ಮುಂಬಯಿ: ವಿದೇಶಿ ಬಂಡವಾಳದ ಒಳಹರಿವಿನ ಪರಿಣಾಮ ಮುಂಬಯಿ ಷೇರುಮಾರುಕಟ್ಟೆ ಶುಕ್ರವಾರ(ಫೆ.12, 2021) ಆರಂಭಿಕ ವಹಿವಾಟಿನಲ್ಲಿಯೇ 100ಕ್ಕೂ ಅಧಿಕ ಅಂಕಗಳಷ್ಟು ಏರಿಕೆ ಕಂಡಿದ್ದು, ಇದರಿಂದ ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.
ಇದನ್ನೂ ಓದಿ:ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಏರಿಕೆ : ಮಹಾನಗರಗಳಲ್ಲಿ ಇಂದಿನ ಬೆಲೆ ಎಷ್ಟು..?
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 141.75 ಅಂಕಗಳಷ್ಟು ಏರಿಕೆಯಾಗಿದ್ದು, 51,673.27 ಅಂಕಗಳ ದಾಖಲೆಯ ವಹಿವಾಟಿಗೆ ಸಾಕ್ಷಿಯಾಗಿದೆ. ಎನ್ ಎಸ್ ಇ ನಿಫ್ಟಿ ಕೂಡಾ 36.50ಅಂಕಗಳಷ್ಟು ಏರಿಕೆಯಾಗಿ 15, 209.80 ಅಂಕಗಳ ಗಡಿ ತಲುಪಿದೆ.
ಷೇರು ಸೂಚ್ಯಂಕ ಏರಿಕೆಯಿಂದ ಇನ್ಫೋಸಿಸ್ ಪ್ರಮುಖವಾಗಿ ಲಾಭ ಕಂಡಿದ್ದು, ಟೆಕ್ ಮಹೀಂದ್ರಾ, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ ಬ್ಯಾಂಕ್, ಟಿಸಿಎಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿವೆ.
ಏತನ್ಮಧ್ಯೆ ಐಟಿಸಿ, ಒಎನ್ ಜಿಸಿ, ಭಾರ್ತಿ ಏರ್ ಟೆಲ್, ಎಸ್ ಬಿಐ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ. ಗುರುವಾರ (ಫೆ.11) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 222.13 ಅಂಕಗಳಷ್ಟು ಏರಿಕೆಯೊಂದಿಗೆ 51.531.52 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿತ್ತು. ನಿಫ್ಟಿ 15,173.30ರ ಗಡಿ ತಲುಪಿತ್ತು.