Advertisement

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

01:36 PM Jan 15, 2022 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸೇರಿದಂತೆ ಹಲವು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿರುವ ಅಬಕಾರಿ ಅಧಿಕಾರಿಗಳು ಮೌನಕ್ಕೆಶರಣಾಗಿರುವುದು ಯಾಕೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು.

Advertisement

ತಾಲೂಕು ಪಂಚಾಯಿತಿ ಕಚೇರಿಯಲ್ಲಿದಂಡಿಗನಹಳ್ಳಿ ಹೋಬಳಿಯ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಗ್ರಾಮಗಳಲ್ಲಿ ಟೀ ಅಂಗಡಿ ನೆಪದಲ್ಲಿ ಮದ್ಯ ಮಾರಾಟಮಾಡಲಾಗುತ್ತಿದೆ. ಕಡಿವಾಣ ಹಾಕದಿದ್ದರೆ ಅಧಿಕಾರಿಗೆತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಿರಾಣಿ ಅಂಗಡಿಯಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ಹಾಗೂ ಕೂಲಿಕಾರ್ಮಿಕರು ದುಡಿದ ಹಣವನ್ನು ಮದ್ಯಕ್ಕೆ ಹಾಕುತ್ತಿದ್ದಾರೆ. ರೈತ ಮಹಿಳೆಯರು ಮನೆ ನಡೆಸಲುತೊಂದರೆಪಡುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಮಾಡುತ್ತಿರುವುದರಿಂದ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗಿ ಅಧಿಕಾರಿಗಳು ತಮ್ಮ ಜೋಬುತುಂಬಿಸಿಕೊಳ್ಳಲ್ಲು ಈ ರೀತಿ ಮಾಡುತ್ತಿದ್ದಾರೆ ಎಂದರು.

ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ: ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ ಕಾರ್ಮಿಕರನ್ನು ಗುರುತಿಸಿ, ಕಾರ್ಮಿಕ ಇಲಾಖೆಯಿಂದ ಸವಲತ್ತು ಒದಗಿಸಬೇಕು. ಕಾರ್ಮಿಕ ಅಧಿಕಾರಿ ಪುರುಷೋತಮ್ಮ ಕಚೇರಿ ಬಿಟ್ಟುಹೊಗರೆ ಬರುತ್ತಿಲ್ಲ, ಇನ್ನು ಲಾಕ್‌ಡೌನ್‌ ವೇಳೆ ಸರ್ಕಾರನೀಡಿದ ಆಹಾರ ಕಿಟ್‌ ಕಾರ್ಮಿಕರಿಗೆ ನೀಡದೆ ತೊಂದರೆಪಟ್ಟಿದ್ದು ಗೊತ್ತಿದೆ. ಮುಂದೆ ಈ ರೀತಿಆಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದರು.

ಕಾರ್ಮಿಕ ನಿರೀಕ್ಷಕರಿಂದ ಇಲಾಖೆ ಮಾಹಿತಿ ಪಡೆದು ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಕುರಿತಾಗಿಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿಜಂಟಿಯಾಗಿ ಚರ್ಚಿಸಿ ಕೂಲಿ ಕಾರ್ಮಿಕನೋಂದಣಿಗೊಳಸಿ ಸವಲತ್ತು ಸಿಗುವಂತೆ ನೋಡಿಕೊಳ್ಳಬೇಕು ಎಂದು ಆದೇಶ ನೀಡಿದರು.

Advertisement

ಮಂಚ, ಹಾಸಿಗೆ ಖರೀದಿಯಲ್ಲಿ ಅಕ್ರಮ: ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗಖರೀದಿಸಿರುವ ಮಂಚ ಹಾಗೂ ಹಾಸಿಗೆಖರೀದಿಯಲ್ಲಿ ಅಕ್ರಮವಾಗಿದೆ. ನೈಜ ಬೆಲೆ 8 ಸಾವಿರ ಇದೆ. ಆದರೆ, ಇಲಾಖೆ ಅಧಿಕಾರಿಗಳು 25 ಸಾವಿರಹಣ ನೀಡಿದ್ದಾರೆ. ಬಡವರ ಮಕ್ಕಳ ಊಟ ಹಾಗೂಹಾಸಿಗೆ ಖರೀದಿಯಲ್ಲಿ ಲೋಪ ಎಸಗುವುದರಜೊತೆಗೆ ಪ್ರಿಡ್ಜ್ ಖರೀದಿಯಲ್ಲೂ ಕೂಡಅಕ್ರಮವಾಗಿದ್ದು, ಮಾರುಕಟ್ಟೆ ಬೆಲೆಗಿಂತ ಹೆಚ್ಚು ಲೆಕ್ಕತೋರಿಸಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಜೆ.ಬಿ.ಮಾರುತಿ, ತಾಪಂ ಇಒಸುನಿಲ್‌ಕುಮಾರ್‌, ನಗರ ಠಾಣೆ ಪಿಐ ಸುಬ್ರಮಣ್ಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next