Advertisement

ಮಹಿಳಾ ಸಬಲೀಕರಣಕ್ಕೆ ಹೊಲಿಗೆ ವೃತ್ತಿ ಸಹಕಾರಿ : ಕೆ. ಎಂ. ಉಡುಪ

03:45 AM Jul 04, 2017 | Team Udayavani |

ಉಡುಪಿ: ಮಹಿಳಾ ಸಬಲೀಕರಣಕ್ಕೆ ಹೊಲಿಗೆ ವೃತ್ತಿ ತುಂಬ ಸಹಕಾರಿ. ಮನೆಯಲ್ಲೇ ಇದ್ದು ಹೊಲಿಗೆ, ಕಸೂತಿ ಮತ್ತು ವಸ್ತ್ರ ವಿನ್ಯಾಸದ ವೃತ್ತಿ ಕೈಗೊಂಡು ಉತ್ತಮ ಆದಾಯ ಗಳಿಸಬಹುದು. ಶಿಬಿರಾರ್ಥಿಗಳು ಶ್ರಮ ವಹಿಸಿದಲ್ಲಿ ಈ ಕ್ಷೇತ್ರದಲ್ಲಿ ಯಶಸ್ಸು ಖಂಡಿತ ಎಂದು ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ ಹೇಳಿದರು.

Advertisement

ಸಿಂಡಿಕೇಟ್‌ ಬ್ಯಾಂಕ್‌ ಕಾರ್ಪೊರೇಟ್‌ ಕಚೇರಿ ಬೆಂಗಳೂರು ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಮಹಿಳೆಯರಿಗೆ 3 ವಾರಗಳ ಹೊಲಿಗೆ ತರಬೇತಿಯ ಉದ್ಘಾಟನೆಯಲ್ಲಿ  ಮಾತನಾಡಿದರು. 

ಸಿಂಡಿಕೇಟ್‌ ಬ್ಯಾಂಕಿನ ಮಹಾಪ್ರಬಂಧಕ ಸತೀಶ್‌ ಕಾಮತ್‌ ಉದ್ಘಾಟಿಸಿ ಮಾತನಾಡಿ ವೃತ್ತಿಪರ ಶಿಕ್ಷಣ ಎಲ್ಲ ಸ್ವ ಉದ್ಯೋಗ ಆಕಾಂಕ್ಷಿ ಮಹಿಳೆಯರಿಗೆ ಅತ್ಯಗತ್ಯ. ತರಬೇತಿ ಪಡೆಯಲು ಬಂದ ಮಹಿಳೆಯರು ಸಂಪನ್ಮೂಲ ವ್ಯಕ್ತಿಗಳಿಂದ ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಇಲ್ಲಿ ತರಬೇತಿ ಪಡೆದ ಮಹಿಳೆಯರು ಸೊÌàದ್ಯೋಗ ಕೈಗೊಳ್ಳುವುದಾದಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಮೂಲಕ  ಕೇಂದ್ರ, ರಾಜ್ಯ ಸರಕಾರಗಳಿಂದ ಪ್ರಾಯೋಜಿಸಲ್ಪಟ್ಟ  ಮುದ್ರಾ ಯೋಜನೆಯಡಿಯಲ್ಲಿ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು ಎಂದರು. ಸಂಪನ್ಮೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ್‌ ಭಟ್‌ ಉಪಸ್ಥಿತರಿದ್ದರು. ಉಡುಪಿ, ದ.ಕ., ಕಾಸರಗೋಡು ಜಿಲ್ಲೆಯ 35ಕ್ಕೂ ಅಧಿಕ ಮಹಿಳೆಯರು 21 ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷಿ¾à ಬಾಯಿ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next