Advertisement

ಬಾಲಕಾರ್ಮಿಕ ಮುಕ್ತ ಜೈಪುರಕ್ಕೆ ಸ್ಟೋಕ್ಸ್‌ ಬೆಂಬಲ

10:20 PM Apr 03, 2019 | mahesh |

ಜೈಪುರ: ರಾಜಸ್ಥಾನ್‌ ರಾಯಲ್ಸ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ “ಪಿಂಕ್‌ ಸಿಟಿ’ ಜೈಪುರದಲ್ಲಿ ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸುವ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

Advertisement

ಜೈಪುರದಲ್ಲಿ ಬ್ರಿಟಿಷ್‌ ಏಶ್ಯನ್‌ ಟ್ರಸ್ಟ್‌ ನಡೆಸುವ ಯೋಜನೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾರ್ಯವೂ ಒಂದಾಗಿದೆ. ಬ್ರಿಟಿಷ್‌ ಏಶ್ಯನ್‌ ಟ್ರಸ್ಟ್‌, ರಾಜ್ಯ ಮತ್ತು ಜಿಲ್ಲಾ ಸರಕಾರ, ಜೈಪುರದ ಬ್ಯುಸಿನೆಸ್‌, ಸಿವಿಲ್‌ ಸೊಸೈಟಿ ಸಂಸ್ಥೆಗಳು ಮತ್ತು ಸ್ಥಳೀಯ ಸಂಘಗಳ ಸಹಯೋಗದಲ್ಲಿ ಬಾಲಕಾರ್ಮಿಕ ಮುಕ್ತ ಜೈಪುರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಬೆನ್‌ ಸ್ಟೋಕ್ಸ್‌ ಕೈಜೋಡಿಸಿದ್ದಾರೆ.

ಇಲ್ಲಿನ ಮಾನಸ ಸರೋವರದಲ್ಲಿರುವ ಗ್ಯಾನ್‌ ಆಶ್ರಮಕ್ಕೆ ಭೇಟಿ ನೀಡಿದ ಸ್ಟೋಕ್ಸ್‌, ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಿ ಪಡೆದು ನೆಲೆಸಿರುವ ಮಕ್ಕಳ ಗಲ್ಲಿ ಕ್ರಿಕೆಟ್‌ ನೋಡಿ ಸಂಭ್ರಮಿಸಿದರು.

“ಯಾರಿಂದ ಸಾಧ್ಯವಾಗುತ್ತದೋ ಅಂಥವರು ಮುಂದೆ ಬಂದು ಬಾಲ ಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಿ ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕು. ಈ ಮಕ್ಕಳೇ ನಾಳೆಯ ಭವಿಷ್ಯ. ಹೀಗಾಗಿ ಅವರು ಉತ್ತಮ ರೀತಿಯನ್ನು ಬದುಕು ಸಾಗಿಸಲು ಅವಕಾಶ ಕಲ್ಪಿಸಲು ಇದೇ ನ್ಯಾಯಯುತ ಮಾರ್ಗ’ ಎಂದು ಸ್ಟೋಕ್ಸ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next