Advertisement

ರಾಮನವಮಿ ಧ್ವಜಕ್ಕೆ ಮಾಂಸ ಕಟ್ಟಿ ಅಪವಿತ್ರ: ಎರಡು ಗುಂಪುಗಳ ನಡುವೆ ಘರ್ಷಣೆ; Sec 144 ಜಾರಿ

10:19 AM Apr 10, 2023 | Team Udayavani |

ಜೆಮ್​ಶೆಡ್​ಪುರ (ಜಾರ್ಖಂಡ್​): ರಾಮನವಮಿ ಧ್ವಜವನ್ನು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿರುವ ಘಟನೆ ಜಾರ್ಖಂಡ್‌ ನ ಜೆಮ್​ಶೆಡ್​ಪುರದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಶನಿವಾರ ರಾತ್ರಿಯಿಂದಲೇ ಜೆಮ್​ಶೆಡ್​ಪುರದ ಶಾಸ್ತ್ರಿನಗರದಲ್ಲಿ ಘರ್ಷಣೆ ಉಂಟಾಗಿದೆ. ರಾಮನವಮಿಯ ಧ್ವಜಕ್ಕೆ ಮಾಂಸದ ತುಂಡು ಕಟ್ಟಿರುವುದನ್ನು ಸ್ಥಳೀಯ ಸಂಘಟನೆಯೊಂದು ನೋಡಿದೆ. ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ, ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಎಲ್ಲಿಯವರೆಗೆ ಅಂದರೆ ಘರ್ಷಣೆ ವಿಕೋಪಕ್ಕೆ ತಿರುಗಿ ಕಿಡಿಗೇಡಿಗಳು ಬ್ಯಾಟ್‌ ಹಿಡಿದು ಬಂದು, ಇಟ್ಟಿಗೆ ಎಸೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಎರಡು ಅಂಗಡಿ ಹಾಗೂ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ: Pregnant Woman: ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಗರ್ಭಿಣಿ ಮಹಿಳೆ ಮೃತ್ಯು; ಇಬ್ಬರ ಬಂಧನ

ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು, ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಶಾಸ್ತ್ರಿನಗರದಲ್ಲಿ ಸಾಕಷ್ಟು ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾಗ್ರತ ಕ್ರಮವಾಗಿ ಶಾಸ್ತ್ರಿನಗರ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next