Advertisement

ವಿಜ್ಞಾನ ಸಂತ ಹಾಕಿಂಗ್‌ ಇನ್ನಿಲ್ಲ

06:00 AM Mar 15, 2018 | |

ಲಂಡನ್‌: ವಿಜ್ಞಾನಕ್ಕಾಗಿಯೇ ತನ್ನ ಇಡೀ ಜೀವನ ಮುಡಿಪಾಗಿಟ್ಟು,  ಮೇಧಾವಿಗಳಾದ ಸರ್‌ ಐಸಾಕ್‌  ನ್ಯೂಟನ್‌, ಆಲ್ಬರ್ಟ್‌ ಐನ್‌ಸ್ಟೆನ್‌ರ  ಸಾಲಿನಲ್ಲಿ ಗುರುತಿಸಿ ಕೊಂಡಿದ್ದ “ವಿಜ್ಞಾನ ಸಂತ’, ಸೈದ್ಧಾಂತಿಕ ಭೌತಶಾಸ್ತ್ರಜ್ಞ ಸ್ಟೀಫ‌ನ್‌ ಹಾಕಿಂಗ್‌ (76), ಬುಧವಾರ ಕೇಂಬ್ರಿ ಡ್ಜ್ ನಲ್ಲಿನ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಐನ್‌ಸ್ಟೆ „ನ್‌ ಅವರ 139ನೇ ಹುಟ್ಟು ಹಬ್ಬದಂದೇ ಅವರು ವಿಧಿವಶ ರಾಗಿರುವುದು ವಿಪರ್ಯಾಸ.

Advertisement

ಈ ಬಗ್ಗೆ ಅವರ ಮಕ್ಕಳಾದ‌ ಲೂಸಿ, ರಾಬರ್ಟ್‌ ಹಾಗೂ ಟಿಮ್‌ ಪ್ರಕಟನೆ ನೀಡಿ “ಮಹಾ ವಿಜ್ಞಾನಿ, ಪ್ರತಿಭಾನ್ವಿತ ವ್ಯಕ್ತಿ ಯನ್ನು ಕಳೆದುಕೊಂಡಿದ್ದೇವೆ. ವಿಜ್ಞಾನ ಲೋಕಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯವಾಗಿರಲಿದೆ’ ಎಂದಿದ್ದಾರೆ.

ಬಾಹ್ಯಾಕಾಶದಲ್ಲಿ ಗ್ರಹಗಳು, ಸೌರ ಮಂಡಲಗಳು, ಜೀವಿಗಳ ಸೃಷ್ಟಿಯ ಬಗ್ಗೆ ಶತಮಾನಗಳಿಂದಲೂ ವಿಜ್ಞಾನಿಗಳ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪರಿಕಲ್ಪನೆಗಳಾದ ಬಿಗ್‌ ಬ್ಯಾಗ್‌ (ಮಹಾಸ್ಫೋಟ) ಸಿದ್ಧಾಂತ, ಬ್ಲಾ éಕ್‌ ಹೋಲ್‌ (ಕೃಷ್ಣ ರಂಧ್ರ) ಸಿದ್ಧಾಂತ, ಸಾಪೇಕ್ಷ (ರಿಲೇಟಿವಿಟಿ) ಸಿದ್ಧಾಂತ ಸಹಿತ ಅನೇಕ ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಲ್ಲದೆ, ಅವನ್ನು ಸರಳವಾಗಿ, ಸ್ಪಷ್ಟವಾಗಿ ವಿವರಿಸಿದ ಹೆಗ್ಗಳಿಕೆ ಅವರದ್ದು. ಅವರ ಇಂಥ ಅನೇಕ ವಿವರಣೆಗಳು ಮುಂದಿನ ಬಾಹ್ಯಾಕಾಶ ಆವಿಷ್ಕಾರಗಳಿಗೆ ನಾಂದಿ ಹಾಡಿವೆ.

ಸಾವು ಗೆದ್ದ ಸಾಧನೆ: ತನ್ನ ದೇಹದ ವೈಕಲ್ಯ ವಿಪರೀತಗಳನ್ನೂ ಮೀರಿ, ಸಾಧನೆಯಲ್ಲಿ ಬ್ರಹ್ಮಾಂಡದೆತ್ತರಕ್ಕೆ ಬೆಳೆದವರು ಸ್ಟೀಫ‌ನ್‌. ತಮ್ಮ 21ನೇ ವಯಸ್ಸಿನಲ್ಲಿಯೇ ಅಮ್ಯೂಟ್ರೋಫಿಕ್‌ ಲ್ಯಾಟೆರಲ್‌ ಸ್ಲೆರೊಸಿಸ್‌ (ಎಎಲ್‌ಎಸ್‌) ಎಂಬ ನರವ್ಯೂಹ ಸಂಬಂಧಿ ಕಾಯಿಲೆಗೆ ತುತ್ತಾಗಿ ಜೀವನದ ಪ್ರತಿ ಕ್ಷಣ ಸಾವಿ ನೊಂದಿಗೆ ಹೋರಾಡುತ್ತಿದ್ದರೂ, ವಿಜ್ಞಾನ ಲೋಕವೇ ಮೆಚ್ಚು ವಂಥ ಸಿದ್ಧಾಂತಗಳನ್ನು ಮಂಡಿಸಿದ ಹೆಗ್ಗಳಿಕೆ ಇವರದ್ದು. 

ತಾನು ಕುಳಿತ ವ್ಹೀಲ್‌ ಚೇರ್‌ನಿಂದಲೇ ಬಾಹ್ಯಾಕಾಶದಲ್ಲಿನ ಜಟಿಲ ತತ್ವಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಅವನ್ನು ವಿಶ್ಲೇಷಿಸಿ, ವಿವರಿಸಿ ಜಗತ್ತಿನ ಮಹಾ ವಿಜ್ಞಾನಿಗಳಿಂದಲೇ ಸೈ ಎನ್ನಿಸಿಕೊಂಡರು. ಹೀಗೆ, ಜಗತ್ತಿನ ಇತರ ವಿಕಲ ಚೇತನರಿಗಷ್ಟೇ ಅಲ್ಲದೆ, ಕೋಟಿಗಟ್ಟಲೆ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿ, “ಬದುಕಿದರೆ ಹೀಗೆ ಬದುಕಬೇಕು’ ಎಂಬ ಜೀವನೋತ್ಸಾಹ ತುಂಬಿದ್ದರು ಸ್ಟೀಫ‌ನ್‌. ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿತ ವಿಶ್ವದ ರಾಜಕೀಯ ಮತ್ತು ವೈಜ್ಞಾನಿಕ ಸಮುದಾಯದ ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next