Advertisement

ನೀರವ್‌ರನ್ನು ಮೀರಿಸಿದ ಸ್ಟೆರ್ಲಿಂಗ್‌ ಹಗರಣ

12:11 AM Jul 01, 2019 | Team Udayavani |

ಹೊಸದಿಲ್ಲಿ: ವಡೋದರಾ ಮೂಲದ ಸ್ಟೆರ್ಲಿಂಗ್‌ ಬಯೋಟೆಕ್‌ ಲಿ., ಸಂದೇಸಾರಾ ಗ್ರೂಪ್‌ ಹಾಗೂ ಪ್ರವರ್ತಕರು ಭಾರತೀಯ ಬ್ಯಾಂಕ್‌ಗಳಿಗೆ ಬರೋಬ್ಬರಿ 14,500 ಕೋಟಿ ರೂ.ಗಳ ವಂಚನೆ ಮಾಡಿದ್ದು, ನೀರವ್‌ ಮೋದಿ ಹಾಗೂ ಮೆಹುಲ್‌ ಚೋಕ್ಸಿಯ ಪಿಎನ್‌ಬಿ ಹಗರಣವನ್ನೇ ಮೀರಿಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

Advertisement

ಜಾರಿ ನಿರ್ದೇಶನಾಲಯದ ಹೇಳಿಕೆ ಉಲ್ಲೇಖೀಸಿ ಎಎನ್‌ಐ ಈ ವರದಿ ಮಾಡಿದೆ. 2018ರ ಪಿಎನ್‌ಬಿ ಹಗರಣದಲ್ಲಿ ವಜೊದ್ಯಮಿ ನೀರವ್‌ ಮೋದಿ ಬ್ಯಾಂಕುಗಳಿಗೆ 13,700 ಕೋಟಿ ರೂ. ವಂಚಿಸಿದ್ದಾರೆ. ಸಂದೇಸಾರಾ ಗ್ರೂಪ್‌ನ ಸಾಗರೋತ್ತರ ಕಂಪೆನಿಗಳು ಕೂಡ ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದಿದೆ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಆಂಧ್ರ ಬ್ಯಾಂಕ್‌, ಯೂಕೋ ಬ್ಯಾಂಕ್‌, ಎಸ್‌ಬಿಐ, ಅಲಹಾಬಾದ್‌ ಬ್ಯಾಂಕ್‌ ಹಾಗೂ ಬ್ಯಾಂಕ್‌ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಈ ಸಾಲವನ್ನು ನೀಡಿದೆ. ಈ ಸಾಲ ಹಗರಣ ನಡೆಸುವ ಉದ್ದೇಶ ದಿಂದಲೇ 249 ದೇಶೀಯ ಹಾಗೂ 96 ಸಾಗರೋತ್ತರ ನಕಲಿ ಕಂಪೆನಿಗಳನ್ನು ಸ್ಥಾಪಿಸಲಾಗಿತ್ತು. ಸ್ಟೆರ್ಲಿಂಗ್‌ ಬಯೋಟೆಕ್‌ ಸಂಸ್ಥೆ ಈ ಸಾಲದ ಹಣವನ್ನು ನೈಜೀರಿಯಾದ ತೈಲೋದ್ಯಮಕ್ಕೆ ಹಾಗೂ ತಮ್ಮ ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿತ್ತು ಎಂದೂ ತನಿಖೆ ವೇಳೆ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next