Advertisement

ಕನ್ನಡದ ಬಗ್ಗೆ ಮಲತಾಯಿ ಧೋರಣೆ: ಜಿ.ಸಿ.ಚಂದ್ರಶೇಖರ್‌

08:05 PM Dec 10, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಕನ್ನಡ ಭಾಷೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ನ ಜಿ.ಸಿ. ಚಂದ್ರಶೇಖರ್‌ ಆರೋಪಿಸಿದ್ದಾರೆ.

Advertisement

“ಕೇಂದ್ರ ಸರ್ಕಾರ, ಸಂಸ್ಕೃತಕ್ಕೆ ಕೊಡುವಷ್ಟು ಒತ್ತಾಸೆಯನ್ನು ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ನೀಡುತ್ತಿಲ್ಲ. ಇನ್ನು ಮುಂದೆ, ಆಯಾ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಜನರೆಷ್ಟಿದ್ದಾರೆ ಎಂದು ಆಧರಿಸಿ ಆಯಾ ಭಾಷೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಈ ಅನುದಾನವನ್ನು ಪ್ರತಿವರ್ಷದ ಬಜೆಟ್‌ನಲ್ಲೇ ಘೋಷಿಸಬೇಕು” ಎಂದು ಕೇಂದ್ರವನ್ನು ಆಗ್ರಹಿಸಿದರು.

ಇದನ್ನೂ ಓದಿ:ದೇಶದಲ್ಲಿ 25 ಒಮಿಕ್ರಾನ್ ಪ್ರಕರಣಗಳು : ಮಾಸ್ಕ್ ಗಳ ಬಳಕೆ ಕಡಿಮೆ;ಎಚ್ಚರಿಕೆ

“ಮನೋಶಾಸ್ತ್ರ ಅಧ್ಯಯನಕ್ಕೆ ಹೆಚ್ಚು ಅವಕಾಶ ಸಿಗಲಿ’
ರಾಜ್ಯಸಭೆಯ ಕಲಾಪದಲ್ಲಿ ಮಾತನಾಡಿದ ರಾಜ್ಯದ ಮತ್ತೊಬ್ಬ ಸಂಸದ, ಬಿಜೆಪಿಯ ಕೆ.ಸಿ.ರಾಮಮೂರ್ತಿ, “ಇಂದಿನ ಕಾಲಘಟ್ಟದಲ್ಲಿ ಮಾನಸಿಕ ಆರೋಗ್ಯ ಎಂಬುದು ತುಂಬಾ ಅವಶ್ಯಕತೆಯಾಗಿದೆ. ಆದರೆ, ನಾವ್ಯಾರೂ ಇದಕ್ಕೆ ಗಮನ ಕೊಡುತ್ತಿಲ್ಲ. ಮುಖ್ಯವಾಗಿ ಯುವಪೀಳಿಗೆಗೆ ಇದರ ಅವಶ್ಯಕತೆ ಇದು ಹೆಚ್ಚಾಗಿ ಅಗತ್ಯವಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮನೋಶಾಸ್ತ್ರವನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next