Advertisement

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 534 ಅಂಕ ಏರಿಕೆ, ನಿಫ್ಟಿ 17,691; ವಹಿವಾಟು ಅಂತ್ಯ

04:34 PM Oct 04, 2021 | Team Udayavani |

ಮುಂಬಯಿ: ಸತತ ಎರಡು ದಿನಗಳ ಕಾಲ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆ ವಹಿವಾಟು ಸೋಮವಾರ(ಅಕ್ಟೋಬರ್ 04) ಸಂವೇದಿ ಸೂಚ್ಯಂಕ 534 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.

Advertisement

ಇದನ್ನೂ ಓದಿ:ದೇಶಾದ್ಯಂತ ಬಿಜೆಪಿ ಸರಕಾರ ಭಯದ ವಾತಾವರಣ ಸೃಷ್ಟಿಸಿದೆ:ಶಿವಾನಂದ ಕಡತೋಕ

ಬಾಂಬೆ ಷೇರು ಸಂವೇದಿ ಸೂಚ್ಯಂಕ 533.74 ಅಂಕಗಳಷ್ಟು ಏರಿಕೆಯಾಗಿದ್ದು, 59,299.32 ಅಂಕಗಳ ವಹಿವಾಟಿನೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 159.20 ಅಂಕ ಏರಿಕೆಯಾಗಿದ್ದು, 17,691.25 ಅಂಕಗಳ ಮಟ್ಟ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯೊಂದಿಗೆ ಎನ್ ಟಿಪಿಸಿ, ಬಜಾಜ್ ಫಿನ್ ಸರ್ವ್, ಎಸ್ ಬಿಐ, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಡಾ.ರೆಡ್ಡೀಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಆಟೋ, ಎಚ್ ಯುಎಲ್, ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್ ಹಾಗೂ ಟೈಟಾನ್ ಷೇರುಗಳು ನಷ್ಟ ಕಂಡಿವೆ.

ಇಂದು ಬೆಳಗ್ಗೆಯೂ  ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ(ಅಕ್ಟೋಬರ್ 4) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 350 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next