ಬೆಂಗಳೂರು: ರಾಜ್ಯಕ್ಕೆ 15 ಲಕ್ಷಕ್ಕಿಂತ ಹೆಚ್ಚು ಕೋವಿಡ್ ಲಸಿಕೆ ಕಳುಹಿಸಿದ್ದಾರೆ. ಹತ್ತು ಲಕ್ಷ ಬೆಂಗಳೂರಿಗೆ, ಐದು ಲಕ್ಷ ಬೆಳಗಾವಿಗೆ ರವಾನಿಸಲಾಗುವುದು. ಬೆಂಗಳೂರಿನಲ್ಲಿ ಸೋಂಕು ಕಡಿಮೆ ಆಗುತ್ತಿದೆ ಎಂದು ಆರೋಗ್ಯ ಸಚಿವ ಡಿ. ಸುಧಾಕರ್ ತಿಳಿಸಿದ್ದಾರೆ.
ಭಾನುವಾರ (4-3-2021) ಪ್ರಧಾನಿ ಕೂಡ ಎಂಟು ರಾಜ್ಯಗಳ ಜೊತೆ ಸಮಾಲೋಚನೆ ಮಾಡಿದ್ದಾರೆ. ಆಯಾ ಆಯಾ ರಾಜ್ಯಕ್ಕೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನೀಡಿದ್ದಾರೆ. ಸೋಂಕು ಜಾಸ್ತಿ ಆದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಮೇ ಅಂತ್ಯದವರೆಗೂ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೆ 6.5 ಸಾವಿರ ಸೋಂಕು ಬರಬಹುದು ಎಂದು ತಜ್ಞರು ಹೇಳಿದ್ದಾರೆ. ತಜ್ಞರ ಹೇಳಿಕೆಯನ್ನು ಪೇಪರ್ ನಲ್ಲಿ ಓದಿದ್ದೇನೆ.
ಇದನ್ನೂ ಓದಿ: ಮುಂಬಯಿ ಷೇರುಪೇಟೆ ಸೂಚ್ಯಂಕ 400 ಅಂಕ ಕುಸಿತ, 14,800ಕ್ಕೆ ಕುಸಿದ ನಿಫ್ಟಿ
ವಿಕ್ಟೋರಿಯಾ, ಬೋರಿಂಗ್ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಹೆಚ್ಚು ಮಾಡಬೇಕು. ಮುಂದಿನ ದಿನಗಳಲ್ಲಿ ಬೆಡ್ ಗಳನ್ನು ಹೆಚ್ಚು ಮೀಸಲಿಡಬೇಕಾಗುತ್ತದೆ. ಸಿನಿಮಾ, ಜಿಮ್ ಗಳಿಗೆ ಮುಖ್ಯಮಂತ್ರಿಗಳು ಅವಕಾಶ ನೀಡಿದ್ದಾರೆ. ಸಿನಿಮಾ ಟಿಕೆಟ್ ಅಡ್ವಾನ್ಸ್ ಬುಕ್ ಆಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಮಾನವೀಯ ದೃಷ್ಟಿಯಿಂದ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿನಿಮಾದವರು ಸಹ ಸಹಕಾರ ಕೇಳಿದ್ದಾರೆ. ಮುಖ್ಯಮಂತ್ರಿಗಳಿಗೂ ಸಾಕಷ್ಟು ಒತ್ತಡ ಇರುತ್ತವೆ ಎಂದು ಹೇಳಿದರು.
ಜನರು ಸಹಕಾರ ನೀಡಬೇಕು. ಕೋವಿಡ್ ತಕ್ಷಣ ಹೆಚ್ಚಾದಾಗ ಸರ್ಕಾರಕ್ಕೆ ಬೇರೆ ದಾರಿ ಇರುವುದಿಲ್ಲ. ಹಂತ ಹಂತವಾಗಿ ಒಂದೊಂದು ಚಟುವಟಿಕೆ ನಿಲ್ಲಿಸಬೇಕಾಗುತ್ತದೆ.
ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ಗಮನಿಸಿಲ್ಲ. ನಾನು ನನ್ನ ಕಾರ್ಯದಲ್ಲಿ ಬ್ಯುಸಿ ಇದ್ದೇನೆ. ಕೋವಿಡ್ ತಡೆಗಟ್ಟಲು ಶ್ರಮ ಹಾಹಾಕುತ್ತಿದ್ದೇನೆ. ಅದಕ್ಕೆ ಸಮಯ ಸಾಲುತ್ತಿಲ್ಲ ಎಂದು ಸುಧಾಕರ್ ತಿಳಿಸಿದರು.
ಇದನ್ನೂ ಓದಿ: ದೇಶದಲ್ಲಿ 7.41 ಲಕ್ಷ ದಾಟಿದ ಸಕ್ರಿಯ ಕೋವಿಡ್ ಪ್ರಕರಣ: ಸಾವಿನ ಸಂಖ್ಯೆ 1.65ಲಕ್ಷಕ್ಕೆ ಏರಿಕೆ