ಸಂಡೂರು: ಬಂಜಾರ ಸಮಾಜ ಸೌಲಭ್ಯಗಳ ವಂಚಿತ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂಥ ಸಮಾಜವಾಗಿದ್ದು, ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಸಂಡೂರು ತಾಲೂಕು ಕರ್ನಾಟಕ ಬಂಜಾರ ರಕ್ಷಣಾವೇದಿಕೆ ಕಾರ್ಯನಿರ್ವಹಿಸಲಿ ಎಂದು ಶಾಸಕ ಈ. ತುಕರಾಂ ತಿಳಿಸಿದರು.
ಅವರು ಪಟ್ಟಣದ ವಾಲ್ಮೀಕಿ ಸಮುದಾಯಭವನದಲ್ಲಿ ಕರ್ನಾಟಕ ಬಂಜಾರ ರಕ್ಷಣಾವೇದಿಕೆ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ಒಂದು ಕಡೆ ಸೇವಾಲಾಲ್, ಮತ್ತೂಂದು ಕಡೆ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು ಅರ್ಥಪೂರ್ಣವಾದುದು. ಒಬ್ಬರು ವರ ಕೊಟ್ಟರೆ ಮತ್ತೂಬ್ಬರು ಸಂವಿಧಾನದ ಮೂಲಕ ಹಕ್ಕುಗಳನ್ನು ಕೊಟ್ಟಿದ್ದಾರೆ. ಇಂದು ಭೀಮನಾಯ್ಕ, ಪರಮೇಶ್ವರನಾಯ್ಕ, ನಾನು ಶಾಸಕರಾಗಿದ್ದೇವೆ ಅಂದರೆ ಸಂವಿಧಾನ ನೀಡಿದ ಮೀಸಲಾತಿಯಿಂದ, ಆದ್ದರಿಂದ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಕಡ್ಡಾಯವಾಗಿ ಶಿಕ್ಷಣ ಪಡೆಯಿರಿ. ಅದಕ್ಕೆ ಬೇಕಾದ ಎಲ್ಲ ರೀತಿ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧನಿದ್ದೇನೆ, ಈಗಾಗಲೇ ನಿಮ್ಮ ಕಚೇರಿಗೆ ಬೇಕಾದ ಕಂಪ್ಯೂಟರ್ ವ್ಯವಸ್ಥೆಯನ್ನು ನೀಡಿ ಈ ಗ್ರಂಥಾಲಯದ ಮೂಲಕ ಉತ್ತಮ ತರಬೇತಿಗಳನ್ನು ಪಡೆದು ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯವಾಗುತ್ತದೆ ಎಂದರು.
ರಾಜ್ಯಾಧ್ಯಕ್ಷ ಕೆ.ಡಿ.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ತಾಲೂಕು ಘಟಕವನ್ನು ಪ್ರಾರಂಭಿಸುವ ಮೂಲಕ ಪ್ರತಿಯೊಂದು ತಾಂಡಾದಿಂದಲೂ ಸಹ ಪ್ರಗತಿಯನ್ನು ಸಾಧಿಸಬೇಕು. ಉತ್ತಮ ಪ್ರಜೆಗಳಾಗಬೇಕು, ಇನ್ನೂ ಸಹ ನಮ್ಮ ಜನತೆ ಕಟ್ಟಿಗೆ ಮಾರಿ ಬದುಕನ್ನು ಸಾಗಿಸುತ್ತಿದ್ದಾರೆ. ಅದೂ ಕಷ್ಟವಾಗಿದೆ. ಆದ್ದರಿಂದ ಶಿಕ್ಷಣ ಪಡೆದು ಮುಂದೆ ಬರಬೇಕೆಂದರು.
ಶಿವಪ್ರಕಾಶ್ ಮಹಾರಾಜ್ ಸ್ವಾಮಿ ಕೊಟ್ಟೂರು ಹಾಗೂ ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಗೌರವಾಧ್ಯಕ್ಷರಾಗಿ ಲೋಕೇಶನಾಯ್ಕ, ಅಧ್ಯಕ್ಷರಾಗಿ ರಾಮುನಾಯ್ಕ, ಎಫ್. ಎಚ್., ಉಪಾಧ್ಯಕ್ಷರಾಗಿ ನಾಗುನಾಯ್ಕ, ರವಿನಾಯ್ಕ, ಕಾರ್ಯಾಧ್ಯಕ್ಷರಾಗಿ ಎಫ್.ಕೆ. ವಸಂತನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಅರ್.ಟಿ., ಖಜಾಂಚಿಯಾಗಿ ಅಶೋಕ್‌ಕುಮಾರ್ ನಾಯ್ಕ. ಡಿ., ಕಾನೂನು ಸಲಹೆಗಾರರಾಗಿ ರಾಮಾ ನಾಯ್ಕ ಸಿ., ಪದಾಧಿ ಕಾರಿಗಳಾಗಿ ಬಿ. ರಾಮಾನಾಯ್ಕ, ಭೀಮನಾಯ್ಕ, ಸಿ. ಸುನೀಲ್ ನಾಯ್ಕ, ಪಾರುಬಾಯಿ, ಸಂತೋಷ್ ನಾಯ್ಕ, ಎಚ್.ಎಸ್ .ಬಾಲರಾಜ್ ನಾಯ್ಕ, ಯುವಘಟಕದ ಅಧ್ಯಕ್ಷರಾಗಿ ಡಿ. ಅಶೋಕ ನಾಯ್ಕ, ಕುಬೇರ್‌ನಾಯ್ಕ ಅವರುಗಳನ್ನು ಆಯ್ಕೆಮಾಡಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಬಾಯಿ ಪುಟ್ಟನಾಯ್ಕ ನೃತ್ಯ ಪ್ರದರ್ಶಿಸಿದರು. ರಾಜ್ಯ ಉಪಾಧ್ಯಕ್ಷ ರಾಮುನಾಯ್ಕ ಮಾತನಾಡಿದರು. ಆರ್.ವೆಂಕಟೇಶ್ ನಾಯ್ಕ ರಾಜ್ಯ ಗೌರವಾಧ್ಯಕ್ಷರು, ಎನ್. ಆರ್. ರಮೇಶ್ ಜಿಲ್ಲಾ ಗೌರವಾಧ್ಯಕ್ಷರು, ರವಿನಾಯ್ಕ ಜಿಲ್ಲಾಧ್ಯಕ್ಷರು, ಉಮೇಶ್ ನಾಯ್ಕ ವಕೀಲರು, ಕಾರ್ತಿಕನಾಯ್ಕ ಮಾತನಾಡಿದರು. ಅನಿಲ್‌ನಾಯ್ಕ, ನಾಲ್ಕು ತಾಂಡಾಗಳ ಎಲ್ಲ ಕಾರಬಾರಿ, ಡಾವ್ ಪೂಜಾರಿಗಳು ಇದ್ದರು.