Advertisement
ಮಂಗಳೂರಿನ ಸೂರತ್ಕಲ್ ನಿವಾಸಿ ಧನುಷ್(19), ವಿಜಯ್ ಅಲಿಯಾಸ್ ಆಂಜನೇಯ (21) ಬಂಧಿತರು. ಆರೋಪಿಗಳಿಂದ ಒಂದು ಪಿಸ್ತೂಲ್, 16 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರ ವಿರುದ್ಧವೂ ಮಂಗಳೂರಿನ ವಿವಿಧ ಠಾಣೆಗಳಲ್ಲಿ ದರೋಡೆ ಪ್ರಕರಣಗಳಿವೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಸ್ ಸೂದ್ ತಿಳಿಸಿದ್ದಾರೆ.
Related Articles
Advertisement
ಶಾಸಕರ ಗನ್ಮ್ಯಾನ್ ರಸ್ತೆಯಲ್ಲಿ ಬಿದ್ದಿದ್ದು ಏಕೆ? ಫೆ. 23ರಂದು ದೇವನಹಳ್ಳಿಗೆ ತೆರಳುತ್ತಿದ್ದ ಶಾಸಕ ಪಿಳ್ಳ ಮುನಿಸ್ವಾಮಪ್ಪ ತಮ್ಮ ಅಂಗರಕ್ಷಕ ನರಸಿಂಹಮೂರ್ತಿ ಅವರನ್ನು ಎಂ.ಎಸ್.ಪಾಳ್ಯ ಬಳಿ ಇಳಿಸಿ ಆಟೋದಲ್ಲಿ ಮನೆಗೆ ಹೋಗುವಂತೆ ತಿಳಿಸಿದ್ದರು. ನರಸಿಂಹಮೂರ್ತಿ ಕೆಲಸದ ಒತ್ತಡದಿಂದ ಬಳಲಿದ್ದರು. ಸಿನಿಮಾ ನೋಡಿಕೊಂಡು ಹೋಗೋಣವೆಂದು ಆಟೋ ಹಿಡಿದು ಚಿತ್ರಮಂದಿರದ ಕಡೆ ಹೊರಟಿದ್ದರು. ಅದರಂತೆ ಚಿತ್ರಮಂದಿರ ಬಳಿ ಇಳಿದ ನರಸಿಂಹಮೂರ್ತಿ ಅಲ್ಲಯೇ ಪ್ರಜ್ಞೆತಪ್ಪಿ ಬಿದಿದ್ದಾರೆ. ಇದರಿಂದ ಗಾಬರಿಗೊಂಡ ಆಟೋ ಚಾಲಕ ಓಡಿ ಹೋಗಿದ್ದಾನೆ. ನರಸಿಂಹಮೂರ್ತಿ ಅವರನ್ನು ಯಾರೂ ಗಮನಿಸಿರಲಿಲ್ಲ. ಇದೇ ವೇಳೆ ಮದ್ಯದ ಅಮಲಿನಲ್ಲಿ ಬರುತ್ತಿದ್ದ ಆರೋಪಿಗಳು ನರಸಿಂಹಮೂರ್ತಿ ಅವನ್ನು ಕಂಡು, ಅವರ ಜೇಬುಗಳನ್ನು ಹುಡುಕಿದ್ದಾರೆ. ಆಗ ಸಿಕ್ಕ ಸರ್ವಿಸ್ ಪಿಸ್ತೂಲ್ ಮತ್ತು ನಗದು ದೋಚಿ ಪರರಿಯಾಗಿದ್ದರು ಎಂದು ಡಿಸಿಪಿ ಡಾ ಪಿ.ಎಸ್. ಹರ್ಷಾ ತಿಳಿಸಿದರು.