Advertisement

ಕನ್ನಡಕ್ಕೆ ಬಂದ ಜಾರ್ಖಂಡ್‌ ಹುಡುಗಿ ಸ್ಟೆಫಿ ಪಟೇಲ್

01:58 PM Jul 24, 2022 | Team Udayavani |

ನಟ ವಸಿಷ್ಠ ಸಿಂಹ ಶೀಘ್ರದಲ್ಲಿಯೇ “ಲವ್‌ ಲಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ಸದ್ಯ “ಲವ್‌ ಲಿ’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದೀಗ “ಲವ್‌ ಲಿ’ ಸಿನಿಮಾಕ್ಕೆ ನಾಯಕಿಯ ಎಂಟ್ರಿಯಾಗಿದೆ.

Advertisement

ಹೌದು, “ಲವ್‌ ಲಿ’ ಸಿನಿಮಾದಲ್ಲಿ ವಸಿಷ್ಟ ಸಿಂಹಗೆ ನಾಯಕಿಯಾಗಿ ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್‌ ಜೋಡಿಯಾಗುತ್ತಿದ್ದಾರೆ. ಹಿಂದಿ, ತಮಿಳು ಜೊತೆಗೆ ಕೊರಿಯನ್‌ ಭಾಷೆಯ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳಲ್ಲಿ ಅಭಿನಯಿಸಿದ ಅನುಭವಿರುವ ಸ್ಟೆಫಿ ಪಟೇಲ್‌ “ಲವ್‌ ಲಿ’ ಸಿನಿಮಾದ ಮೂಲಕ ಸ್ಯಾಂಡಲ್‌ ವುಡ್‌ಗೆ ನಾಯಕ ನಟಿಯಾಗಿ ಪರಿಚಯವಾಗುತ್ತಿದ್ದಾರೆ.

ಇತ್ತೀಚೆಗಷ್ಟೇ “ಲವ್‌ ಲಿ’ ಚಿತ್ರತಂಡ ಸೇರಿಕೊಂಡಿರುವ ಸ್ಟೆಫಿ ಪಟೇಲ್‌, ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಹೆಸರೇ ಹೇಳುವಂತೆ, “ಲವ್‌ ಲಿ’ ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಕಂ ರೌಡಿಸಂ ಕಥಾಹಂದರದ ಸಿನಿಮಾವಾಗಿದ್ದು, ಚೇತನ್‌ ಕೇಶವ್‌ ಈ ಸಿನಿಮಾಕ್ಕೆ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಎಂ. ಆರ್‌ ರವೀಂದ್ರ ಕುಮಾರ್‌ ನಿರ್ಮಿಸುತ್ತಿರುವ “ಲವ್‌ ಲಿ’ ಸಿನಿಮಾಕ್ಕೆ ಕೆನಡಿ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಒಟ್ಟಾರೆ ಕೆಲ ದಿನಗಳ ಹಿಂದಷ್ಟೇ “ಲವ್‌ ಲಿ’ ಸಿನಿಮಾದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿ ನೋಡುಗರ ಗಮನ ಸೆಳೆಯುತ್ತಿದ್ದು, ಸಿನಿಮಾದಲ್ಲಿ ವಸಿಷ್ಠ ಸಿಂಹ ಜೊತೆ ತೆರೆ ಹಂಚಿಕೊಳ್ಳುವ ನಾಯಕ ನಟಿ ಯಾರು ಎಂಬ ಕುತೂಹಲಕ್ಕೆ ಈಗ ಬ್ರೇಕ್‌ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next