ದ್ವಿತೀಯ ಪಿಯುಸಿ ಮಕ್ಕಳು ಈಗಾಗಲೇ 5 ವಿಷಯಗಳ ಮೇಲೆ ಪರೀಕ್ಷೆ ಬರೆದಿದ್ದಾರೆ. ಬಾಕಿ ಇರುವ ಇಂಗ್ಲಿಷ್ ಪರೀಕ್ಷೆ ಮುಂದಕ್ಕೆ ಹೋಗುತ್ತಿದೆ. ಪರಿಸ್ಥಿತಿ ಹೀಗೆಯೇ ಇದ್ದರೆ, ಈ 5 ಸಬ್ಜೆಕ್ಟ್ ಗಳ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಫಲಿತಾಂಶ ಘೋಷಿಸಲು ಸಾಧ್ಯವೇ?
Advertisement
ಇಲ್ಲ, ಹಾಗೆ ಫಲಿತಾಂಶ ಘೋಷಿಸಲು ಬರುವುದಿಲ್ಲ. ಬೇರೆ ಸಣ್ಣಪುಟ್ಟ ಸಬ್ಜೆಕ್ಟ್ ಆಗಿದ್ದರೆ, 5 ವಿಷಯಗಳ ಅಂಕ ಆಧರಿಸಿ, ಫಲಿತಾಂಶ ನೀಡಬಹುದಿತ್ತು. ಇಂಗ್ಲಿಷ್ ಇಂದು ಕಾಲೇಜು ಹಂತದ ಶಿಕ್ಷಣದಲ್ಲಿ ಬಹುಮುಖ್ಯ ಪಠ್ಯವಿಷಯ. ವೈದ್ಯ ಮತ್ತು ದಂತವೈದ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗಳಿಗೂ (ನೀಟ್) ಇಂಗ್ಲಿಷ್ ಸಬ್ಜೆಕ್ಟ್ ನ ಅಂಕಗಳೇ ಮುಖ್ಯವಾಗಿರುತ್ತವೆ. ಪಿಯುಸಿ ವಿದ್ಯಾರ್ಥಿಗಳ ಪೋಷಕರು ಅನಗತ್ಯ ಚಿಂತಿಸಬೇಕಾಗಿಲ್ಲ. ಸದ್ಯದ ಕೋವಿಡ್-19 ದುಃಸ್ಥಿತಿಯಿಂದ ಒಂದು ತಿಂಗಳು ಮುಂದಕ್ಕೆ ಹೋದರೂ ಆತಂಕ ಪಡಬೇಕಾಗಿಲ್ಲ. ಈ ಸ್ಥಿತಿ ಕೇವಲ ನಮ್ಮದಲ್ಲ, ದೇಶಾದ್ಯಂತ ಇಂಥ ವಾತಾವರಣವಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.● ಕನಗವಲಿ, ಪಿಯು ಇಲಾಖೆ ನಿರ್ದೇಶಕಿ ,
ನಾನು ಒಬ್ಬ ಸಾಫ್ಟ್ ವೇರ್ ಎಂಜಿನಿಯರ್. 38 ವರ್ಷ. ದಪ್ಪಗಿದ್ದೇನೆ. ವರ್ಕ್ ಎಟ್ ಹೋಮ್‌ನಲ್ಲಿದ್ದೇನೆ. 8- 10 ತಾಸು ಕೂತೇ ಕೆಲಸ ಮಾಡುತ್ತೇನೆ. ಕೆಲಸದೊತ್ತಡವೇ ಜಾಸ್ತಿ ಇದೆ. ವಾಕಿಂಗ್‌ಗೂ ಹೋಗುವ ಹಾಗಿಲ್ಲ. ನನ್ನ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಒಂದೇ ಜಾಗದಲ್ಲಿ ಸತತವಾಗಿ 4- 5 ಗಂಟೆ ಕೂರುವುದು, 5 ಸಿಗರೇಟು ಸೇದುವುದು- ಎರಡೂ ಒಂದೇ ರೀತಿಯ ದುಷ್ಪರಿಣಾಮ ಬೀರುವಂಥ ಸಂಗತಿಗಳು. ಇದಕ್ಕೆ “ಸಿಟ್ಟಿಂಗ್ ಡಿಸೀಸ್’ ಎನ್ನುತ್ತಾರೆ. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯಾಘಾತದ ರಿಸ್ಕ್ ಅನ್ನು ಹೆಚ್ಚಿಸುತ್ತದೆ. ಆಗಾಗೆ ವಾಕ್ ಮಾಡಬೇಕು, ಇಲ್ಲವೇ ಕೆಲ ಹೊತ್ತು ನಿಂತರೂ ಅದು ಕೂಡ ವ್ಯಾಯಾಮ ಆಗುತ್ತೆ. ವಾಕಿಂಗ್‌ಗೆ ಹೊರಗೆ ಹೋಗಲು ಅವಕಾಶವಿಲ್ಲ ನಿಜ. ಆದರೆ, ಮನೆಯೊಳಗೇ 30 ನಿಮಿಷ
ವಾಕ್ ಮಾಡಬಹುದು. 1450 ಹೆಜ್ಜೆ ಹಾಕಿದರೆ, ಅದು 1 ಕಿ.ಮೀ.ಗೆ ಸಮ ಆಗುತ್ತೆ. 5 ನಿಮಿಷ ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಯೋಗ, ಪ್ರಾಣಾಯಾಮ ಅನುಸರಿಸಿ. ಟ್ರೆಡ್ ಮಿಲ್‌ನಲ್ಲಿ ವಾಕ್ ಕೂಡ ಸೂಕ್ತ. ನೀವು ಬಹುಮಹಡಿ ಕಟ್ಟಡದಲ್ಲಿದ್ದರೆ, ಲಿಫ್ಟ್ ಬಳಸಬೇಡಿ. ಮೆಟ್ಟಿಲುಗಳಿಂದಲೇ ಹತ್ತಿ. ಹೀಗೆ ಮೆಟ್ಟಿಲು ಹತ್ತುವುದರಿಂದ, ಎದೆಯುರಿ, ಉಬ್ಬಸ ಬಂದರೆ, ಹೃದಯದಲ್ಲಿ ಸಮಸ್ಯೆ ಇರುವುದು ನಿಮ್ಮ ಅರಿವಿಗೆ ಬರುತ್ತದೆ. ಆಹಾರದಲ್ಲಿ “5 ಎಸ್’ ನೀತಿ ಅನುಸರಿಸಿ. 1. ಸಾಲ್ಟ್ (ಉಪ್ಪು), 2. ಶುಗರ್ (ಸಕ್ಕರೆ), ಸ್ಪಿರಿಟ್ (ಮದ್ಯಪಾನ), ಸ್ಮೋಕಿಂಗ್ (ಧೂಮಪಾನ), ಸ್ಟ್ರೆಸ್ (ಒತ್ತಡ)- ಈ ಐದು ಅಂಶಗಳನ್ನು ಆದಷ್ಟು ದೂರ ಮಾಡಲೇಬೇಕು. ಬ್ಲಿಡ್ ಶುಗರ್, ಬ್ಲಿಡ್ ಕೊಲೆಸ್ಟ್ರಾಲ್, ಬ್ಲಿಡ್ ಪ್ರಶರ್, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ- ಈ 5 ಅಂಶಗಳಿಂದ ಮನುಷ್ಯನಿಗೆ ಅಪಾಯವೇ ಹೆಚ್ಚು. ಹಣ, ಅಧಿಕಾರ ಅಥವಾ ಭವಿಷ್ಯದ ವಿಚಾರವೇ ಇದ್ದಿರಬಹುದು, ಇವುಗಳ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡು, ಗುರಿ ತಲುಪುವುದು ನಿಧಾನವಾದಾಗ, ನಿರೀಕ್ಷೆ- ಗುರಿ ನಡುವೆ ಉಂಟಾಗುವ ಸ್ಥಿತಿಯೇ “ಒತ್ತಡ’. ಆಹಾರದಲ್ಲಿ ಉಪ್ಪಿನಂಶ, ಕೊಬ್ಬಿನಂಶ ಕಡಿಮೆ ಮಾಡಿ. ಹಣ್ಣು- ತರಕಾರಿ ಹೆಚ್ಚು ಸೇವಿಸಿ. ಕರಿದ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ. ಕೆಂಪು ಮಾಂಸ ದೂರ ಮಾಡಿ. ಚಿಕನ್, ಫಿಶ್ ಬಳಸಬಹುದು. ಅಗತ್ಯ ಇರುವಷ್ಟು ನಿದ್ದೆ ಮಾಡಿ. ಎನರ್ಜಿ ಡ್ರಿಂಕ್ ಸಹವಾಸಕ್ಕೆ ಹೋಗಬೇಡಿ.
● ಡಾ.ಸಿ.ಎನ್. ಮಂಜುನಾಥ್, ಹೃದ್ರೋಗ ತಜ್ಞ
Related Articles
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಆಟೋ, ಟ್ಯಾಕ್ಸಿ ಚಾಲಕರು ದುಬಾರಿ ಶುಲ್ಕ ಕೇಳುತ್ತಿದ್ದಾರೆ. ಇದಕ್ಕೆ ಪರಿಹಾರವೇನು?
Advertisement
ನೀವು ಸರ್ಕಾರಿ ಆಂಬುಲೆನ್ಸ್‌ಗಾಗಿ ಮನವಿ ಮಾಡಿಕೊಳ್ಳಬಹುದು. ಕೆಲವು ಜಿಲ್ಲೆಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರೂ ಸಹಾಯ ಮಾಡುತ್ತಿದ್ದಾರೆ. ಕೆಲವು ಅರೆ ಸರ್ಕಾರಿ ಸಂಘಟನೆಗಳೂ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಾಯ ಮಾಡುತ್ತಿವೆ. ಇವರಲ್ಲಿ ಯಾರನ್ನಾದರೂ ಸಂಪರ್ಕಿಸಿದರೆ, ನಿಮಗೆ ಪರಿಹಾರ ಸಿಗುತ್ತದೆ.●ಡಾ.ಡಿ.ವಿ. ಗುರುಪ್ರಸಾದ್, ನಿವೃತ್ತ ಡಿಜಿಪಿ ಲಾಕ್ ಡೌನ್ ಅವಧಿಯಲ್ಲಿ ಏನೇ ಸಮಸ್ಯೆ, ಸಂದೇಹಗಳಿದ್ದರೆ ಉದಯವಾಣಿ ಮೂಲಕ ತಜ್ಞರಿಂದ ಉತ್ತರ ಪಡೆಯಲು ನಮಗೆ ವಾಟ್ಸ್‌ಆ್ಯಪ್ ಮಾಡಿ. 8861196369 ಕಳುಹಿಸಬೇಕಾದ ವಾಟ್ಸ್ ಆ್ಯಪ್ ಸಂಖ್ಯೆ ಕುಶಲೋಪರಿ