Advertisement
ಆಹಾರದ ಜೊತೆ ಕಲ್ಲು ಹರಳು ಮೇಯುವುದರಿಂದ ಇದಕ್ಕೆ ಅನ್ವರ್ಥವಾಗಿ ಕಲ್ಲ ಗೊರವ ಎಂಬ ಅನ್ವರ್ಥಕ ಹೆಸರು ಬಂದಿರ ಬಹುದು. ಚಿಕ್ಕದಾದ ಸ್ವಲ್ಪ ಮೆಲ್ಮುಖ ವಾಗಿರುವ, ದಪ್ಪ ದೃಢವಾದ ಚುಂಚು. ದೊಡ್ಡ ತಲೆ, ಸಪುರಾದ ಕಾಲು ಇದಕ್ಕಿದೆ. ಚುಂಚಿನ ಮುಕ್ಕಾಲು ಭಾಗ ಕಪ್ಪು ಬಣ್ಣದಿಂದಕೂಡಿದೆ. ಹಳದಿ ಬಣ್ಣದ ಕ್ರೂರ ನೋಟ ಬೀರುವ ದೊಡ್ಡ ಕಣ್ಣು ಆದರ ಮಧ್ಯ ಕಪ್ಪು ಚುಕ್ಕೆ ಇದರ ನೋಟದ ತೀವ್ರತೆ ಹೆಚ್ಚಿಸಿದೆ. ಈ ಕಣ್ಣಿನ ನೋಟದಿಂದಾಗಿಯೇ ಇದಕ್ಕೆ ಕನ್ನಡಕದ ಕಣ್ಣಿನ ಹಕ್ಕಿ ಎಂದೂ ಕರೆಯುವುದು.
ಇದೊಂದು ಪ್ರಾದೇಶಿಕ ಹಕ್ಕಿ. ಸಮುದ್ರ ತೀರ, ಗಜನೀ ಪ್ರದೇಶ, ಕುರುಚಲು ಕಾಡು, ಬಯಲು ಪ್ರದೇಶ, ಕಲ್ಲು ಪಾರೆ ಇರುವ ಜಾಗ, ಉತ್ತ ಬಯಲು ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣುತ್ತದೆ.
Related Articles
Advertisement
ಮೈ ಬಣ್ಣ ಹಳದಿ ಮತ್ತು ಗೆರೆಗಳಿಂದ ಕೂಡಿರುವ್ಯದರಿಂದ ಅದು ಪರಿಸರಕ್ಕೆ ಹೊಂದಿಕೊಂಡು ಎದುರಾಳಿಗಳಿಗೆ ಇದರ ಇರುವಿಕೆಯೇ ಅನುಮಾನ ಬಂರುವಂತೆ ಮಾಡಿ, ಕಕ್ಕಾಬಿಕ್ಕಿ ಮಾಡಿಬಿಡುವ ಚಾತಿಯೂ ಇದಕ್ಕಿದೆ.
ಕಲ್ಲುಗೊರವದ ಕೂಗು ಮುಂಜಾನೆ ಇಲ್ಲವೇ ಸಂಜೆಯಲ್ಲಿ. ಇದರ ಕೂಗನ್ನು ಕೇಳದ ಕಿವಿ ಇಲ್ಲ. ಆದರೆ ನೋಡಿದ ಕಣ್ಣುಗಳ ಬಹಳ ಕಡಿಮೆ. ಕಲ್ಲು ಗೊರದ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸದ ಅರಿವಾಗುತ್ತದೆ. ಇದರ ಚೂಪಾದ ಕಪ್ಪು ಚುಂಚು, ಗಂಟಿರುವ ನಗ್ನ ಕಾಲು, ಹಾರುವಾಗ ಇದರ ಕಂದು ಬಣ್ಣದ ರೆಕ್ಕೆಯ ಅಡಿಯಲ್ಲಿ ಕಾಣುವ ಎರಡು ಬಿಳಿಗೆರೆ. ಇದನ್ನು ಕೊಳದ ಬಕಕ್ಕಿಂತ ಭಿನ್ನ . ಇದು ಬೆಳದಿಂದಳ ರಾತ್ರಿಯಲ್ಲಿಯೂ ಸಹ ಕೂಗುತ್ತದೆ. ಇದರಂತೆ ಕೆಂಪು ಮೂತಿ ಟಿಟಿಭ ಕೂಗು ಹಾಗೂ ಕಲ್ಲು ಗೊರವದ ಕೂಗು ಭಿನ್ನವಾಗಿದೆ. ತನ್ನ ಸಂಗಾತಿಯನ್ನು ಇಲ್ಲವೇ ತನ್ನ ಬಳಗದವರನ್ನು ಕರೆಯಲು ಕೂಗುವ ಕೂಗು, ವೆÏರಿಗಳ ಆಕ್ರಮಣವಾದಾಗ ಅದರ ರಕ್ಷಣೆಗಾಗಿ ಮಾಡುವ ಕೂಗು ಎಲ್ಲವನ್ನು ವಿಂಗಡಿಸಿ ಅಧ್ಯನ ಮಾಡಿದರೆ ಇದರ ಜೀವನ ಕ್ರಮ, ರಕ್ಷಣೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬಹುದು. ಜೀವನ ಸರಪಳಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು.
ನೆಲದಲ್ಲಿ ತಗ್ಗು ಮಾಡಿ 3-4 ಮೊಟ್ಟೆ ಇಡುತ್ತವೆ. ಮೊಟ್ಟೆಯ ಮೇಲೆ ಕಂದು ಕೆನ್ನೀಲಿ ಮಚ್ಚೆ ಕಾಣತ್ತದೆ. ತಿಳಿ ಹಳದಿ ಮಿಶ್ರಿತ ತಿಳಿ ಹಸಿರು ಬಣ್ಣ ಮೊಟ್ಟೆಗಿರುವುದರಿಂದ ಇದು ಪರಿಸರಕ್ಕೆ ಹೊಂದಿಕೊಳ್ಳುತ್ತದೆ. ವೈರಿಗಳಿಗೆ ಇದೇ ಮೊಟ್ಟೆ ಅಂತ ತಿಳಿಯುವುದಿಲ್ಲ. ಕಾವು ಕೊಡುವುದು, ಮೊಟ್ಟೆಯ ರಕ್ಷಣೆ, ಮರಿಗಳಿಗೆ ಗುಟುಕು ನೀಡುವುದು ಇತ್ಯಾದಿ ಕೆಲಸದಲ್ಲಿ ಗಂಡು ಹೆಣ್ಣು ಎರಡೂ ಭಾಗಿಯಾಗುತ್ತದೆ. ಹುಳ ಹಿಡಿಯುವುದು ವೈರಿಗಳಿಂದ ಹೇಗೆ ರಕ್ಷಿಸಸಿಕೊಳ್ಳಬೇಕು ಎಂಬ ಜೀವನ ಕಲೆಯನ್ನು ಮರಿಗಳು ತಂದೆ ತಾಯಿ ಕಲಿಯುತ್ತದೆ.