Advertisement

ಜಂತರ್‌ ಮಂತರ್‌ನಲ್ಲಿ ಎಲ್ಲ ಪ್ರತಿಭಟನೆ ನಿಲ್ಲಿಸಿ: ಎನ್‌ಜಿಟಿ ಆದೇಶ

05:36 PM Oct 05, 2017 | udayavani editorial |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯ ಹೃದಯ ಭಾಗದಲ್ಲಿರುವ ಐತಿಹಾಸಿಕ ಜಂತರ್‌ ಮಂತರ್‌ ಪ್ರದೇಶದಲ್ಲಿ  ಎಲ್ಲ ಬಗೆಯ ಧರಣಿ, ಪ್ರತಿಭಟನೆ, ಜನ ಜಮಾವಣೆಯನ್ನು ತತ್‌ಕ್ಷಣದಿಂದ ತಡೆಯಬೇಕು ಎಂದು ಹಸಿರು ರಾಷ್ಟ್ರೀಯ ನ್ಯಾಯ ಮಂಡಳಿ ದಿಲ್ಲಿ ಸರಕಾರಕ್ಕೆ ಆದೇಶ ನೀಡಿದೆ. 

Advertisement

ಅಂತೆಯೇ ಕನ್ಹಾಟ್‌ ಪ್ಲೇಸ್‌ ಪ್ರದೇಶಕ್ಕೆ ಸಮೀಪದ ರಸ್ತೆಯ ಉದ್ದಕ್ಕೂ ಕಂಡು ಬರುವ ಎಲ್ಲ ತಾತ್ಕಾಲಿಕ ರಚನೆಗಳನ್ನು, ಲೌಡ್‌ ಸ್ಪೀಕರ್‌ಗಳನ್ನು ಮತ್ತು ಸಾರ್ವಜನಿಕ ಭಾಷಣ ವ್ಯವಸ್ಥೆಯನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ಜಸ್ಟಿಸ್‌ ಆರ್‌ ಎಸ್‌ ರಾಠೊಡ್‌ ನೇತೃತ್ವದ ಹಸಿರು ನ್ಯಾಯ ಮಂಡಳಿ ಪೀಠ ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ (ಎನಎಂಡಿಸಿ)ಗೆ ಆದೇಶಿಸಿದೆ.

ಜಂತರ್‌ ಮಂತರ್‌ ಪ್ರದೇಶದಲ್ಲಿ ಎಲ್ಲ ಬಗೆಯ ಧರಣಿ, ಪ್ರತಿಭಟನೆ, ಆಂದೋಲನ, ಸತ್ಯಾಗ್ರಹ, ಜನ ಸೇರುವಿಕೆ, ಸಾರ್ವಜನಿಕ ಭಾಷಣ ಕಾರ್ಯಕ್ರಮಗಳು, ಧ್ವನಿ ವರ್ಧಕಗಳ ಬಳಕೆ ಇತ್ಯಾದಿಗಳನ್ನು ಈ ಕೂಡಲೇ ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಉತ್ತರದಾಯಿಗಳಾಗಿರುವ ದಿಲ್ಲಿ ಸರಕಾರ, ಎನ್‌ಎಂಡಿಸಿ ಹಾಗೂ ದಿಲ್ಲಿ ಪೊಲೀಸ್‌ ಕಮಿಷನರ್‌ಗೆ ಆದೇಶ ನೀಡಿದೆ. 

ಜಂತರ್‌ ಮಂತರ್‌ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲ ಪ್ರತಿಭಟನೆ, ಆಂದೋಲನ ಇತ್ಯಾದಿಗಳು ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂರಕ್ಷಣೆಯ ಕಾನೂನುಗಳ ಸಾರಾ ಸಗಟು ಉಲ್ಲಂಘನೆಯಾಗಿವೆ ಎಂದು ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next