Advertisement

ರಾಜಸ್ಥಾನ್‌ ರಾಯಲ್ಸ್‌ಗೆ ಸ್ಟೇಫ‌ನ್‌ ಜಾನ್ಸ್‌ ಬೌಲಿಂಗ್‌ ಕೋಚ್‌

06:25 AM Dec 01, 2018 | Team Udayavani |

ಜೈಪುರ: ಇಂಗ್ಲೆಂಡ್‌ ಪ್ರಥಮ ದರ್ಜೆ ಕ್ರಿಕೆಟ್‌ ಆಟಗಾರ ಸ್ಟೇಫ‌ನ್‌ ಜಾನ್ಸ್‌ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕ್ರಿಕೆಟ್‌ ಕೂಟದ ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ್‌ ರಾಯಲ್ಸ್‌ ಗೆ ವೇಗದ ಬೌಲಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. 

Advertisement

44 ವರ್ಷದ ಮಾಜಿ ಆಲ್‌ರೌಂಡರ್‌ 148 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯ ಆಡಿದ್ದಾರೆ. 2 ಶತಕ, 8 ಅರ್ಧಶತಕ ಬಾರಿಸಿರುವ ಇವರು ಒಟ್ಟಾರೆ 387 ವಿಕೆಟ್‌ ಕಬಳಿಸಿದ್ದಾರೆ. ಬಿಗ್‌ಬಾಷ್‌ ಟಿ20 ಕ್ರಿಕೆಟ್‌ ಕೂಟದ ವೇಳೆ ಇಂಗ್ಲೆಂಡ್‌ನ‌ ಖ್ಯಾತ ಆಟಗಾರ ಸ್ಟುವರ್ಟ್‌ ಬ್ರಾಡ್‌, ಡನ್‌ ಕ್ರಿಶ್ಚಿಯನ್‌ ಜತೆಗೆ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಒಟ್ಟಾರೆ 14 ವರ್ಷದ ಕ್ರಿಕೆಟ್‌ ಅನುಭವ ಇವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next