Advertisement
ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಬೆಂಗಳೂರು ನಗರದಲ್ಲಿ ರಾಜಕಾಲುವೆ ಕಬಳಿಕೆ, ಕೆರೆಗಳನ್ನು ಮುಚ್ಚಿ ಒತ್ತುವರಿ ಮಾಡಿರುವ ಕುರಿತಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, ಅವಳಿ ನಗರದಲ್ಲಿ ರಾಜಕಾಲುವೆ ಮೇಲೆ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶವಿದೆಯಾ?, ಉದ್ಯಾನ ನಿರ್ಮಾಣ ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕರ ಚರ್ಚೆಯ ವಿಷಯವಾಗಿದೆ.
Related Articles
Advertisement
ಗದಗ-ಬೆಟಗೇರಿ ನಗರಸಭೆ 17, 18ನೇ ವಾರ್ಡಿನಲ್ಲಿ ಗೌರಿಶಂಕರ ಲಾಡ್ಜ್ನಿಂದ ಡಿಸಿ ಮಿಲ್ ರಸ್ತೆವರೆಗಿನ ಜವಳದ ದೊಡ್ಡ ಚರಂಡಿ ಮೇಲೆ ನಗರಸಭೆಯಿಂದ ಪೂರ್ವಾನುಮತಿ ಪಡೆಯದೇ ಉದ್ಯಾನ ನಿರ್ಮಾಣ ಕಾಮಗಾರಿ ಆರಂಭಿಸಿರುವುದು ಗಮನಕ್ಕೆ ಬಂದಿದ್ದು, ಕಾಮಗಾರಿ ಸ್ಥಗತಿಗೊಳಿಸಲು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. –ರಮೇಶ ಸುಣಗಾರ, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ
ಶಾಸಕ ಎಚ್.ಕೆ. ಪಾಟೀಲ ಅವರು ತಮ್ಮ ಶಾಸಕರ ಅನುದಾನದಲ್ಲಿ ಜವುಳಗಲ್ಲಿ ಭಾಗದಲ್ಲಿ ಸ್ವಚ್ಚತೆಯ ಹಿತದೃಷ್ಟಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ಮೇಲೆ ಉದ್ಯಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮಗಳಿಲ್ಲ. ಆದಾಗ್ಯೂ ಪೂರ್ವಾನುಮತಿ ಪಡೆಯುವುದು ಅವಶ್ಯಕವೆಂದಾದರೆ ಕಾಮಗಾರಿ ಮುಂದುವರಿಸಲು ಅನುಮತಿಗೆ ಮನವಿ ಸಲ್ಲಿಸಲಾಗುವುದು. –ಜೀವನಸಾಬ್ ನಮಾಜಿ, ಸದಸ್ಯರು, ನಗರಸಭೆ 18ನೇ ವಾರ್ಡ್
ಗದಗ-ಬೆಟಗೇರಿ ಅವಳಿ ನಗರದ 17 ಮತ್ತು 18ನೇ ವಾರ್ಡಿನ ಜವಳಗಲ್ಲಿಯ ರಾಜಕಾಲುವೆ ಮೇಲೆ ನಗರಸಭೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿತ್ತು. ಈ ವಿಷಯ ನನ್ನ ಗಮನಕ್ಕೆ ಬರುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೂ ದೂರದೃಷ್ಟಿ ಇಲ್ಲದೇ ರಾಜಕಾಲುವೆಯ ಅಕ್ಕಪಕ್ಕ ಕಟ್ಟಡ, ಲೇಔಟ್, ವಸತಿ ಸಮುತ್ಛಯಗಳನ್ನು ನಿರ್ಮಿಸಿದ ಕಾರಣ, ಮಳೆ ನೀರು ಸರಾಗವಾಗಿ ಹರಿಯದೇ ಬಹಳಷ್ಟು ತೊಂದರೆಗಳಾಗಿರುವುದು ಕಣ್ಮುಂದೆಯೇ ಇದೆ. ಹೀಗಿದ್ದಾಗಲೂ ಸ್ಥಳೀಯ ಶಾಸಕರು ರಾಜಕಾಲುವೆ ಮೇಲೆ ಉದ್ಯಾನ ನಿರ್ಮಿಸಲು ಹೊರಟಿರುವುದು ದುರಂತದ ಸಂಗತಿ. ಇದಕ್ಕೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. –ಉಷಾ ಎಂ. ದಾಸರ, ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ
-ಅರುಣಕುಮಾರ ಹಿರೇಮಠ