Advertisement
ಸಿಎಂ, ಸಚಿವರ ಗಮನಕ್ಕೆ ತರುವೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಾಲಿಕರಿಗೆ ಹೆದರಿಸಿ ಜಮೀನು ಖರೀದಿಸಿ ಖಾಸಗಿ ವಸತಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ನಗರದ ಹೊರವಲಯ ಬಿ.ಎಂ. ರಸ್ತೆಯ ಬದಿ ಬುಸ್ತೇನಹಳ್ಳಿ ಬಳಿ ಖಾಸಗಿಬಡಾವಣೆ ನಿರ್ಮಾಣದಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ರಾಜಕಾಲುವೆ ಮುಚ್ಚಿ , ಹೈ ಟೆನ್ಷನ್ ವಿದ್ಯುತ್ ಮಾರ್ಗ ಇರುವಪ್ರದೇಶದಲ್ಲಿ ನಿವೇಶಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹಲವು ಸಂಘ-ಸಂಸ್ಥೆಗಳು ನನಗೆ ಮಾಹಿತಿ ನೀಡಿವೆ. ಈ ಬಗ್ಗೆ ಪರಿಶೀಲಿಸಿ,ದಾಖಲೆ ಸಂಗ್ರಹಿಸಿ ನಾನು ಮುಖ್ಯಮಂತ್ರಿ ಯವರು, ನಗರಾಭಿವೃದ್ಧಿ , ವಸತಿ ಸಚಿವರಗಮನಕ್ಕೆ ತಂದು ತನಿಖೆ ನಡೆಸಲು ಕ್ರಮ ಕೈಗೊಳ್ಳುವೆ. ಅವರು ಸ್ಪಂದಿಸದಿದ್ದರೆ ಕಾನೂನುಹೋರಾಟದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
Related Articles
Advertisement
ಹಾಸನ ತಾಲೂಕು ಕಟ್ಟಾಯ ಹೋಬಳಿಯಲ್ಲಿ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಲೋಪಗಳಾಗಿವೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ಶಾಸಕ ಎಚ್.ಕೆ.ಕುಮಾರಸ್ವಾಮಿ ಸಂಬಂಧಪಟ್ಟ ಸಚಿವರು, ರಾಜ್ಯ ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದಾರೆ. ಜಿಲ್ಲಾಧಿಕಾರಿ ಅವರು ಪರಿಶೀಲಿಸಿ ಆಗಿರುವ ಲೋಪ ಸರಿಪಡಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ನಿಯಮಗಳನ್ನೇ ರದ್ದುಪಡಿಸಿದೆ :
ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಕರ್ನಾಟಕ ಗೃಹ ಮಂಡಳಿ ನಿವೇಶನ ಹಂಚಿಕೆ ಮಾಡುವಾಗ ವಸತಿ ರಹಿತರಿಗೆ ನಿವೇಶನ ನೀಡಬೇಕು. ನಿವೇಶನ ಪಡೆದವರು 15 ವರ್ಷ ಪರಭಾರೆ ಮಾಡಬಾರದು. ಈಗಾಗಲೇ ಮನೆ, ನಿವೇಶನಗಳನ್ನು ಹೊಂದಿದ್ದವರು ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಪಡೆದರೆ ಅಂತಹ ಹಂಚಿಕೆ ರದ್ದುಪಡಿಸಬೇಕು ಎಂಬ ನಿಯಮವಿತ್ತು. ಆದರೆ, ಬಿಜೆಪಿಸರ್ಕಾರ ಬಂದಾಗ ಈ ನಿಯಮಗಳನ್ನು ರದ್ದುಪಡಿಸಿರುವುದರಿಂದ ಉಳ್ಳವರೇ ನಿವೇಶನ ಪಡೆದು ಮಾರಾಟ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಬೇಸರಿಸಿದರು.