ಮುಂಬಯಿ : ಸೆಪ್ಟಂಬರ್ ತಿಂಗಳ ವಾಯಿದೆ ವಹಿವಾಟು (F&O) ಚುಕ್ತಾ ಮಾಡುವ ಅಂತಿಮ ದಿನವಾಗಿರುವ ಇಂದು ಗುರುವಾರ, ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಮಂದಗತಿಯ ವಹಿವಾಟಿಗೆ ಸಾಕ್ಷಿಯಾಗಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,700 ಅಂಕಗಳ ಮಟ್ಟದ ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿದೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್‌ಸ 41.10 ಅಂಕಗಳ ಮುನ್ನಡೆಯನ್ನು ಸಾಧಿಸಿ 31,2100.91 ಅಂಕಗಳ ಮಟ್ಟದಲ್ಲೂ , ನಿಫ್ಟಿ ಸೂಚ್ಯ,ಕ 2.15 ಅಂಕಗಳ ನಷ್ಟದೊಂದಿಗೆ 9,733.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬ್ಯಾಂಕ್ ನಿಫ್ಟಿ ಇಂದಿನ ಆರಂಭಿಕ ವಹಿವಾಟಿನಲ್ಲಿ 17.70 ಅಂಕಗಳ ಏರಿಕೆಯನ್ನು ದಾಖಲಿಸಿದರೆ ನಿಫ್ಟಿ ಐಟಿ 52.50 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಮಾರುತಿ ಸುಜುಕಿ, ಐಟಿಸಿ, ಡಾ. ರೆಡ್ಡೀಸ್ ಲ್ಯಾಬ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಎಸಿಸಿ, ಡಾ. ರೆಡ್ಡಿ, ಹಿಂಡಾಲ್ಕೊ, ಐಟಿಸಿ, ಸನ್ ಫಾರ್ಮಾ ಶೇರುಗಳು ಕಾಣಿಸಿಕೊಂಡರೆ ಟಾಪ್ ಲೂಸರ್‌ಗಳಾಗಿ ಏಶ್ಯನ್ ಪೇಂಟ್ಸ್, ಬಿಪಿಸಿಎಲ್, ಅರಬಿಂದೋ ಫಾರ್ಮಾ, ಈಶರ್ ಮೋಟರ್, ಗೇಲ್ ಶೇರುಗಳು ಕಾಣಿಸಿಕೊಂಡವು.