Advertisement

ಟ್ವಿಟರಲ್ಲಿ ನಿಯಮ ಬಿಗಿ

11:55 AM Aug 02, 2018 | Harsha Rao |

ಹೊಸದಿಲ್ಲಿ: ಟ್ರೋಲ್‌, ಅವಹೇಳನಕಾರಿಯಾಗಿ ಟ್ವೀಟ್‌ ಮಾಡುವವರ ವಿರುದ್ಧ ಈಗಾಗಲೇ ಕಠಿಣ ನಿಯಮಗಳನ್ನು ಜಾರಿಗೆ ತಂದಿರುವ ಮೈಕ್ರೋ ಬ್ಲಾಗಿಂಗ್‌ ವೆಬ್‌ಸೈಟ್‌ ಟ್ವಿಟರ್‌ ಅದನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ.

Advertisement

ಹೊಸ ನಿಯಮದ ಪ್ರಕಾರ ಟ್ವಿಟರ್‌ನಲ್ಲಿ ನೇರ ಪೆರಿಸ್ಕೋಪ್‌ ( Periscope ) ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ತೆÌàಷಮಯ, ಅಶ್ಲೀಲವಾಗಿ ಕಮೆಂಟ್‌ ಹಾಕುವವರ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಅಂಥವರ ಖಾತೆಗಳನ್ನು ಬ್ಲಾಕ್‌ ಮಾಡಲು ಟ್ವಿಟರ್‌ ಮುಂದಾಗಿದೆ. ಅಂಥವರನ್ನು ಪತ್ತೆ ಹಚ್ಚಲು ಆಕ್ಸ್‌ಫ‌ರ್ಡ್‌ ವಿವಿ, ಆ್ಯಮ್‌ಸ್ಟರ್‌ಡ್ಯಾಂ ವಿವಿಗಳ ಸಂಶೋಧಕರೊಂದಿಗೆ ಕೈಜೋಡಿಸಲು ಮೈಕ್ರೋಬ್ಲಾಗಿಂಗ್‌ ಸಂಸ್ಥೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next