ಕತಾರ್ ವಿಶ್ವಕಪ್ನ ಮೆಕ್ಸಿಕೊ ಮತ್ತು ಪೋಲೆಂಡ್ ನಡುವಣ ಪಂದ್ಯದಲ್ಲಿ ನಾಲ್ಕನೇ ರೆಫ್ರೀಯಾಗಿ ಫ್ರಾನ್ಸ್ನ ಸ್ಟೆಫಾನೀ ಫ್ರಪಾರ್ಟ್ ಕರ್ತವ್ಯ ನಿರ್ವಹಿಸಿದ್ದಾರೆ.
ಪುರುಷರ ವಿಶ್ವಕಪ್ನಲ್ಲಿ ರೆಫ್ರೀಯಾಗಿ ಕರ್ತವ್ಯ ನಿರ್ವಹಿಸಿದ ಮೊದಲ ವನಿತೆ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.
ಫ್ರಪಾರ್ಟ್ ಅವರಲ್ಲದೇ ರುವಾಂಡದ ಸಲಿಮಾ ಮುಕಾನ್ಸಂಗ ಮತ್ತು ಜಪಾನಿನ ಯಮಶಿತಾ ಯೊಶಿಮಿ ಅವರು ಈ ವಿಶ್ವಕಪ್ ಕೂಟದ ವನಿತಾ ರೆಫ್ರೀಗಳಲ್ಲಿ ಸೇರಿದ್ದಾರೆ.
ಮಾತ್ರವಲ್ಲದೇ ಮೂವರು ಮಹಿಳಾ ಸಹಾಯಕ ರೆಫ್ರೀಗಳು ಕೂಡ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಫ್ರ ಪಾರ್ಟ್ ಈ ಹಿಂದೆ ಮೊದಲ ವನಿತೆಯಾಗಿ 2020ರ ಪುರುಷರ ಚಾಂಪಿಯನ್ಸ್ ಲೀಗ್ನಲ್ಲಿ ರೆಫ್ರೀಯಾಗಿ ಕರ್ತವ್ಯ ನಿರ್ವಹಿಸಿದ್ದರು.
Related Articles
38ರ ಹರೆಯದ ಫ್ರಪಾರ್ಟ್ ಫ್ರೆಂಚ್ ಲೀಗ್ ವನ್ ಮತ್ತು ದ್ವಿತೀಯದರ್ಜೆಯ ಯುರೋಪ ಲೀಗ್ನಲ್ಲೂ ರೆಫ್ರೀಯಾಗಿ ಕರ್ತವ್ಯ ನಿರ್ವಹಿಸಿದ್ದರು.