Advertisement

ಕೋಟ್ಯಧಿಪತಿ ಕಚೋರಿ ವ್ಯಾಪಾರಿಗೆ ಐಟಿ ಗಾಳ

01:19 AM Jun 26, 2019 | mahesh |

ಅಲಿಗಡ: ವಾರ್ಷಿಕವಾಗಿ ಏನಿಲ್ಲವೆಂದರೂ, 60ರಿಂದ 70 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದ ಅಲಿಗಡ ನಗರದ ಕಚೋರಿ ವ್ಯಾಪಾರಿಯ ಮನೆ ಹಾಗೂ ಅಂಗಡಿಯಲ್ಲಿ ಶೋಧ ನಡೆಸಿರುವ ಐಟಿ ಅಧಿಕಾರಿಗಳು ಆತನಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

Advertisement

ಶೋಧಕ್ಕೂ ಮೊದಲು ಕೆಲ ದಿನ, ಅಲಿಗಡದ ಸೀಮಾ ಚಿತ್ರಮಂದಿರದ ಬಳಿಯಿರುವ ಈತನ ಅಂಗಡಿಯನ್ನು ತುಸು ಹತ್ತಿರದಲ್ಲೇ ನಿಂತು ಗಮನಿಸುತ್ತಿದ್ದ ಐಟಿ ಅಧಿಕಾರಿಗಳು ವ್ಯವಹಾರದ ಲೆಕ್ಕ ಹಾಕಿದ್ದರು. ನಿಖರ ಲೆಕ್ಕದಲ್ಲಿ ಈತನ ವಾರ್ಷಿಕ ಆದಾಯ 1 ಕೋಟಿ ರೂ.ಗಳಿಗೂ ಮೀರುವಂತಿತ್ತು. ಇಂಥ ವರ್ತಕರು ತಮ್ಮ ವ್ಯವಹಾರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಮಾ. 31ರ ಗಡುವು ನೀಡಿದ್ದರೂ ಅದನ್ನು ಲೆಕ್ಕಿಸದೇ ಇದ್ದಿದ್ದರಿಂದ ಆ ವ್ಯಾಪಾರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next