Advertisement

ಅಮಾನ್ಯ ನೋಟುಗಳ ಎಣಿಕೆ ಇನ್ನೂ ಮುಗಿದಿಲ್ಲ: ಪಟೇಲ್‌

03:50 AM Jul 13, 2017 | Team Udayavani |

ನವದೆಹಲಿ: ಅಮಾನ್ಯಗೊಂಡು ಆರ್‌ಬಿಐನಲ್ಲಿ ಜಮೆಯಾಗಿರುವ 500 ರೂ. ಮತ್ತು 1 ಸಾವಿರ ರೂ. ನೋಟುಗಳ ಎಣಿಕೆ ಇನ್ನೂ ಮುಗಿದಿಲ್ಲ. ಹೀಗೆಂದು ಆರ್‌ಬಿಐ ಗವರ್ನರ್‌ ಡಾ.ಊರ್ಜಿತ್‌ ಪಟೇಲ್‌ ಹಣಕಾಸು ಖಾತೆಗಾಗಿನ ಸಂಸತ್‌ ಸ್ಥಾಯಿತಿ ಸಮಿತಿಗೆ ಮಾಹಿತಿ ನೀಡಿದ್ದಾರೆ.

Advertisement

ನೋಟುಗಳ ಅಮಾನ್ಯಕ್ಕಿಂತ ಮೊದಲು ದೇಶಾದ್ಯಂತ ಚಲಾವಣೆಯಲ್ಲಿ ಇದ್ದದ್ದು 17.7 ಲಕ್ಷ ಕೋಟಿ ರೂ. ಸದ್ಯ ಅದರ ಪ್ರಮಾಣ 15.4 ಲಕ್ಷ ಕೋಟಿ ಆಗಿದೆ ಎಂದು ಅವರು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಸಮಾಜವಾದಿ ಪಕ್ಷದ ಸಂಸದ ನರೇಶ್‌ ಅಗರ್ವಾಲ್‌ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಯ ಶೇ.25ರಷ್ಟು ಪ್ರಮಾಣವನ್ನು ಕೇವಲ 12 ಮಂದಿ ಕೈಗಾರಿಕೋದ್ಯಮಿಗಳು ಮತ್ತು ಸಂಸ್ಥೆಗಳು ಹೊಂದಿವೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ನೋಟುಗಳ ಅಮಾನ್ಯಕ್ಕೆ ಸಂಬಂಧಿಸಿದಂತೆ ದೇಶದ ಅರ್ಥ ವ್ಯವಸ್ಥೆ ಡಿಜಿಟಲ್‌ ವ್ಯವಸ್ಥೆಗೆ ಹೊರಳುತ್ತಿರುವ ಬಗ್ಗೆ ಸರ್ಕಾರ ವರದಿ ಮಂಡಿಸಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next