ನವದೆಹಲಿ: ಕೇಂದ್ರ ಬಜೆಟ್ ಫೆ.1ರಂದು ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ (ಜನವರಿ 31) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:ಮತ್ತೆ ಮೊಳಗಲಿದೆ ಕಂಬಳದ ಕಹಳೆ: ಕಂಬಳ ಕೂಟದ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಇಂದು ಮಧ್ಯಾಹ್ನ 12.30ರ ಹೊತ್ತಿಗೆ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 1,015 ಅಂಕಗಳಷ್ಟು ಏರಿಕೆಯಾಗಿದ್ದು, 58,215 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 300 ಅಂಕ ಏರಿಕೆಯೊಂದಿಗೆ 17,402 ಅಂಕಗಳ ಮಟ್ಟ ತಲುಪಿದೆ.
ಟೆಕ್ ಮಹೇಂದ್ರ ನಿಫ್ಟಿ, ಬಿಪಿಸಿಎಲ್, ವಿಪ್ರೋ, ಇನ್ಫೋಸಿಸ್ ಮತ್ತು ರಿಲಯನ್ಸ್ ಷೇರುಗಳು ಲಾಭಗಳಿಸಿದೆ. ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯುಪಿಎಲ್, ಎಚ್ ಡಿಎಫ್ ಸಿ ಲೈಫ್ ಮತ್ತು ಕೋಲ್ ಇಂಡಿಯಾ ಷೇರುಗಳು ನಷ್ಟ ಕಂಡಿದೆ.
ಬಿಎಸ್ ಇ ಸೆನ್ಸೆಕ್ಸ್ ನಲ್ಲಿ ಟೆಕ್ ಮಹೀಂದ್ರ, ವಿಪ್ರೋ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಡಾ.ರೆಡ್ಡೀಸ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ಶೇ.4.31ರಷ್ಟು ಲಾಭಗಳಿಸಿದೆ.
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಶುಕ್ರವಾರ (ಜನವರಿ 28) 77 ಅಂಕಗಳಷ್ಟು ಇಳಿಕೆಯೊಂದಿಗೆ 57, 200 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 8 ಅಂಕಗಳ ಅಲ್ಪ ಇಳಿಕೆಯೊಂದಿಗೆ 17,102 ಅಂಕಗಳ ಮಟ್ಟ ತಲುಪಿತ್ತು.