Advertisement

ಪೌರಕಾರ್ಮಿಕರ ಕೊರತೆ ನೀಗಿಸಲು ಕ್ರಮ: ಶಿವಪ್ರಸಾದ್‌

01:31 PM Nov 10, 2019 | Suhan S |

ಹಿರಿಯೂರು: ನಗರದ ಜನಸಂಖ್ಯೆ ಸುಮಾರು 60-70 ಸಾವಿರ ಇದ್ದು, ಇಷ್ಟು ಜನಸಂಖ್ಯೆ ಇರುವ ನಗರಕ್ಕೆ ಕೆಲಸ ನಿರ್ವಹಿಸಲು ಕನಿಷ್ಠ 100 ಜನ ಪೌರಕಾರ್ಮಿಕರ ಅಗತ್ಯವಿದೆ. ಆದರೆ ಇಲ್ಲಿ ಕೇವಲ 29 ಜನ ಕಾಯಂ ನೌಕರರು ಹಾಗೂ 33 ಜನ ದಿನಗೂಲಿ ನೌಕರರು ಇದ್ದಾರೆ. ಕನಿಷ್ಠ ಇನ್ನೂ 38 ಕಾರ್ಮಿಕರ ಅವಶ್ಯಕತೆ ಇದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ನಗರಸಭೆ ನೂತನ ಪೌರಾಯುಕ್ತ ಶಿವಪ್ರಸಾದ್‌ ಹೇಳಿದರು.

Advertisement

ನಗರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ಹಿಂದಿನ ಪೌರಾಯುಕ್ತ ಎಚ್‌. ಮಹಾಂತೇಶ್‌ ಜನಪರ ಕೆಲಸಗಳ ಮೂಲಕ ನಗರಸಭೆಗೆ ಉತ್ತಮ ಹೆಸರಯು ತಂದಿದ್ದಾರೆ. ನಾನು ಕೂಡ ಅವರ ದಾರಿಯಲ್ಲೇ ಸಾಗುವ ಮೂಲಕ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ಹೆಚ್ಚು ಗಮನ ಹರಿಸುತ್ತೇನೆ. ಈ ಮೂಲಕ ಉತ್ತಮ ಕೆಲಸ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇನೆ ಎಂದರು.

ನಗರದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ನನ್ನ ಗಮನಕ್ಕೆ ತಂದರೆಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ನಗರದ33 ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ಪರಿಸರ ನಿರ್ಮಾಣ ಹಾಗೂ ಸ್ವತ್ಛತೆಗೆ ಅದ್ಯತೆ ನೀಡಿ ಕೆಲಸ ಮಾಡುತ್ತೇನೆ ನಗರಸಭೆಯಿಂದ ಸಾರ್ವಜನಿಕರ ಯಾವುದೇ ಕೆಲಸಗಳಿಗೆ ತೊಂದರೆಯಾಗದಂತೆ ನಿಗಾ ವಹಿಸುತ್ತೇನೆ. ನನ್ನ ಅವಧಿಯಲ್ಲಿ ಶಕ್ತಿಮೀರಿ ಕೆಲಸ ಮಾಡುತ್ತೇನೆ. ನಾಗರಿಕರಿಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next