Advertisement
ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕೆರೋಸಿಸ್ ಎಂಬ ಕಾಯಿಲೆಗೆ ತುತ್ತಾಗಿ, ನರಕೋಶದ ತೀವ್ರ ಸಮಸ್ಯೆಗೆ ತುತ್ತಾದ ಹಾಕಿಂಗ್, ತನ್ನೆಲ್ಲ ದೈಹಿಕ ನ್ಯೂನತೆಗಳನ್ನು ಬದಿಗೊತ್ತಿಯೂ, ವೀಲ್‌ಚೇರ್‌ಗೆ ಅಂಟಿಕೊಂಡೇ ಸಾಪೇಕ್ಷ ಸಿದ್ಧಾಂತದ ಚೌಕಟ್ಟಿನಲ್ಲಿ ನಿರಂತರ ಸಂಶೋಧನೆ ನಡೆಸಿದರು. ಕಪ್ಪು ಕುಳಿಗಳ ರಹಸ್ಯ ಬೇದಿಸಿದ ಅವರ “ಎ ಬ್ರಿಫ್ ಹಿಸ್ಟರಿ ಆಫ್ ಟೈಮ್’, ವಿಜ್ಞಾನ ಲೋಕದಲ್ಲಿಯೇ ಒಂದು ಮೈಲುಗಲ್ಲು. ಹಾಕಿಂಗ್ ಬದುಕು, ಸಾಧನೆ, ಕೊಡುಗೆಗಳ ಕುರಿತಾಗಿ, ಪ್ರಶಾಂತ ಸೊರಟೂರ ಎಂಬವರು ಉಪನ್ಯಾಸ ನೀಡಲಿದ್ದಾರೆ.
ಎಲ್ಲಿ?: ಮುನ್ನೋಟ ಮಳಿಗೆ, ಡಿವಿಜಿ ರಸ್ತೆ, ಬಸವನಗುಡಿ
ಪ್ರವೇಶ: ಉಚಿತ