Advertisement

ವೃಷಾನನ ಯೋಗಿನಿ ಮೂರ್ತಿಯನ್ನು ಭಾರತಕ್ಕೆ ಹಸ್ತಾಂತರಿಸಿದ ಇಂಗ್ಲೆಂಡ್

03:21 PM Jan 15, 2022 | Team Udayavani |

ಲಂಡನ್ : ಉತ್ತರಪ್ರದೇಶಕ್ಕೆ ಸೇರಿದ ಹತ್ತನೇ ಶತಮಾನದ ವೃಷಾನನ ಯೋಗಿನಿ ಮೂರ್ತಿಯನ್ನು ಮಂಕರ ಸಂಕ್ರಮಣದ ದಿನ ಭಾರತಕ್ಕೆ ಹಸ್ತಾಂತರಿಸಲು ಇಂಗ್ಲೆಂಡ್ ಸರಕಾರ ನಿರ್ಧರಿಸಿದ್ದು, ಭಾರತೀಯ ಹೈಕಮಿಷನ್ ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗೆ ಚಾಲನೆ ನೀಡಿದೆ.

Advertisement

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲಖೇರಿ ದೇಗುಲದ ವೃಷಾನನ ಮೂರ್ತಿ ೪೦ ವರ್ಷದ ಹಿಂದೆ ನಾಪತ್ತೆಯಾಗಿತ್ತು. ಹತ್ತನೇ ಶತಮಾನಕ್ಕೆ ಸೇರಿದ ಈ ಶಿಲಾಮೂರ್ತಿ ಇತ್ತೀಚೆಗೆ ಲಂಡನ್‌ನಲ್ಲಿ ಪತ್ತೆಯಾಗಿತ್ತು. ಅಲ್ಲಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಮನೆಯ ಉದ್ಯಾನವನದಲ್ಲಿ ಇತ್ತೀಚೆಗೆ ಉತ್ಖನನ ಮಾಡಿದ್ದಾಗ ಈ ವಿಗ್ರಹ ಪತ್ತೆಯಾಗಿತ್ತು.

ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ಅವರಿಗೆ ವಿಗ್ರಹ ಹಸ್ತಾಂತರಿಸಲಾಗಿದ್ದು, ಭ್ರಿಟನ್ ರಾಯಭಾರ ಕಚೇರಿ ಮುಖ್ಯಸ್ಥೆ ಚಾರಿಸ್ ಮರ್ನಿಲೋ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಮಕರ ಸಂಕ್ರಾತಿಯ ದಿನ ಭಾರತಕ್ಕೆ ವಿನೂತನ ಕೊಡುಗೆ ಲಭಿಸಿದೆ.

ವಿಗ್ರಹ ಹಸ್ತಾಂತರ ಪ್ರಕ್ರಿಯೆಗೆ ಬ್ರಿಟನ್‌ನಿಂದಲೇ ಪೂರಕ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರಕ್ರಿಯೆಗೆ ನೀವು ವೇಗ ನೀಡದೇ ಇದ್ದರೆ ಒಂದು ಅವಕಾಶ ಕಳೆದುಕೊಳ್ಳಲಿದ್ದೀರಿ ಎಂದು ಚಾರಿಸ್ ಮರ್ನಿಲೋ ಪೂರ್ವಭಾವಿಯಾಗಿ ಎಚ್ಚರಿಸಿದ್ದರು. ಎಲ್ಲ ಕೆಂಪುಪಟ್ಟಿಗಳನ್ನು ಮೊದಲು ಕತ್ತರಿಸಿ ಎಂಬ ಬ್ರಿಟನ್ ಆಶಯಕ್ಕೆ ಭಾರತವೂ ಸ್ಪಂದಿಸಿತ್ತು. ಮಕರ ಸಂಕ್ರಮಣದಂದು ವಿಗ್ರಹ ಹಸ್ತಾಂತರವಾಗುತ್ತಿರುವುದು ಧನಾತ್ಮಕ ಭಾವನೆಯನ್ನು ಬಿತ್ತಿದೆ ಎಂದು ಹೈ ಕಮಿಷನರ್ ಗಾಯತ್ರಿ ಇಸ್ವಾರ್ ಕುಮಾರ್ ಹೇಳಿಕೆ ನೀಡಿದ್ದಾರೆ.

೧೦ನೇ ಶತಮಾನಕ್ಕೆ ಸೇರಿದ ಈ ವಿಗ್ರಹ ಬ್ರಿಟನ್ ತಲುಪಿದ್ದು ಹೇಗೆ ? ಎಂಬುದು ಇಂದಿಗೂ ನಿಗೂಢವಾಗಿದೆ. ಆದರೆ ಲಂಡನ್‌ನಲ್ಲಿರುವ ಇನ್ನಿತರ ಅಮೂಲ್ಯ ಪ್ರಾಚ್ಯವಸ್ತುಗಳನ್ನು ಭಾರತಕ್ಕೆ ಹಸತಾಂತರಿಸುವ ವಿಚಾರದಲ್ಲಿ ಉಭಯ ರಾಷ್ಟçಗಳ ಮಧ್ಯೆ ಈ ಪ್ರಕ್ರಿಯೆ ಮಹತ್ವದ ಪಾತ್ರ ವಹಿಸಬಹುದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next