Advertisement

Campco : ಅಡಿಕೆ ಕಳ್ಳಸಾಗಣೆಗೆ ತಡೆ: ಡಿಆರ್‌ಐಗೆ ಕ್ಯಾಂಪ್ಕೊ ಶ್ಲಾಘನೆ

01:16 AM Aug 12, 2023 | Team Udayavani |

ಮಂಗಳೂರು: ಡ್ರೈಫ್ರುಟ್ಸ್‌ ಹೆಸರಿನಡಿಯಲ್ಲಿ ಮತ್ತು ಬೇರೆ ಬೇರೆ ರೂಪಗಳಲ್ಲಿ ವಿದೇಶಗಳಿಂದ ಕಳ್ಳಸಾಗಣೆಯ ಮೂಲಕ ವಿದೇಶಿ ಅಡಿಕೆ ನಮ್ಮ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ದೇಶೀ ಅಡಿಕೆಯ ಸ್ಥಿರ ಧಾರಣೆಗೆ ಬೆದರಿಕೆಯನ್ನು ಉಂಟುಮಾಡುತ್ತಿದೆ. ಇತ್ತೀಚೆಗೆ ಮುಂಬಯಿಯ ಜೆಎನ್‌ಪಿಟಿ ಬಂದರಿನಲ್ಲಿ ಸುಟ್ಟ ಸುಣ್ಣದ ಉಂಡೆಯ ಹೆಸರಿನಲ್ಲಿ ಕಳ್ಳಸಾಗಣೆ ಮಾಡಿದ ಅಡಿಕೆಯನ್ನು ಡಿಆರ್‌ಐ ಅಧಿ ಕಾರಿಗಳು ವಶಪಡಿಸುವ ಮೂಲಕ ಅಡಿಕೆ ಬೆಳೆಗಾರರ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದ್ದಾರೆ.

Advertisement

ವಿದೇಶದಿಂದ ಬೇರೆ ಬೇರೆ ಅಹಾರ ಪದಾರ್ಥಗಳ ಹೆಸರಿನಲ್ಲಿ ಆಮದು ಮಾಡುವ ಅಡಿಕೆಯನ್ನು ತಡೆದು ವಶಪಡಿಸಿಕೊಳ್ಳಲು ಕೇಂದ್ರದ ನಿರ್ದೇಶನವನ್ನು ಕಟ್ಟನಿಟ್ಟಾಗಿ ಜಾರಿಗೆ ತಂದಿರುವ ಕಾರಣ, ಅಡಿಕೆಯ ಕಳ್ಳಸಾಗಾಣಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಅಡಿಕೆಯ ಧಾರಣೆಯಲ್ಲಿ ಸ್ಥಿರತೆ ಕಾಣಲು ಸಾಧ್ಯವಾಗಿದೆ. ರೈತಪರ ಕಾಳಜಿ ಮತ್ತು ಕ್ಯಾಂಪ್ಕೊದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸರಕಾರ ಹಾಗೂ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿ ಕಾರಿಗಳ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಕ್ಯಾಂಪ್ಕೊ ಶ್ಲಾ ಸುತ್ತದೆ ಎಂದು ತಿಳಿಸಿದ್ದಾರೆ.

ಈ ರೀತಿಯ ಕಳ್ಳಸಾಗಾಟದ ಬಗ್ಗೆ ಕ್ಯಾಂಪ್ಕೊ ಅನೇಕ ಬಾರಿ ಸತತವಾಗಿ ಮನವಿ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ನೇರ ಮಾತುಕತೆಯ ಮೂಲಕ, ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಸೂಕ್ತ ಕಾನೂನಾತ್ಮಕ ಕ್ರಮ ಜರಗಿಸುವಂತೆ ಮಾಡಿದ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next