ಭೋಪಾಲ್: ಮಧ್ಯಪ್ರದೇಶದ ಶಾಜಾಪುರ ನಗರದ ಮಗಾರಿಯಾ ಪ್ರದೇಶದಲ್ಲಿ ನಡೆಯುತ್ತಿದ್ದ ಹಿಂದೂಗಳ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದಿದ್ದು, ಶಾಜಾಪುರದ ಮೂರು ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದಿನಂಪ್ರತಿ ಸಂಜೆ ವೇಳೆ ಹಿಂದೂಗಳ ಗುಂಪೊಂದು ಶಾಜಾಪುರದ ವಿವಿಧ ನಗರಗಳಲ್ಲಿ ಧಾರ್ಮಿಕ ಮೆರÊ ಣಿಗೆ ನಡೆಸುತ್ತಿದೆ. ಸೋಮವಾರ ರಾತ್ರಿ 8 ಗಂಟೆಗೆ ಮೆರವಣಿಗೆ ನಡೆಸುವಾಗ ಮಗಾ ರಿಯಾದ ನಾಗ್- ನಾಗಿನ್ ರಸ್ತೆ ಯಲ್ಲಿರುವ ಮಸೀದಿಯೊಂದರ ಬಳಿ 8-9 ಮಂದಿಯ ತಂಡ ಮೆರವಣಿಗೆಗೆ ತಡೆಯೊಡ್ಡಿದೆ. ಅಲ್ಲದೇ ನಗರದಿಂದ ಮುಂದಕ್ಕೆ ಮೆರವಣಿಗೆ ಹೋಗಕೂಡದೆಂದು ತಾಕೀತು ಮಾಡಿ, ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕತ್ತಿಗಳನ್ನೂ ಝಳಪಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಗಾರಿಯಾ, ಕಚ್ಚಿವಾಡಾ, ಲಾಲ್‌ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹ್ಯೂಸ್ಟನ್‌ನಲ್ಲಿ ಮೆರವಣಿಗೆ: ಮಂದಿರ ಉದ್ಘಾಟನೆ ಹಿನ್ನೆಲೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಹಿಂದೂಗಳು ಕಾರು ರ್ಯಾಲಿ ನಡೆಸಿದ್ದಾರೆ. ಟೆಕ್ಸಾಸ್‌ನ ಹ್ಯೂಸ್ಟನ್‌ನ ಶ್ರೀ ಮೀನಾಕ್ಷಿ ದೇಗುಲದಿಂದ ರ್ಯಾಲಿ ಆರಂಭಗೊಂಡು, ರಿಚ¾ಂಡ್‌ನ ಶ್ರೀ ಶಾರದಾಂಬಾ ದೇಗುಲದಲ್ಲಿ ಕೊನೆಗೊಂಡಿತು.
ವನವಾಸ ವೇಳೆ ಶ್ರೀರಾಮ ಕ್ರಮಿಸಿದ ಮಾರ್ಗದಲ್ಲಿ ರಾಮೋತ್ಸವ ಯಾತ್ರೆ!
ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ರಾಮನು ಯಾವ ಹಾದಿಯಲ್ಲಿ ನಡೆದು ತನ್ನ ಸಾಮ್ರಾಜ್ಯ ತಲುಪಿದನೋ ಆ ಎಲ್ಲ ಮಾರ್ಗದಲ್ಲೂ ಸಂಚರಿಸುವ ಮೂಲಕವೇ ಅಯೋಧ್ಯೆ ತಲುಪಲು 500ಕ್ಕೂ ಅಧಿಕ ಮಂದಿ ಸೋಶಿಯಲ್ ಮೀಡಿಯಾ ಇನ್‌ಫೂÉéಯೆನ್ಸರ್‌ಗಳು ಸಿದ್ಧತೆ ನಡೆಸಿದ್ದಾರೆ. ರಾಮೋತ್ಸವ ಯಾತ್ರೆ ಹೆಸರಿನಲ್ಲಿ ನಡೆಯಲಿರುವ ಈ ಪಯಣಕ್ಕೆ ಜ.14ರಂದು ಚಾಲನೆ ದೊರೆಯಲಿದೆ. 4,500 ಕಿ.ಮೀ. ಕ್ರಮಿಸುವ ಈ ಯಾತ್ರೆಯು ಒಂದು ತಿಂಗಳ ಅವಧಿಯಲ್ಲಿ 5 ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶವನ್ನು ಸುತ್ತುವರಿಯಲಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ರಾಮೋತ್ಸವ ಯಾತ್ರೆ ಪ್ರಾರಂಭವಾಗಲಿದೆ ಎಂದು ಆಯೋಜಕರ ತಂಡದ ಅಪೂರ್ವ ಸಿಂಗ್ ಹೇಳಿದ್ದಾರೆ.