ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ(ಅಕ್ಟೋಬರ್ 4) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 350 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸಿದೆ.
ಇದನ್ನೂ ಓದಿ:ದತ್ತ ಪೀಠವೇ ಬೇರೆ, ಬಾಬಾ ಬುಡನ್ ದರ್ಗಾವೇ ಬೇರೆ ಮುಸಲ್ಮಾನರು ಕಣ್ತೆರೆದು ನೋಡಬೇಕು
ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 59,156.62 ಅಂಕಕ್ಕೆ ತಲುಪಿದ್ದು, ಬಳಿಕ 340.95 ಅಂಕ ಏರಿಕೆಯಾಗಿದ್ದು, 59,106.53 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 98.40 ಅಂಕಗಳಷ್ಟು ಏರಿಕೆಯಾಗಿದ್ದು, 17,630.45 ಅಂಕಗಳ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯೊಂದಿಗೆ ಭಾರ್ತಿ ಏರ್ ಟೆಲ್, ಡಾ.ರೆಡ್ಡೀಸ್, ಎಸ್ ಬಿಐ, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿದೆ. ಅಲ್ಲದೇ ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ, ಎಚ್ ಯುಎಲ, ಟೈಟಾನ್ ಮತ್ತು ಪವರ್ ಗ್ರಿಡ್ ಷೇರುಗಳು ನಷ್ಟ ಕಂಡಿದೆ.
ಶುಕ್ರವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 360.78 ಅಂಕಗಳಷ್ಟು ಇಳಿಕೆಯಾಗಿದ್ದು, 58,765.58 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 86.10 ಅಂಕ ಇಳಿಕೆಯಾಗಿದ್ದು, 17,532.05 ಅಂಕಗಳ ಮಟ್ಟ ತಲುಪಿತ್ತು.