ನವದೆಹಲಿ: ಸತತವಾಗಿ ಏರುಗತಿಯಲ್ಲಿ ಸಾಗುತ್ತಿದ್ದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಹಾಗೂ ಷೇರುದಾರರು ಅಧಿಕ ಲಾಭಾಂಶ ಕಾಯ್ದಿರಿಸಿದ ಪರಿಣಾಮ ಬುಧವಾರ(ಅಕ್ಟೋಬರ್ 20) 456 ಅಂಕಗಳಷ್ಟು ಕುಸಿತ ಕಾಣುವ ಮೂಲಕ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಬಾಲಿವುಡ್ ಮಾಧಕ ಜಾಲದ ಜಾತಕ : ಆರ್ಯನ್ ಮಾತ್ರವಲ್ಲ..!
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 456.09 ಅಂಕ ಇಳಿಕೆಯಾಗಿದ್ದು, 61,259.96 ಅಂಕಗಳಲ್ಲಿ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 152,15 ಅಂಕ ಕುಸಿತ ಕಂಡಿದ್ದು, 18, 266 ಗಡಿ ತಲುಪಿದೆ.
ಸೆನ್ಸೆಕ್ಸ್ ಇಳಿಕೆಯ ಪರಿಣಾಮ ಟೈಟಾನ್, ಎಚ್ ಯುಎಲ್, ಎನ್ ಟಿಪಿಸಿ, ಬಜಾಜ್ ಫಿನ್ ಸರ್ವ್, ಎಲ್ ಆ್ಯಂಡ್ ಟಿ ಮತ್ತು ಪವರ್ ಗ್ರಿಡ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.
ಜಾಗತಿಕ ಷೇರುಮಾರುಕಟ್ಟೆಯಾದ ಏಷ್ಯಾ, ಹಾಂಗ್ ಕಾಂಗ್ ಮತ್ತು ಟೋಕಿಯೋದಲ್ಲಿ ಲಾಭದ ವಹಿವಾಟು ನಡೆದಿದ್ದು, ಶಾಂಘೈ ಮತ್ತು ಸಿಯೋಲ್ ಷೇರುಪೇಟೆ ವಹಿವಾಟು ನಷ್ಟ ಅನುಭವಿಸಿದೆ.