ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ನಾನು ಮೊದಲ ಬಾರಿಗೆ ಸೇಡಂ ತಾಲೂಕಿನ ಶಾಸಕನಾಗಿದ್ದೇನೆ. ಹಿಂದಿನ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಂತೆ ನಾನು ಯಾವುದೇ ಜಾತಿ ರಾಜಕಾರಣ ಮಾಡುವುದಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ದೀನ ದಲಿತರ ಮತ್ತು ರೈತರ ಏಳಿಗೆಗೋಸ್ಕರ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
Advertisement
ಸೇಡಂ ಮತಕ್ಷೇತ್ರದಲ್ಲಿ ಸಾಕಷ್ಟು ಸಿಮೆಂಟ್ ಕಂಪನಿಗಳಿದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಅವರಿಗೆ ಉದ್ಯೋಗ ಸಿಗಬೇಕು. ರೈತರ ಆದಾಯ ಹೆಚ್ಚಳ ಆಗಬೇಕೆಂಬ ಉದ್ದೇಶಕ್ಕಾಗಿ ಸೇಡಂ ಪಟ್ಟಣದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ಬೃಹತ್ ಕೃಷಿ ಮೇಳ ಮತ್ತು ಉದ್ಯೋಗ ಮೇಳ ನಡೆಸುತ್ತೇನೆ. ಇದರಲ್ಲಿ 300ಕ್ಕಿಂತ ಹೆಚ್ಚು ಕಂಪನಿಗಳನ್ನು ಆಹ್ವಾನಿಸುತ್ತೇನೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಸರಕಾರ ಉರುಳಿ ಹೋಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಗಳಾಗುತ್ತಾರೆ. ಸೇಡಂ ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ
ಪಡಿಸುವುದೇ ನಮ್ಮ ಮೊದಲ ಗುರಿಯಾಗಿದೆ ಎಂದರು. ಶರಣಪ್ಪ ತಳವಾರ, ದಯಾನಂದ ರೆಮ್ಮಣಿ, ಪರ್ವತರೆಡ್ಡಿ ಸೇಡಂ, ಡಾ| ವಿಶ್ವನಾಥ ಪವಾರ, ವಿಷ್ಣುರಾವ್ ಬಸೂದೆ, ಅತೀಶ ಪವಾರ, ಜಿಪಂ ಸದಸ್ಯ ಶಿವಶರಣಪ್ಪ ಶಂಕರ, ನಾಗಪ್ಪ ಕೊಳ್ಳಿ, ಬಂಡೆಪ್ಪ, ಶಿವಕುಮಾರ ನಿಂಗದಳ್ಳಿ, ಲಕ್ಷ್ಮಣ
ಆವಂಟಿ, ಚಂದ್ರಶೇಖರ ಗುತ್ತೇದಾರ, ರವಿ ಬಂಟನಳ್ಳಿ, ಮುಕುಂದ ದೇಶಪಾಂಡೆ, ಓಂಪ್ರಕಾಶ ಪಾಟೀಲ, ಮುಜಿಬ್ ಪಟೇಲ್ ಇದ್ದರು. ಮಹೇಶ ಬೆಳಮಗಿ ಸ್ವಾಗತಿಸಿದರು, ಶರಣು ಕುಂಬಾರ ನಿರೂಪಿಸಿದರು, ನಾಗೇಶ ಬಸೂದೆ ವಂದಿಸಿದರು.
Related Articles
Advertisement
2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲರ ಗುರು ಮಲ್ಲಿಕಾರ್ಜುನ ಖರ್ಗೆ ವರನ್ನು ಭಾರಿ ಮತಗಳಿಂದ ಸೋಲಿಸಬೇಕಾಗಿದೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ.ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ