು ಮತ್ತು ಕಾನೂನು ತಜ್ಞರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ಇ ಹರಾಜಿನಲ್ಲಿ ಈಗಾಗಲೇ ಅಂಗಡಿಯಲ್ಲಿ ಇರುವವರು ಶೇ.3 ರಿಂದ 5 ರಷ್ಟು ಹಣ ಹೆಚ್ಚುವರಿ ಕಟ್ಟಿ, ಅಂಗಡಿಗಳನ್ನು ಮರಳಿ ಪಡೆಯುವ ಅವಕಾಶ ಇದೆ ಎಂದರು.

ಕಳಪೆ ಕಾಮಗಾರಿ: ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಗರಸಭೆ ಕಾಮಗಾರಿ ಗುಣಮಟ್ಟ ಕೆಟ್ಟದಾಗಿದೆ. ಅಮೃತ ಸಿಟಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಜಲಮಂಡಳಿ ಮತ್ತು ನಗರಸಭೆ ನಡೆಸಿರುವ ಕಾಮಗಾರಿ ಬಗ್ಗೆ ತನಿಖೆ ನಡೆಸುತ್ತೇನೆ ಎಂದರು.

ಇಲ್ಲಿನವರಿಗೆ ನೀಡಿ: ಎಂ.ಜಿ.ಮಾರುಕಟ್ಟೆಯ ವರ್ತಕರ ಬಗ್ಗೆ ಮಾತನಾಡಿದ ಅವರು, ಕೋಲಾರದಲ್ಲಿ ನಡೆದ ಹರಾಜು ಪ್ರಕ್ರಿಯೆ ಇಲ್ಲಿ ಆಗಬಾರದು. ಇಲ್ಲಿನ ಮಾರುಕಟ್ಟೆಯಲ್ಲಿರುವ ವರ್ತಕರಿಗೆ ಅಂಗಡಿ ನೀಡಬೇಕು ಎಂದು ಮನವಿ ಮಾಡಿದರು.

Advertisement

ವಿಶೇಷ ಪ್ರಕರಣವಾಗಿ ಪರಿಗಣಿಸಿ: ಶಾಸಕಿ ಎಂ. ರೂಪಕಲಾ ಕೂಡ ಮನವಿ ಮಾಡಿ, ವರ್ತಕರು ಸ್ವಂತಖರ್ಚಿನಿಂದ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ವಿಶೇಷ ಪ್ರಕರಣ ಎಂದು ಭಾವಿಸಿ ಅಂಗಡಿಗಳನ್ನು ನೀಡಬೇಕು ಎಂದರು. ವಿಧಾನಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌, ಸದಸ್ಯರುಗಳಾದ ಎಸ್‌.ರಾಜೇಂದ್ರನ, ರಮೇಶ್‌ ಕುಮಾರ್‌ ಮಾತನಾಡಿದರು. ಯೋಜನಾಧಿಕಾರಿ ರಂಗಸ್ವಾಮಿ ಮತ್ತು ನಗರಸಭೆ ಆಯುಕ್ತೆ ಸರ್ವರ್‌ ಮರ್ಚೆಂಟ್‌ ಮಾಹಿತಿ ನೀಡಿದರು.

14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ನಗರಸಭೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿಕಾವೇರಿ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ಉಪಾಧ್ಯಕ್ಷೆ ದೇವಿ ಗಣೇಶ್‌, ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್‌ ಕೆ.ಎನ್‌.ಸುಜಾತ ಇದ್ದರು.

ಪೊಲಿಸರಿಗೆ ತರಾಟೆ :

ಸಚಿವ ಎಂಟಿಬಿ ನಾಗರಾಜ್‌ ಅವರನ್ನು ಸ್ವಾಗತಿಸುವ ನೆಪದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಬಲಾಬಲ ಪ್ರದರ್ಶನ ಮಾಡಿದವು. ತಳ್ಳಾಟ ಮತ್ತು ನೂಕಾಟ ನಡೆಯಿತು. ಮಾರುಕಟ್ಟೆ ಪ್ರವೇಶ ಮಾಡಲು ಯತ್ನಿಸಿದ ಶಾಸಕಿ ರೂಪಕಲಾ ಅವರನ್ನು ತಳ್ಳಾಡಲಾಯಿತು. ಇದರಿಂದ ಕುಪಿತಗೊಂಡ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಚಿವರೇ ಸಮಾಧಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next