Advertisement
ಶೇರು ವ್ಯವಹಾರದಲ್ಲಿ ಹಣ ತೊಡಗಿಸುವ ಮನಸ್ಸಾಗುತ್ತದೆ ಅಂದುಕೊಳ್ಳಿ. ಆಗ ಹಣ ಹೊಂದಿಸುವುದು ದೊಡ್ಡ ಸಮಸ್ಯೆಯಾಗುವುದಿಲ್ಲ. ನಾವು ಖರೀದಿಸುವ ಶೇರಿನಿಂದ ಕಡಿಮೆ ಲಾಭ ಸಿಗಬಹುದೆಂಬ ಚಿಂತೆಯೂ ಅಷ್ಟಾಗಿ ಬಾಧಿಸುವುದಿಲ್ಲ. ನಿಜವಾಗಿಯೂ ಕಷ್ಟ ಅನ್ನಿಸಬಹುದು. ಯಾವ ಶೇರಿನಲ್ಲಿ ಹಣ ಹೂಡಬೇಕು ಎಂಬುದೇ ಆಗಿದೆ. ಅಂದರೆ, ದೀರ್ಘಾವಧಿಗೆ ಹಣ ಹೂಡಲು ಯಾವ ಶೇರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಗೊತ್ತಾಗದೆ ಪರದಾಡುವ ಹಾಗಾಗುತ್ತದೆ. ಇಂಥ ಸಂದರ್ಭಗಳಲ್ಲೆಲ್ಲಾ- ಫಂಡಮೆಂಟಲ್ ಅಥವಾ ಮೂಲಭೂತ ಅಧ್ಯಯನ ಅಗತ್ಯ. ಒಂದು ಶೇರನ್ನು ದೀರ್ಘಕಾಲಕ್ಕೆ ಖರೀದಿಸುವುದಾದರೆ ಮುಖ್ಯವಾಗಿ ಈ ಕೆಳಗಿನ ಒಂದಲ್ಲೊಂದು ಸೂತ್ರಗಳನ್ವಯ ಅಧ್ಯಯನ ಮಾಡಿ ಖರೀದಿ ಮಾಡಬಹುದು.
2. ಹೆಚ್ಚಿನ ಡಿವಿಡೆಂಡ್ ಯೀಲ್ಡ…
3. ಭವಿಷ್ಯದ ಬೆಳವಣಿಗೆ (Growth) 1. P/E ಹಾಗೂ P/BV ಅನುಪಾತ
P ಅಂದರೆ ಪ್ರೈಸ್ ಅಥವಾ ಮಾರುಕಟ್ಟೆಯ ಬೆಲೆ.
E ಅಂದರೆ ಅರ್ನಿಂಗ್ಸ್ ಪರ್‌ಶೇರ್ (E.P.S)
Related Articles
ಮುಖ ಬೆಲೆ(ಫೇಸ್ ವಾಲ್ಯೂ) = ರೂ 10, ಶೇರು ಸಂಖ್ಯೆ = 10 ಲಕ್ಷ
ಹಾಗಾಗಿ, ಶೇರ್ ಕ್ಯಾಪಿಟಲ್ = ರೂ 1 ಕೋಟಿ, ವಾರ್ಷಿಕ ಲಾಭ = ರೂ 8 ಲಕ್ಷ
ಡಿವಿಡೆಂಡ್ = ರೂ 2 ಲಕ್ಷ, ಹಾಗಾಗಿ, ಮರುಹೂಡಿಕೆ = ರೂ 6 ಲಕ್ಷ
ಇಲ್ಲಿ ಅರ್ನಿಂಗ್ಸ್ ಪರ್‌ಶೇರ್ (E.P.S) = ಲಾಭ/ಶೇರು ಸಂಖ್ಯೆ= 8/10 = ರೂ 0.8
ನೆಟ್ ವರ್ಥ್ = ಶೇರ್ ಕಾಪಿಟಲ್+ ಮರುಹೂಡಿಕೆ = 1 ಕೋಟಿ+ 6 ಲಕ್ಷ = ರೂ 1.06 ಕೋಟಿ (106 ಲಕ್ಷ)
ಬುಕ್ ವಾಲ್ಯು = ನೆಟ್ ವರ್ಥ…/ಶೇರು ಸಂಖ್ಯೆ= 106/10= ರೂ 10.6
Advertisement
ಸದ್ಯದ ಶೇರು ಮಾರುಕಟ್ಟೆ ಬೆಲೆ = ರೂ 20.
ಹಾಗಾಗಿ, ಅರ್ನಿಂಗ್ಸ್ ಪರ್‌ಶೇರ್ (E.P.S) = ಲಾಭ/ಶೇರು ಸಂಖ್ಯೆ = 8/10 = ರೂ 0.8
P/E = ಪ್ರೈಸ್/ಇ.ಪಿ.ಎಸ್=20/0.8 = 25 P/BV = ಪ್ರೈಸ್/ಬುಕ್ ವಾಲ್ಯು=20/10.6 = 1.88 P/E ಅನುಪಾತವು ಒಂದು ಕಂಪೆನಿಯ ಶೇರನ್ನು ಜನತೆ ಆ ಶೇರಿನ ವಾರ್ಷಿಕ ಆದಾಯದ ಎಷ್ಟು ಪಟ್ಟು ಹೆಚ್ಚು ಬೆಲೆಗೆ ಕೊಂಡುಕೊಳ್ಳುತ್ತಾರೆ ಎಂಬುದನ್ನು ಸೂಚಿಸುತ್ತದೆ. ಉದಾಹರಣೆಯಲ್ಲಿರುವ ಈ ಕಂಪೆನಿಯ ಶೇರುಗಳನ್ನು ಜನರು ವಾರ್ಷಿಕ ಆದಾಯದ 25 ಪಟ್ಟು ಬೆಲೆಗೆ ಕೊಳ್ಳುತ್ತಾರೆ. ಈ ಪ್ರೀಮಿಯಂ ಬೆಲೆ, ಕಂಪೆನಿಯ ಭವಿಷ್ಯದ ಆದಾಯದ ಬಗ್ಗೆ ಜನರು ತಾಳಿರುವ ಭರವಸೆ ಮತ್ತು ಹೊಂದಿರುವ ನಿರೀಕ್ಷೆಯೇ ಆಗಿದೆ. ಜಾಸ್ತಿ ಭವಿಷ್ಯದ ಬಗ್ಗೆ ಭರವಸೆ ಇಡಬಹುದಾದ ಕಂಪೆನಿಯ ಪಿ/ಇ ಜಾಸ್ತಿ ಇರುತ್ತದೆ. ಇದೇ ವಾದವನ್ನು P/BV ಮೇಲೂ ಅನ್ವಯಿಸಬಹುದು. ಇಲ್ಲಿ ಲೆಕ್ಕಾಚಾರಕ್ಕೆ ಅರ್ನಿಂಗ್ಸ್ ಬದಲು ಬುಕ್ ವಾಲ್ಯೂವನ್ನು ತೆಗೆದುಕೊಳ್ಳುತ್ತಾರೆ ಅಷ್ಟೆ. ಈ ರೀತಿ ಒಂದು ಕಂಪೆನಿಯ ಮೌಲ್ಯಮಾಪನವನ್ನು ಪಿ/ಇ ರೇಶಿಯೋದ ಮೂಲಕ ನೋಡಿ ಖರೀದಿಸುವುದನ್ನು ಪಿ/ಇ ಸ್ಟ್ರಾಟಜಿ ಅನ್ನುತ್ತಾರೆ. ಹಾಗೂ ಪಿ/ಬಿವಿ ನೋಡಿ ಖರೀದಿಸುವುದಕ್ಕೆ ಬುಕ್ ವಾಲ್ಯೂ ಸ್ಟ್ರಾಟಜಿ ಅನ್ನುತ್ತಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಶೇರುಗಳನ್ನು ಖರೀದಿಸಲು ಇದು ಉತ್ತಮ ದಾರಿ. ಆ ನಿಟ್ಟಿನಲ್ಲಿ ಇವೆರಡೂ ಉತ್ತಮ ಮಾಪನ ಹೌದು. ಆದರೆ ಇದನ್ನು ಕಣ್ಣುಮುಚ್ಚಿ ಅನುಸರಿಸುವುದರಲ್ಲಿ ಕೂಡಾ ಅಪಾಯ ಕಾದಿದೆ. ಕೆಲವೊಮ್ಮೆ ಒಂದು ಕಂಪೆನಿಯು ಯಾವುದೋ ವ್ಯಾವಹಾರಿಕ ತೊಂದರೆ ಅಥವಾ ಅನನುಕೂಲಕ್ಕೆ ಸಿಲುಕಿಕೊಂಡು ಅದರ ಭವಿಷ್ಯದ ಆದಾಯ ಇಂಡಸ್ಟ್ರಿಯ ಇತರ ಕಂಪೆನಿಗಳಿಂದ ಕ್ಷೀಣವಾಗಿ ಕಾಣಬಹುದು. ಅಂತಹ ಸಂದರ್ಭದಲ್ಲಿ ಆಹಾ, ಇÇÉೊಂದು ಚೀಪ್ ಪಿ/ಇ ಯ ಶೇರಿದೆ ಎಂದು ಖರೀದಿಸಹೊರಟರೆ ಅದು ತಪ್ಪಾದೀತು. ಸತ್ಯಂ ಹಗರಣದ ಬಳಿಕ ಅದರ ಭವಿಷ್ಯವೇ ಡೋಲಾಯಮಾನವಾದ ಸಂದರ್ಭದಲ್ಲಿ ಅದು ಬಹಳ ಕಡಿಮೆ ಪಿ/ಇ ಹಾಗೂ ಪಿ/ಬುಕ್ ವಾಲ್ಯೂಗೆ ಸಿಗುತ್ತಿತ್ತು. ಆದರೆ ಅದು ಅದರ ಭವಿಷ್ಯದ ಬಗ್ಗೆ ಇದ್ದ ಜನರ ಆತಂಕದ ಪ್ರತಿಫಲವಾಗಿತ್ತೇ ವಿನಃ ಯಾವುದೇ ರೀತಿಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಉತ್ತಮ ಶೇರು ಆಗಿರಲಿಲ್ಲ. 2. ಡಿವಿಡೆಂಡ್ ಯೀಲ್ಡ…
ಒಂದು ಕಂಪೆನಿ ವಾರ್ಷಿಕವಾಗಿ ಬರುವ ಲಾಭಾಂಶದ ಒಂದು ಭಾಗವನ್ನು ಮಾತ್ರ ಶೇರುದಾರರೊಡನೆ ಹಂಚಿಕೊಳ್ಳುತ್ತದೆ. ಇನ್ನುಳಿದ ಭಾಗವನ್ನು ಅಭಿವೃದ್ಧಿಗೋಸ್ಕರ ಕಂಪೆನಿಯಲ್ಲೇ ಮರುಹೂಡಿಕೆ ಮಾಡಿಕೊಳ್ಳುತ್ತದೆ. ಉದಾಹರಣೆಗಾಗಿ 10 ರೂಪಾಯಿಯ ಮುಖಬೆಲೆ ಇರುವ ಶೇರುಗಳುಳ್ಳ ಒಂದು ಕಂಪೆನಿಯು ಶೇರೊಂದರ 5 ರೂಪಾಯಿ ಲಾಭ ಗಳಿಸಿದರೆ ಐದಕ್ಕೆ ಐದನ್ನೂ ಡಿವಿಡೆಂಡ್ ರೂಪದಲ್ಲಿ ಹಂಚುವುದಿಲ್ಲ. ಬೆಳವಣಿಗೆ ಮತ್ತು ಹೂಡಿಕೆಯ ಅಗತ್ಯಾನುಸಾರ ಆದಾಯದ ಯಾವುದೋ ಒಂದು ಶತಮಾನದಷ್ಟು ಮಾತ್ರ ಹಂಚಿ ಉಳಿದದ್ದನ್ನು ತನ್ನೊಳಗೇ ಇಟ್ಟುಕೊಳ್ಳುತ್ತದೆ. ಈ ಕಂಪೆನಿಯ ಸಂದರ್ಭದಲ್ಲಿ ಅದು ಆದಾಯದ ಶೇ.90ರಷ್ಟು ಅಂದರೆ ರೂ 4.50 ಯನ್ನು ಡಿವಿಡೆಂಡ್ ರೂಪದಲ್ಲಿ ಹಂಚಿ ಉಳಿದ ಶೇ. 10ರಷ್ಟು ಅಂದರೆ ರೂ 0.50 ಅನ್ನು ರಿಟೈನx… ಅರ್ನಿಂಗ್ ರೂಪದಲ್ಲಿ ಉಳಿಸಿಕೊಳ್ಳುತ್ತದೆ ಅಂದುಕೊಳ್ಳೋಣ. ಈ ರೀತಿ ಜಾಸ್ತಿ ಮೊತ್ತವನ್ನು ಹಂಚುವುದರಿಂದ ಆ ಶೇರಿನ ಆಂತರಿಕ ಮೌಲ್ಯ ಜಾಸ್ತಿ ಏರುವುದೇ ಇಲ್ಲ. ಸಿಕ್ಕಿದ್ದೆಲ್ಲಾ ಹಂಚಿ ಮುಗಿಯುವುದರಿಂದ ಕಂಪೆನಿಯ P/E ಅನುಪಾತ ಜಾಸ್ತಿ ಏರುವ ಸಂಭವ ಕಡಿಮೆ. ಅವುಗಳ ಮಾರುಕಟ್ಟೆಯ ಬೆಲೆ ಕಡಿಮೆ ಇರುತ್ತದೆ. ಅಂತಹ ಶೇರುಗಳ ಆಕರ್ಷಣೆಯೇ ಅವುಗಳ ವಾರ್ಷಿಕ ಡಿವಿಡೆಂಡ್ ಆಗಿದೆ. ಈ ಕಂಪೆನಿ ರೂ 10 ಮುಖ ಬೆಲೆಗೆ 4.50 ರೂ ಡಿವಿಡೆಂಡ್ ಹಂಚುತ್ತದೆ ಅಂದರೆ, ಶೇ. 45ರಷ್ಟು ಡಿವಿಡೆಂಡ್. ಆದರೆ, ಈ ರೂ 10 ಶೇರಿನ ಮಾರುಕಟ್ಟೆ ಬೆಲೆ ರೂ 45 ಇದೆಯಾದರೆ ಮಾರುಕಟ್ಟೆಯ ಬೆಲೆಯ ಆಧಾರದಲ್ಲಿ ಕೊಂಡವನಿಗೆ ಸಿಗುವ ಡಿವಿಡೆಂಡ್ 4.5/45= 10% ಮಾತ್ರವೇ. ಇದನ್ನೇ ಡಿವಿಡೆಂಡ್ ಯೀಲ್ಡ… ಅನ್ನುತ್ತಾರೆ. ಡಿವೆಡೆಂಡ್/ ಮಾರುಕಟ್ಟೆ ಬೆಲೆ
ಈ ದೃಷ್ಟಿಯಲ್ಲಿ ಉತ್ತಮ ಯೀಲ್ಡ… ನೀಡುವ ಕಂಪೆನಿಗಳನ್ನು ಹುಡುಕಿ ಖರೀದಿಸುವುದೇ ಡಿವಿಡೆಂಡ್ ಯೀಲ್ಡ… ಸ್ಟ್ರಾಟಜಿ ಅಥವಾ ತಂತ್ರ. ಇದು ಒಂದು ಪ್ರಸಿದ್ಧ ಹಾಗೂ ಪ್ರಚಲಿತ ತಂತ್ರ. ಇದನ್ನು ಅನುಸರಿಸುವವರು ಬಹಳ ಜನ ಇರುತ್ತಾರೆ. P/E ತಂತ್ರದಲ್ಲಿ ಹೇಳಿದಂತೆ ಇಲ್ಲೂ ಕೂಡಾ ಎಚ್ಚರ ಅಗತ್ಯ. ಹೆಚ್ಚಿನ ವಿವೇಚನೆ ಇಲ್ಲದೆ ಜಾಸ್ತಿ ಡಿವಿಡೆಂಡ್ ಕಾಣುವ ಶೇರನ್ನು ಖರೀದಿಸುವುದು ಅಪಾಯಕಾರಿಯಾಗಬಹುದು. ಆದುದರಿಂದ
1. ಕಂಪೆನಿಯು ಹೆಚ್ಚಿನ ಡಿವಿಡೆಂಡ್ ತೋರಿಸಲು ಕಾರಣವೇನು ಎಂದು ವಿವೇಚಿಸಬೇಕು. ಕಂಪೆನಿಯ ಚರಿತ್ರೆಯನ್ನು ಸ್ವಲ್ಪ ಸ್ಟಡಿ ಮಾಡಿ ಯಾವುದಾದರೂ ಕೆಟ್ಟ ಸುದ್ದಿಯ ಕಾರಣಕ್ಕೆ ಬೆಲೆ ಕುಸಿದು ಕೃತಕವಾಗಿ ಅದು ಜಾಸ್ತಿ ಯೀಲ್ಡ… ತೋರಿಸುತ್ತಿದೆಯೇ ಅಥವಾ ಸ್ವಾಭಾವಿಕವಾಗಿಯೇ ಅದೊಂದು ಜಾಸ್ತಿ ಯೀಲ್ಡಿನ ಕಂಪೆನಿಯೇ ಎಂಬುದನ್ನು ಪರಿಶೀಲಿಸಬೇಕು.
2. ಜಾಸ್ತಿ ಯೀಲ್ಡ… ಅಲ್ಪಕಾಲಿಕವೇ ಅಥವಾ ದೀರ್ಘಕಾಲಿಕವೇ ಎಂಬುದನ್ನೂ ಕೂಡಾ ಪರಾಮರ್ಶಿಸಿಕೊಳ್ಳಬೇಕು. ಕೇವಲ ಕಳೆದ ವರ್ಷ ಮಾತ್ರ ತಾತ್ಕಾಲಿಕವಾಗಿ ಜಾಸ್ತಿ ಡಿವಿಡೆಂಡ್ ನೀಡಿದ ಕಂಪೆನಿಯು ಹಿಂದಿನ ಇತರ ವರ್ಷಗಳಲ್ಲಿ ಕಡಿಮೆ ಡಿವಿಡೆಂಡ… ನೀಡಿರಬಹುದು. ಅದು ಭವಿಷ್ಯದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ವಿವೇಚನೆಯಿರಲಿ.
3. ಭವಿಷ್ಯದಲ್ಲಿ ಕಂಪೆನಿಯ ಸಾಧನೆಯ ಬಗ್ಗೆ ಆಲೋಚನೆಯಿರಲಿ. ಕಮಾಡಿಟಿಯಂತಹ ಏರಿಳಿಯುವ ಕ್ಷೇತ್ರದಲ್ಲಿ ಏನನ್ನೂ ನಂಬುವಂತಿಲ್ಲ. ಎಲ್ಲವೂ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
4. ಕಂಪೆನಿಯ ಒಟ್ಟಾರೆ ಹಣಕಾಸಿನ ಸ್ಥಿತಿಗತಿಯ ಮೇಲೆ ಕೂಡಾ ಗಮನವಿಟ್ಟುಕೊಳ್ಳಬೇಕು. ಒಂದೆರಡು
ಕೆಟ್ಟ ವರ್ಷಗಳು ಬಂದರೆ ಹೆಚ್ಚಿನ ಡಿವಿಡೆಂಡ್ ಪಾಲಿಸಿಯನ್ನು ಮುಂದುವರಿಸಿಕೊಂಡು ಹೋಗಲು ಕಂಪೆನಿಯಿಂದ ಸಾಧ್ಯವೇ ಎಂಬುದನ್ನೂ ಕೂಡಾ ವಿಶ್ಲೇಷಿಸಿಕೊಳ್ಳಿ. 3. ಬೆಳವಣಿಗೆ (Growth)
ಬೆಳವಣಿಗೆ ಅಥವಾ ಪ್ರಗತಿ ಒಂದು ಕಂಪೆನಿಯ ಅತಿಮುಖ್ಯ ಅಂಗ. ಪ್ರತಿಯೊಬ್ಬ ಶೇರು ಖರೀದಿಗಾರನೂ ತಾನು ಖರೀದಿಸಿದ ಶೇರು ಬೆಳೆಯಬೇಕೆಂಬ ಆಸೆಯನ್ನೇ ಇಟ್ಟುಕೊಳ್ಳುತ್ತಾನೆ. ಹಾಗೂ ಆ ಕಾರಣಕ್ಕಾಗಿಯೇ ಅದಕ್ಕೆ ಇಂದಿನ ಆಂತರಿಕ ಮೌಲ್ಯ (ನೆಟ್ ವರ್ಥ್) ಕ್ಕಿಂತ ಹೆಚ್ಚಿನ ಬೆಲೆಕೊಟ್ಟು ಕೊಳ್ಳಲು ಸಿದ್ಧನಿರುತ್ತಾನೆ. ಬಹಳ ಜನರು ಈ ರೀತಿ ಸ್ಪರ್ಧಾಮನೋಭಾವದಿಂದ ಒಂದು ಶೇರಿನ ಹಿಂದೆ ಬೀಳುವಾಗ ಅದರ ಬೇಡಿಕೆ-ಪೂರೈಕೆಯಿಂದಾಗಿ ಬೆಲೆ ಮೇಲೇರುತ್ತದೆ. ಬೆಳವಣಿಗೆ ಕಂಪೆನಿಯ ಆಂತರಿಕ ಮೌಲ್ಯವನ್ನು ಹೆಚ್ಚಿಸಿ ಶೇರನ್ನು ಎಲ್ಲರೂ ಬಯಸಿ, ಖರೀದಿಸಿ ಇಟ್ಟುಕೊಳ್ಳುವಂತೆ ಮಾಡುತ್ತದೆ. ಹೆಚ್ಚು ಡಿವಿಡೆಂಡ್ ಪಾವತಿಸದೆ ಆದಾಯವನ್ನು ಮರುಹೂಡಿಕೆ ಮಾಡುವುದು ಗ್ರೋಥ್ ಶೇರುಗಳ ಮುಖ್ಯ ಲಕ್ಷಣ. ಈ ಶೇರುಗಳು ಬಂದ ಆದಾಯವನ್ನು ಆದಷ್ಟು ಮಟ್ಟಿಗೆ ಮರುಹೂಡಿ ಇನ್ನಷ್ಟು ಅಭಿವೃದ್ಧಿಯನ್ನು ಉಂಟುಮಾಡಿ ಮೌಲ್ಯವನ್ನು ವರ್ಧಿಸುತ್ತಾ ಹೋಗುತ್ತವೆ. ಗ್ರೋಥ್ ಶೇರುಗಳ ಮಾಪನ ಹೇಗೆ? ಅವನ್ನು ಎಷ್ಟು ಬೆಲೆಗೆ ಕೊಂಡುಕೊಳ್ಳಬಹುದು? ಅವಕ್ಕೇನಾದರೂ ಮಾರ್ಗಸೂಚಿ ಇದೆಯೇ? ಪ್ರೈಸ್/ಅರ್ನಿಂಗ್ಸ್ ಪರ್ ಶೇರ್= P/E ಅನುಪಾತ ಎಂಬುದನ್ನು ಈ ಮೊದಲೇ ನೋಡಿದ್ದೆವಷ್ಟೆ? ಆದಾಯದ ಎಷ್ಟು ಪಟ್ಟು ಮಾರುಕಟ್ಟೆ ಬೆಲೆಯಿದೆ ಎಂಬುದನ್ನು ಅದು ತೋರಿಸುತ್ತದೆ. ಈಗ ಅದೇ P/E ಅನುಪಾತವನ್ನು ಎ ಅಥವ ಗ್ರೋಥ್‌ನಿಂದ ಭಾಗಿಸಿದಾಗ PEG Ratio ದೊರೆಯುತ್ತದೆ. ಅಂದರೆ, PEG = P/E ratio/G
ಒಂದು ಕಂಪೆನಿಯ P/E ratio 20 ಆಗಿದ್ದರೆ ಮತ್ತು ಅದರ ವಾರ್ಷಿಕ ಆದಾಯದ ಬೆಳವಣಿಗೆ 10% ಇದ್ದಲ್ಲಿ ಆ ಕಂಪೆನಿಯ PEG = 20/10 = 2 ಆಗಿರುತ್ತದೆ. ಖರೀದಿಸುವಾಗ PEG ಕಡಿಮೆಯಿದ್ದಷ್ಟೂ ಒಳ್ಳೆಯದು. ದಶಮಾಂಶದಲ್ಲಿದ್ದರೆ ಉತ್ತಮ. ಜಾಸ್ತಿಯಾದಂತೆ ಜಾಸ್ತಿ ಬೆಲೆ ಕೊಡುತ್ತಿದ್ದೀರಿ ಎಂದರ್ಥ. ಗ್ರೌಥ್ ಶೇರುಗಳು ಕಡಿಮೆ ಡಿವಿಡೆಂಡ್ ನೀಡುವ ಕಾರಣ ನಾವುಗಳು ಅದರ ಬೆಳವಣಿಗೆಯನ್ನೇ ಅವಲಂಬಿಸಿ ಇರಬೇಕಾಗುತ್ತದೆ. ಖರೀದಿಸಿದ ಮೇಲೆ ಯಾವುದೇ ಕಾರಣಕ್ಕೆ ಕಂಪೆನಿಯ ಸಾಧನೆ/ಬೆಳವಣಿಗೆ ಕಡಿಮೆಯಾದರೆ ಬೆಲೆ ಕುಸಿದೀತು. ಹಾಕಿದ ದುಡ್ಡು ನಷ್ಟವಾದೀತು. ಹಾಗಾಗಿ, ಶೇರು ಖರೀದಿಗೆ ಹೊರಟವರು ಪ್ರತಿ ಹೆಜ್ಜೆ ಇಡುವ ಮೊದಲು ಹತ್ತತ್ತು ಬಾರಿ ಯೋಚಿಸಿಯೇ ಮುಂದಡಿ ಇಡಬೇಕು. – ಜಯದೇವ ಪ್ರಸಾದ ಮೊಳೆಯಾರ