ಮುಂಬಯಿ : ಕೋಲ್ ಇಂಡಿಯಾ, ಟಾಟಾ ಮೋಟರ್ ಮತ್ತು ಎಸ್‌ಬಿಐ ಶೇರುಗಳ ಭರಾಟೆಯ ಖರೀದಿಯ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 34,487.52 ಅಂಕಗಳ ಸಾರ್ವಕಾಲಿಕ ಎತ್ತರವನ್ನು ತಲುಪಿತು. ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,659.15 ಅಂಕಗಳ ಸಾರ್ವಕಾಲಿಕ ಎತ್ತರವನ್ನು ದಾಖಲಿಸಿತು.
ನಿರಂತರ ಮೂರನೇ ದಿನದ ವಹಿವಾಟಿನಲ್ಲಿಂದು ಸೆನ್ಸೆಕ್ಸ್ 134.73 ಅಂಕಗಳ ಜಿಗಿತವನ್ನು ಪಡೆದುಕೊಂಡಿತು. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್‌ಸ 559.41 ಅಂಕಗಳನ್ನು ಸಂಪಾದಿಸಿದೆ.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 73.08 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,425.87 ಅಂಕಗಳ ಮಟ್ಟದಲ್ಲೂ ನಿಫ್ಟಿ 6.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,630.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕೋಲ್ ಇಂಡಿಯಾ, ಟಾಟಾ ಮೋಟರ್, ಇನ್‌ಫೋಸಿಸ್, ರಿಯಲನ್ಸ್ ಮತ್ತು ಐಟಿಸಿ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಕೋಲ್ ಇಂಡಿಯಾ, ಐಡಿಯಾ ಸೆಲ್ಯುಲರ್, ಟಾಟಾ ಮೋಟರ್, ರಿಲಯನ್ಸ್, ಎಸ್ ಬ್ಯಾಂಕ್; ಟಾಪ್ ಲೂಸರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಈಶರ್ ಮೋಟರ್, ಎಚ್‌ಸಿಎಲ್ ಟೆಕ್, ಬಜಾಜ್ ಆಟೋ, ಹಿಂಡಾಲ್ಕೋ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಬೆಳಗ್ಗೆ 2,730 ಶೇರುಗಳು ವಹಿವಾಟಿಗೆ ಒಳಪಟ್ಟವು; 1,423 ಶೇರುಗಳು ಮುನ್ನಡೆ ಸಾಧಿಸಿದವು; 1,204 ಶೇರುಗಳು ಹಿನ್ನಡೆಗೆ ಗುರಿಯಾದವು; 103 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.