Advertisement

‘ಕಿರುಕುಳ ನೀಡುವವರಿಗೆ ರಕ್ಷಣೆ ಬೇಡ’ ಗೂಗಲ್ ಸಿಇಒ ಗೆ 500 ಮಂದಿ ನೌಕರರ ಬಹಿರಂಗ ಪತ್ರ

01:50 PM Apr 12, 2021 | Team Udayavani |

ನವ ದೆಹಲಿ : ಟೆಕ್ ದೈತ್ಯ ಕಂಪೆನಿ ಗೂಗಲ್ ಹಾಗೂ ಅಲ್ಫಾಬೆಟ್ ನ ಸಿಇಒ ಆಗಿರುವ ಸುಂದರ್ ಪಿಚೈ ಅವರಿಗೆ ಕಂಪೆನಿಯ ಸುಮಾರು 500 ಮಂದಿ ನೌಕರರು ತಮ್ಮ ಕಚೇರಿಯಲ್ಲಿ ಆಗುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧವಾಗಿ ಸಹಿ ಹಾಕಿ  ಪತ್ರದ ಮೂಲಕ ದೂರು ನೀಡಿದ್ದಾರೆ ಎನ್ನುವ ವಿಚಾರ ಈಗ ದೊಡ್ಡ ಸುದ್ದಿಯಾಗಿದ್ದು, ಗೂಗಲ್ ಸಂಸ್ಥೆ ತಲೆ ಕೆಳಗೆ ಮಾಡುವಂತೆ ಮಾಡಿದೆ.

Advertisement

ಗೂಗಲ್ ನ ಕಚೇರಿಯಲ್ಲಿ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಗೂಗಲ್  ಸಂಸ್ಥೆಯಲ್ಲಿ ಈ ಮೊದಲು ಇಂಜಿನೀರ್ ಆಗಿ ಕಾರ್ಯನಿರ್ವಹಿಸಿದ್ದ  ಏಮಿ ನೆಟ್ ಫೀಲ್ಡ್  ‘ದಿ ನ್ಯೂಯಾರ್ಕ್ ಟೈಮ್ಸ್’  ಗೆ ಬರೆದ ತನ್ನ ಓಪಿನಿಯನ್ ಪೀಸ್ ನಲ್ಲಿ ‘ತನಗೆ ಆ ವ್ಯಕ್ತಿಯ ಜೊತೆಗೆ ಒಂದಾದ ಮೇಲೊಂದರಂತೆ ಮೀಟಿಂಗ್ ನಡೆಸಲು ಕಂಪೆನಿಯಿಂದ ಒತ್ತಾಯಿಸಲಾಗುತ್ತಿತ್ತು ಮತ್ತು ಆ ವ್ಯಕ್ತಿ ತನಗೆ ಕಿರುಕುಳ ನೀಡುತ್ತಿದ್ದ’ ಎಂದು ಉಲ್ಲೇಖಿಸಿದ್ದಾರೆ.

ಓದಿ : ಮುಂಬಯಿ : ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರು: ಆಮ್ಲಜನಕ ಸಿಲಿಂಡರ್‌ಗಳ ಕೊರತೆ

ಇನ್ನು, ತಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಯಾವುದೇ ರೀತಿಯ ಕ್ರಮವನ್ನು ಸಂಸ್ಥೆ ತೆಗೆದುಕೊಂಡಿಲ್ಲ.

Advertisement

ಆದರೆ, ಕಂಪನಿಯ ಹೆಚ್ ಆರ್, ಆತನ ಹುದ್ದೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತಮ್ಮ ಮ್ಯಾನೇಜರ್ ಮೂಲಕ ತಮಗೆ ತಲುಪಿಸಲಾಗಿದ್ದು, ರಜೆಯ ಮೇಲೆ ಹೋಗಿ ಇಲ್ಲವಾದರೇ, ಮನೆಯಿಂದ ಕಾರ್ಯನಿರ್ವಹಿಸಿ ಎಂದು ತಮಗೆ ಸೂಚಿಸಿದ್ದರು ಎಂದು ಏಮಿ ತಮ್ಮ ಓಪಿನಿಯನ್ ಪೀಸ್ ನಲ್ಲಿ ಹೇಳಿಕೊಂಡಿರುವುದನ್ನು ವರದಿಯಾಗಿದೆ.

ಇಂತಹ ಕಿರುಕುಳದ ಆರೋಪಗಳು ಈ ಹಿಂದೆ ಕೂಡ ಗೂಗಲ್‌ ಸಂಸ್ಥೆಯನ್ನು ಬೆಂಬಿಡದೆ ಕಾಡಿತ್ತು. ಕಚೇರಿಯಲ್ಲಿ ಆಗುತ್ತಿರುವ ಲೈಂಗಿಕ ಕಿರುಕುಳವನ್ನು ವಿರೋಧಿಸಿ ಸುಮಾರು 20,000 ಗೂಗಲ್ ಸಂಸ್ಥೆಯ ಉದ್ಯೋಗಿಗಳು ಪ್ರತಿಭಟಿಸಿದ್ದರು ಹಾಗೂ ಹೊರ ಬಂದಿದ್ದರು ಎಂಬ ಆಶ್ಚರ್ಯಕರವಾದ ಸುದ್ದಿಯೊಂದನ್ನು ವರದಿ ಮಾಡಿದೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ದಿ ವರ್ಜ್.

ಕಿರುಕುಳ ನೀಡಲಾಗಿರುವ ಕುರಿತು ದೂರು ನೀಡಿದ ವ್ಯಕ್ತಿಗೆ ಒತ್ತಡ ಸಹಿಸಲು ಬಲವಂತಪಡಿಸಲಾಗಿದೆ. ಬಳಿಕ ಕಿರುಕುಳಕ್ಕೆ ಒಳಗಾದ ವ್ಯಕ್ತಿ ಕಛೇರಿಯನ್ನೇ ತೊರೆಯುವಂತಾಗುತ್ತದೆ ಹಾಗೂ ಕಿರುಕುಳ ನೀಡಿದ ವ್ಯಕ್ತಿ ಮಾತ್ರ ಅಲ್ಲಿ ಯಾವುದೇ ಚಿಂತೆಯಿಲ್ಲದೆ ಕಾರ್ಯ ನಿರ್ವಹಿಸುತ್ತಾನೆ  ಮತ್ತು ಆತ ಮಾಡಿದ ಕಿರುಕುಳಕ್ಕೆ ಸಂಸ್ಥೆ ಆತನಿಗೆ ಗೌರವಿಸುತ್ತದೆ. ಎಫ್ಲೇವೇಟ್ ನೌಕರರು ಕಿರುಕುಳ ಮುಕ್ತ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಬಯಸುತ್ತಾರೆ . ಕಿರುಕುಳಕ್ಕೆ ಒಳಗಾದವರ ಚಿಂತೆಗೆ ಆದ್ಯತೆ ನೀಡಿ, ಕಂಪನಿ ತನ್ನ ನೌಕರರಿಗೆ ಸಂರಕ್ಷಣೆ ಒದಗಿಸುವತ್ತ ಗಮನಹರಿಸಬೇಕು  ಎಂದು ಗಂಭೀರ ಆರೋಪಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕಂಪನಿಯು ಈ ಹಿಂದಿನಿಂದಲೂ ಲೈಂಗಿಕ ಕಿರುಕುಳ ಆರೋಪಗಳನ್ನು ಕೇಳುತ್ತಲೆ ಬಂದಿದೆ. ಅದಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ನೌಕರರ ಬಗ್ಗೆ ಎಂದಿಗೂ ಗೂಗಲ್ ಸಂಸ್ಥೆ ಕಾಳಜಿಯನ್ನು ವಹಿಸುತ್ತದೆ.  ಎಂದು , ದಿ ವರ್ಜ್ ಜೊತೆ ಮಾತನಾಡಿದ, ಗೂಗಲ್ ಸಂಸ್ಥೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಆದರೇ, ಇದುವರೆಗೆ ಸಂಸ್ಥೆಯಿಂದ ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿರುವುದು ಅಧಿಕೃತವಾಗಿ ತಿಳಿದುಬಂದಿಲ್ಲ ಎಂಬ ವರದಿಯಾಗಿದೆ.

ಓದಿ : ಡಿಪೋದಿಂದ ಹೊರಬಂದ ಬಸ್ ತಡೆದು ಪ್ರತಿಭಟಿಸಿದ ಮಹಿಳೆಯರು, ಮಕ್ಕಳು

Advertisement

Udayavani is now on Telegram. Click here to join our channel and stay updated with the latest news.

Next