ಚಿತ್ರದುರ್ಗ: ಸರ್ಕಾರದ ಮಾರ್ಗಸೂಚಿ ಇದ್ದಾಗ್ಯೂಕಳೆದ ಎರಡು ದಿನಗಳಿಂದ ವ್ಯಾಪಾರ ವಹಿವಾಟುನಡೆಸುತ್ತಲೇ ಇದ್ದ ಅಂಗಡಿ ಮುಂಗಟ್ಟುಗಳನ್ನು ನಗರಸಭೆಅ ಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರಸಂಪೂರ್ಣ ಬಂದ್ ಮಾಡಿಸಿದರು.
ಬೆಳಗ್ಗೆಯೇ ಬೀದಿಗಿಳಿದ ನಗರಸಭೆ ಅ ಧಿಕಾರಿಗಳತಂಡ ಹಾಗೂ ಪೊಲೀಸರು ನಗರದ ಬಿ.ಡಿ. ರಸ್ತೆ, ಗಾಂ ಧಿವೃತ್ತ, ಮೆದೇಹಳ್ಳಿ ವೃತ್ತ, ದಾವಣಗೆರೆ ರಸ್ತೆ, ಹೊಳಲ್ಕೆರೆರಸ್ತೆ ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ಅಗತ್ಯವಲ್ಲದವಸ್ತುಗಳ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಅಂಗಡಿಮಾಲೀಕರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು.
ಲಕ್ಷ್ಮೀ ಬಜಾರ್‌ನಲ್ಲಿ 11 ಗಂಟೆಯಾದರೂಬಟ್ಟೆ ಅಂಗಡಿಗಳು, ಫ್ಯಾನ್ಸಿ, ಮೊಬೈಲ್ ಮತ್ತಿತರೆಅಂಗಡಿಗಳು ತೆರೆದಿರುವುದು ತಿಳಿಯುತ್ತಿದ್ದಂತೆ ಅಲ್ಲಿಗೆಧಾವಿಸಿದ ಪೊಲೀಸರು ಮತ್ತು ಅಧಿ ಕಾರಿಗಳ ತಂಡಪ್ರತಿ ಅಂಗಡಿಯನ್ನೂ ಮುಚ್ಚಿಸಿ ಅಲ್ಲಿದ್ದ ಕೆಲಸಗಾರರನ್ನುಮನೆಗೆ ಕಳಿಸಿದರು.ಕೋವಿಡ್ ಎರಡನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರ ದಿನಸಿ, ಹೋಟೆಲ್, ಮೆಡಿಕಲ್‌ಶಾಪ್ ಸೇರಿದಂತೆ ಅತೀ ಅಗತ್ಯದ ವಸ್ತುಗಳಿಗೆ ಮಾತ್ರವ್ಯಾಪಾರಕ್ಕೆ ಅನುವು ಮಾಡಿಕೊಟ್ಟು, ಉಳಿದೆಲ್ಲವನ್ನೂಬಂದ್ ಮಾಡಲು ಸೂಚಿಸಿದೆ.
ಆದರೂ, ತೆರೆದಿದ್ದಅಂಗಡಿಗಳನ್ನು ಮುಚ್ಚಿಸುವ ವೇಳೆ ಕೆಲವರು ವಾಗ್ವಾದನಡೆಸಿದರು.ಸರ್ಕಾರ ಅಧಿಕೃತ ಲಾಕ್‌ಡೌನ್ ಘೋಷಣೆಮಾಡದಿದ್ದರೂ, ಅ ಧಿಕಾರಿಗಳು, ಪೊಲೀಸರುಬೀದಿಗಿಳಿದು ಎಲ್ಲವನ್ನೂ ಬಂದ್ ಮಾಡಿಸುವ ವೇಳೆಲಾಕ್‌ಡೌನ್ ಮಾಡಿದಂತೆಯೇ ಆಗುತ್ತಿದೆ ಎಂದುಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಾಸ್ಕ್ ಹಾಕದವರಿಗೆ ದಂಡ: ನಗರದಲ್ಲಿ ಸಂಚರಿಸುವಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.ಇಲ್ಲದಿದ್ದರೆ ಪೊಲೀಸರು ಹಾಗೂ ನಗರಸಭೆ ಅಧಿ ಕಾರಿಗಳುದಂಡ ವಿಧಿ ಸಲಿದ್ದಾರೆ. ಕಳೆದ ನಾಲ್ಕು ದಿನದಿಂದ ಮಾಸ್ಕ್ಹಾಕದವರಿಗೆ ದಂಡ ವಿಧಿ ಸುತ್ತಿದ್ದು, ಶುಕ್ರವಾರ ನಗರಸಭೆಅ ಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿ 4ಸಾವಿರ ರೂ. ದಂಡದ ಮೊತ್ತ ಸಂಗ್ರಹಿಸಿದ್ದರು.